Homeಬೆಂಗಳೂರುನೀರು ಸೋರಿಕೆ ತಡೆಗಟ್ಟಲು AI ಬಳಕೆಗೆ ಮುಂದಾದ ಬೆಂಗಳೂರು ಜಲ ಮಂಡಳಿ

ನೀರು ಸೋರಿಕೆ ತಡೆಗಟ್ಟಲು AI ಬಳಕೆಗೆ ಮುಂದಾದ ಬೆಂಗಳೂರು ಜಲ ಮಂಡಳಿ

Bangalore Water Board to use AI to prevent water leakage

ಬೆಂಗಳೂರು, ಜೂ.2 ನಗರದ ನೀರು ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ರೋಬೋಟಿಕ್‌ ತಂತ್ರಜ್ಞಾನಗಳ ಬಳಕೆಗೆ ಮುಂದಾಗಿದೆ.

ನೀರಿನ ಕಳ್ಳತನ, ಸೋರಿಕೆ ಹಾಗೂ ಆದಾಯ ತಾರದ ನೀರಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಸ್ಮಾರ್ಟ್‌ ಟೆರ್ರಾ ಮತ್ತು ಸೊಲಿನಾಸ್‌‍ ಸ್ಟಾರ್ಟ್‌ ಅಪ್‌ಗಳೊಂದಿಗೆ ಜಂಟಿ ಅಧ್ಯಯನ ನಡೆಸಲು ಜಲಮಂಡಳಿ ಒಪ್ಪಿಗೆ ನೀಡಿದೆ.

ಈ ಯೋಜನೆ ಟೈಟಾನ್‌ ಡಿಸೈನ್‌ ಇಂಪ್ಯಾಕ್ಟ್‌ ಅವಾರ್ಡ್‌್ಸ 2.0ರ ಡೀಪ್‌ ಇಂಪ್ಯಾಕ್ಟ್‌ ಹಂತದಡಿ ಆಯ್ಕೆಯಾಗಿದ್ದು, ಟೈಟಾನ್‌ ಕಂಪನಿಯ ಅನುದಾನದಿಂದ ಜಾರಿಯಾಗಲಿದೆ.
ವಿಲ್ಗ್ರೋ ಇನ್‌ಕ್ಯುಬೇಷನ್‌‍ ಮತ್ತು ವೆಲ್‌ ಲ್ಯಾಬ್‌್ಸ ತಾಂತ್ರಿಕ ಸಹಭಾಗಿಗಳಾಗಿ ಕಾರ್ಯನಿರ್ವಹಿಸಲಿವೆ. ವಿಶೇಷವೆಂದರೆ, ಒಂದು ವರ್ಷದ ಈ ಅಧ್ಯಯನ ಜಲಮಂಡಳಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಶೂನ್ಯ ವೆಚ್ಚದಲ್ಲಿ ನಡೆಯಲಿದೆ.

ಯೋಜನೆಯಡಿ ಎಐ ಆಧಾರಿತ ವಿಶ್ಲೇಷಣೆಯ ಮೂಲಕ ಸೋರಿಕೆ ಸಂಭವಿಸುವ ಅಥವಾ ಅಪಾಯದಲ್ಲಿರುವ ಪೈಪ್‌ಲೈನ್‌ಗಳನ್ನು ಮುಂಚಿತವಾಗಿ ಗುರುತಿಸಲಾಗುತ್ತದೆ. ಸೊಲಿನಾಸ್‌‍ ಸಂಸ್ಥೆ ಪೈಪ್‌ಗಳೊಳಗೆ ವಿಶೇಷ ರೋಬೋಟ್‌ಗಳನ್ನು ಕಳುಹಿಸಿ ತಪಾಸಣೆ ನಡೆಸಲಿದ್ದು, ಸ್ಮಾರ್ಟ್‌ ಟೆರ್ರಾ ಶಬ್ದ ತರಂಗಗಳ ನೆರವಿನಿಂದ ಉತ್ಖನನ ಮಾಡದೆ ಸೋರಿಕೆಯ ನಿಖರ ಸ್ಥಳವನ್ನು ಪತ್ತೆಹಚ್ಚಲಿದೆ.

ಇದರ ಜೊತೆಗೆ ನೀರು ಪೂರೈಕೆ, ಮೀಟರ್‌ಗಳ ಕಾರ್ಯಕ್ಷಮತೆ ಮತ್ತು ಸೋರಿಕೆಯಿಂದಾಗುವ ನಷ್ಟದ ಮೇಲೆ ನಿರಂತರ ನಿಗಾ ಇಡಲು ಈ ತಂತ್ರಜ್ಞಾನ ನೆರವಾಗಲಿದೆ. ಇದರಿಂದ ನೀರಿನ ನಷ್ಟ ಕಡಿಮೆಯಾಗುವುದರೊಂದಿಗೆ ಜಲಮಂಡಳಿಯ ಆದಾಯವೂ ಹೆಚ್ಚುವ ನಿರೀಕ್ಷೆ ಇದೆ.ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿರುವ ಯುವ ಸ್ಟಾರ್ಟ್‌ಅಪ್‌ಗಳಿಗೆ ಜಲಮಂಡಳಿಯ ಮೂಲಸೌಕರ್ಯಗಳನ್ನು ಟೆಸ್ಟ್‌ ಬೆಡ್‌‍ ಆಗಿ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.

ಪ್ರಾಯೋಗಿಕ ಅಧ್ಯಯನಕ್ಕಾಗಿ ಆದ್ಯತೆಯ ವಲಯಗಳನ್ನು ಗುರುತಿಸಿ ಶೀಘ್ರದಲ್ಲೇ ಆರಂಭಿಕ ಸಮೀಕ್ಷೆ ಕೈಗೊಳ್ಳಲಾಗುವುದು. ನಗರದ ನೀರು ವಿತರಣಾ ವ್ಯವಸ್ಥೆಯಲ್ಲಿ ದತ್ತಾಂಶ ಆಧಾರಿತ ವೈಜ್ಞಾನಿಕ ವಿಧಾನಗಳು ಮತ್ತು ಡಿಜಿಟಲ್‌ ವರ್ಕ್‌ಫ್ಲೋಗಳು ಮಹತ್ವದ ಬದಲಾವಣೆ ತರಲಿವೆ. ಇದರಿಂದ ಜಲಮಂಡಳಿಗೆ ಆಗುತ್ತಿರುವ ಆರ್ಥಿಕ ನಷ್ಟ ಕಡಿಮೆಯಾಗುವುದರ ಜೊತೆಗೆ ಪೈಪ್‌ಲೈನ್‌‍ ದೋಷಗಳಿಂದ ನೀರು ಕಲುಷಿತಗೊಳ್ಳುವ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

RELATED ARTICLES

Latest News