Homeರಾಜ್ಯನನ್ನ ರಾಜಕೀಯ ಜೀವನದಲ್ಲಿ ಗಾಂಧಿ ಕುಟುಂಬ ನಿರ್ಣಾಯಕ ಪಾತ್ರ ವಹಿಸಿದೆ : ಡಿಕೆಶಿ

ನನ್ನ ರಾಜಕೀಯ ಜೀವನದಲ್ಲಿ ಗಾಂಧಿ ಕುಟುಂಬ ನಿರ್ಣಾಯಕ ಪಾತ್ರ ವಹಿಸಿದೆ : ಡಿಕೆಶಿ

Gandhi family played a crucial role in my political life: DK Shivakumar

ಬೆಂಗಳೂರು, ಜೂ. 2- ಗಾಂಧಿ ಕುಟುಂಬವು ತಮ ರಾಜಕೀಯ ಜೀವನ ಪಯಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನಾದಿನ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗಾಂಧಿ ಕುಟುಂಬದ ರಾಜೀವ್‌ಗಾಂಧಿಯಿಂದ ಆರಂಭಿಸಿ, ಪ್ರಿಯಾಂಕ ಗಾಂಧಿಯವರಿಗೂ ಪ್ರತಿಯೊಬ್ಬರ ಗುಣಲಕ್ಷಣಗಳು ಹಾಗೂ ತಮ ವೈಯಕ್ತಿಕ ಜೀವನದಲ್ಲಿ ಅವರು ಬೀರಿದ ಪ್ರಭಾವಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

ಗಾಂಧಿ ಕುಟುಂಬ ತಮ ನಾಯಕತ್ವದ ವಿಚಾರವಾಗಿ ಅಷ್ಟೇ ಅಲ್ಲ, ಜೀವನದ ವಿವಿಧ ಹಂತಗಳಲ್ಲಿ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಅಗಾಧವಾದದ್ದು ಎಂದಿದ್ದಾರೆ.ತಾವು ಪದೇ ಪದೇ ರಾಜೀವ್‌ ಗಾಂಧಿಯವರನ್ನು ನೆನಪಿಸಿಕೊಳ್ಳುತ್ತಿದ್ದು, ನನ್ನಲ್ಲಿದ್ದ ಸಾಮರ್ಥ್ಯವನ್ನು ಗುರುತಿಸುವ ಮೂಲಕ, ಒಬ್ಬ ಯುವ ಕಾರ್ಯಕರ್ತನಲ್ಲಿದ್ದ ಸಾಧ್ಯತೆಗಳನ್ನು ಅವರು ಪ್ರಕಟ ಪಡಿಸಿದ್ದರು. ಅವರ ಪ್ರೋತ್ಸಾಹ ನನಗೆ ದೊಡ್ಡ ಕನಸು ಕಾಣುವ ಆತವಿಶ್ವಾಸವನ್ನು ನೀಡಿತು ಹಾಗೂ ಸಾರ್ವಜನಿಕ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡಿತ್ತು ಎಂದಿದ್ದಾರೆ.

ಇತರರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅವರ ನಿರೀಕ್ಷೆಗಳನ್ನೂ ಮೀರಿ ಬೆಳೆಯಲು ಪ್ರೇರೇಪಿಸುವವರೇ ಶ್ರೇಷ್ಠ ನಾಯಕರು. ರಾಜೀವ್‌ ಗಾಂಧಿ ನನ್ನ ವಿಷಯದಲ್ಲೇ ಅದನ್ನೇ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಸೋನಿಯಾ ಗಾಂಧಿಯವರು ನಾಯಕತ್ವದ ಮತ್ತೊಂದು ಮಹತ್ವದ ಪಾಠವನ್ನು ಕಲಿಸಿದರು. ನಿಜವಾದ ನಾಯಕರು ಯಶಸ್ಸಿನ ಕ್ಷಣಗಳಲ್ಲಿ ಮಾತ್ರ ಅಲ್ಲದೇ, ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಪಕ್ಕದಲ್ಲಿ ನಿಂತು ಶಕ್ತಿ, ಧೈರ್ಯ ಮತ್ತು ಅಚಲ ಬೆಂಬಲವನ್ನು ನೀಡುತ್ತಾರೆ. ತಮ ರಾಜಕೀಯ ಪಯಣದ ಸವಾಲಿನ ಹಂತಗಳಲ್ಲಿ ಅವರು ನನ್ನ ಮೇಲೆ ಇಟ್ಟ ವಿಶ್ವಾಸವನ್ನು ನಾನು ಸದಾ ಕೃತಜ್ಞತೆಯಿಂದ ಸರಿಸುತ್ತೇನೆ ಎಂದಿದ್ದಾರೆ.

