Friday, November 22, 2024
Homeಬೆಂಗಳೂರುಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ 'ಅಸ್ತ್ರಂ' ಪ್ರಯೋಗ

ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ‘ಅಸ್ತ್ರಂ’ ಪ್ರಯೋಗ

ಬೆಂಗಳೂರು,ಜ.13- ನಗರದ ವಾಹನ ಸವಾರರಿಗೆ ಮತ್ತು ಸಂಚಾರಿ ಪೊಲೀಸರಿಗೆ ತಲೆ ನೋವಾಗಿದ್ದ ಸಂಚಾರ ದಟ್ಟಣೆ ನಿರ್ವಹಣೆಗೆ ನಗರ ಸಂಚಾರಿ ಪೊಲೀಸರು ಅಸ್ತ್ರಂ(ಆಕ್ಷನಬಲ್ ಇಂಟಲಿಜೆನ್ಸ್ ಫಾರ್ ಸಸ್ಟೈನಬಲ್ ಟ್ರಾಫಿಕ್ ಮ್ಯಾನೇಜನ್ಮೆಂಟ್) ಎಂಬ ಉಪಕ್ರಮವನ್ನು ಜಾರಿಗೆ ತರಲು ಮುಂದಾಗಿದ್ದಾರೆ.

ಅಸ್ತ್ರಂನಲ್ಲಿ ಕನ್ವೆಷನ್ ಅಲರ್ಟ್‍ಗಳು, ಬಿಒಟಿ ಆಧಾರಿತ ಇನ್ಸಿಡೆಂಟ್ ರಿಪೋರ್ಟಿಂಗ್ ಹಾಗೂ ಇವೆಂಟ್ ಮ್ಯಾನೇಜ್‍ಮೆಂಟ್ ಮತ್ತು ಡ್ಯಾಶ್‍ಬೋರ್ಡ್ ಅನಾಲಿಟಿಕ್ಸ್‍ಗಳನ್ನು ಬಳಸಿಕೊಂಡು ದಟ್ಟಣೆಯ ಉದ್ದ, ವಾಹನಗಳ ಸಂಖ್ಯೆ, ವಾಹನಗಳ ವಿಧ, ನೈಜ್ಯ ಸಮಯದಲ್ಲಿ ದತ್ತಾಂಶವನ್ನು ಪಡೆದು ಸುಗಮ ಸಂಚಾರದ ವ್ಯವಸ್ಥೆ ಮಾಡಿಕೊಡಲಿದೆ.

Bengaluru, it’s time to take the lead in road safety! Scan the QR code, discover the change, and pledge to transform our streets. Every pledge counts, let’s build a safer future #BeARoadSafetySuperhero #NRSM2024
ರಸ್ತೆಯನ್ನು ಸುರಕ್ಷೆ ಮಾಡುವಲ್ಲಿ ಮುಂದಿರಬೇಕಾದ ಸಮಯ ಇದು! ಕ್ಯೂ-ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಬದಲಾವಣೆಯನ್ನು ಕಂಡುಕೊಳ್ಳಿ ಮತ್ತು ನಮ್ಮ ಬೀದಿಗಳನ್ನು ಪರಿವರ್ತಿಸುವ ಪ್ರತಿಜ್ಞೆ ಮಾಡಿ. ಪ್ರತಿಯೊಂದು ಪ್ರತಿಜ್ಞೆಯೂ ಮಹತ್ವದ್ದಾಗಿದೆ, ಸುರಕ್ಷಿತ ಭವಿಷ್ಯವನ್ನು ನಿರ್ಮಿಸೋಣ

ಕನ್ವೆಷನ್ ಅಲರ್ಟ್: ಇದರ ಮೂಲಕ ನೈಜ್ಯ ಕ್ಷಣದ ಸಂಚಾರ ದಟ್ಟಣೆ ಕುರಿತು ಆ ಠಾಣೆಯ ಠಾಣಾಧಿಕಾರಿಗೆ ಪ್ರತಿ 15 ನಿಮಿಷಕ್ಕೊಮ್ಮೆ ಎಚ್ಚರಿಕೆ ಸಂದೇಶ ಹೋಗುತ್ತದೆ. ಇದನ್ನು ಇ- ಅಟೆಂಡೆನ್ಸ್ ಆ್ಯಪ್‍ನ ಜೊತೆ ಸಂಯೋಜಿಸಲಾಗಿದ್ದು, ಟ್ರಾಫಿಕ್ ಜಂಕ್ಷನ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.

ಡಾಶ್‍ಬೋರ್ಡ್ ಅನಾಲಿಟಿಕ್ಸ್: ಸಂಚಾರ ದಟ್ಟಣೆ ಉದ್ದ, ವಾಹನಗಳ ಸಂಖ್ಯೆ, ವಾಹನಗಳ ವಿಧ ಇತ್ಯಾದಿ ನೈಜ್ಯ ಕ್ಷಣ ಮಾಹಿತಿಗಳನ್ನು ಆಧರಿಸಿ ಸುಗಮ ಸಂಚಾರಕ್ಕೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಇದು ಸಹಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ ಬಗ್ಗೆ ಪ್ರಿಡೆಕ್ಟಿವ್ ಅನಾಲಿಸಿಸ್ ಮಾಡಿ ಮುಂದಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು.

ಆಂಬ್ಯುಲೆನ್ಸ್ ಆ್ಯಪ್: ಆ್ಯಂಬುಲೆನ್ಸ್‍ಗಳ ಸುಗಮ ಸಂಚಾರಕ್ಕೆ ಸಂಚಾರಿ ನಿರ್ವಹಣಾ ಕೇಂದ್ರದಲ್ಲಿ ನೊಂದಾಯಿಸಿಕೊಂಡ ಆ್ಯಂಬುಲೆನ್ಸ್‍ಗಳು ಪ್ರಯಾಣ ಆರಂಭಿಸುವ ಸ್ಥಳ ಮತ್ತು ತಲುಪಬೇಕಾದ ಸ್ಥಳವನ್ನು ತಿಳಿಸಿದರೆ ಅದರ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯೊಂದಿಗೆ 120 ಸೆಕೆಂಡ್ ಮೀರಿದ ಅವಗೆ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡರೆ ಆಗ ಎಸ್‍ಒಎಸ್ ಬಟನ್ ಆ್ಯಕ್ಟಿವೇಟ್ ಆಗಿ ಅಲ್ಲಿನ ಸಂಚಾರ ದಟ್ಟಣೆ ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ರವಾನೆಯಾಗುತ್ತದೆ.

ಡ್ರೋಣ್ ಕ್ಯಾಮೆರಾ: ನಗರ ಸಂಚಾರಿ ಪೆÇಲೀಸರು ಈಗಾಗಲೇ 10 ಕಡೆ ಡ್ರೋಣ್ ಕ್ಯಾಮೆರಾ ಬಳಸುತ್ತಿದ್ದು, ಬೆಳಗಿನ ಮತ್ತು ಸಂಜೆಯ ಪೀಕ್ ಅವರ್‍ಗಳಲ್ಲಿ ಸಂಚಾರ ನಿರ್ವಹಣೆ ಮಾಡುತ್ತಿದ್ದಾರೆ. ಈ ಕ್ಯಾಮೆರಾದಿಂದ ಬರುವ ದೃಶ್ಯಗಳನ್ನು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನೇರಪ್ರಸಾರವಾಗುತ್ತಿದ್ದು, ರಸ್ತೆಗಳಲ್ಲಿ ಅಪಘಾತ ಅಥವಾ ಇತರೆ ಘಟನೆಗಳು ನಡೆದಾಗ ತಕ್ಷಣ ಅಲ್ಲಿಗೆ ಪೊಲೀಸರು ಹೋಗಲು ನೆರವು ಮಾಡುತ್ತದೆ.

ಈವೆಂಟ್ ಮ್ಯಾನೇಜ್ಮೆಂಟ್: ನಗರದ ವಿವಿಧ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಅವುಗಳಿಂದ ಉಂಟಾಗುವ ಸಂಚಾರಿ ಬದಲಾವಣೆ ಅಥವಾ ದಟ್ಟಣೆ ಸಮಸ್ಯೆಯನ್ನು ಅರ್ಥೈ ಸಿಕೊಂಡು ಅವುಗಳನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

ಬಿಓಟಿ ಬಳಕೆ ಮುಖಾಂತರ ಇನ್ಸಿಡೆಂಟ್ ರಿಪೋರ್ಟಿಂಗ್: ರಸ್ತೆಗಳಲ್ಲಿ ಉಂಟಾಗುವ ಅಪಘಾತ ಮತ್ತು ಇನ್ನಿತರ ಕೃತ್ಯಗಳ ಬಗೆಗೆ ಗೂಗಲ್ ಮ್ಯಾಪ್ ಅಥವಾ ಇನ್ನಿತರ ಮ್ಯಾಪ್‍ಗಳ ಮುಖೇನ ಮಾಹಿತಿಯನ್ನು ಪಡೆದ ಅಕೃತ ಅಧಿಕಾರಿಯಿಂದ ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ನೈಜ್ಯ ಸಮಯದಲ್ಲಿ ತಲುಪಿಸಲು ಸಹಾಯವಾಗುತ್ತದೆ.

RELATED ARTICLES

Latest News