ರಾಹುಲ್‌ ಗಾಂಧಿ ಅವರು ನಿರಂತರವಾಗಿ ಮಾರ್ಗದರ್ಶನ ಮತ್ತು ಸ್ಫೂರ್ತಿಯ ಮೂಲವಾಗಿದ್ದಾರೆ. ಜನತಾಂತ್ರಿಕ ಮೌಲ್ಯಗಳ ಮೇಲಿನ ಅವರ ನಂಬಿಕೆ, ಎಲ್ಲರ ಮಾತನ್ನು ಆಲಿಸುವ ಗುಣ ಹಾಗೂ ಹೆಚ್ಚು ಸಮಾನತೆ ಮತ್ತು ಸಹಾನುಭೂತಿ ಹೊಂದಿರುವ ಭಾರತದ ಕುರಿತ ಅವರ ದೃಷ್ಟಿಕೋನ ನನ್ನಂತಹ ನಾಯಕರಿಗೆ ನಿರಂತರ ಪ್ರೇರಣೆಯಾಗಿದೆ. ತಮ ಸಾರ್ವಜನಿಕ ಜೀವನದಲ್ಲಿ ಪೂರ್ತಿ ಅವರ ಬೆಂಬಲವು ಬಲವಾದ ಆಧಾರಸ್ತಂಭವಾಗಿದೆ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ಸದಾ ಸರಳ, ಆತೀಯ ಮತ್ತು ಪ್ರೋತ್ಸಾಹದಾಯಕ ವ್ಯಕ್ತಿತ್ವ ಹೊಂದಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತನನ್ನೂ ಗೌರವ ಮತ್ತು ಘನತೆಯಿಂದ ಕಾಣುವ ಅವರು, ರಾಜಕೀಯದ ಮೂಲ ಅರ್ಥ ಜನರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅವರ ಆಶೋತ್ತರಗಳನ್ನು ಅರ್ಥಮಾಡಿಕೊಳ್ಳುವುದಾಗಿದೆ ಎಂದು ನಮಗೆ ನೆನಪಿಸುತ್ತಾರೆ. ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ನಾನು ಸದಾ ಅಮೂಲ್ಯವಾಗಿ ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ.

ನನ್ನ ಪಾಲಿಗೆ ಗಾಂಧಿ ಕುಟುಂಬವು ನಾಯಕತ್ವದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತದೆ. ಸಾಮರ್ಥ್ಯವನ್ನು ಗುರುತಿಸುವುದು, ಸಂಕಷ್ಟದ ಸಂದರ್ಭಗಳಲ್ಲಿ ಜನರೊಂದಿಗೆ ನಿಲ್ಲುವುದು, ಸಹಾನುಭೂತಿಯಿಂದ ಆಲಿಸುವುದು ಮತ್ತು ದೃಢನಂಬಿಕೆ ಹಾಗೂ ಸೇವಾ ಮನೋಭಾವದ ಮೂಲಕ ಇತರರಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದ್ದಾರೆ.

ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿ, ಇಂದು ಕರ್ನಾಟಕದ ನಾಯಕತ್ವದ ಜವಾಬ್ದಾರಿಯನ್ನು ವಹಿಸುವ ಅವಕಾಶ ದೊರೆತಿರುವ ನನ್ನಂತಹ ವ್ಯಕ್ತಿಗೆ, ಅವರ ವಿಶ್ವಾಸ ಮತ್ತು ಪ್ರೋತ್ಸಾಹದ ಬಗ್ಗೆ ಅಪಾರ ಕೃತಜ್ಞತೆ ಇದೆ ಎಂದಿದ್ದಾರೆ.

ಗಾಂಧಿ ಕುಟುಂಬದ ನಾಯಕತ್ವದಲ್ಲಿ ಹಾಗೂ ಕರ್ನಾಟಕದ ಜನರ ಆಶೀರ್ವಾದದೊಂದಿಗೆ, ನಾವು ಎಲ್ಲರೂ ನಂಬಿರುವ ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರಗತಿಪರ, ಸಮಗ್ರ ಮತ್ತು ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

RELATED ARTICLES

Latest News