ಬೆಂಗಳೂರು,ಡಿ.7- ಹೊಸವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ನಗರ ಪೊಲೀಸರು ಪೂರ್ವ ತಯಾರಿ ಆರಂಭಿಸಿದ್ದಾರೆ. 2026 ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗುತ್ತಿದೆ .
ಇಂತಹ ಸ್ಥಳಗಳನ್ನು ಗುರುತಿಸಲಾಗಿದ್ದು ಅಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿಗೆ ನಿಯೋಜಿಸಲು ವಿಶೇಷ ತರಬೇತಿ ನೀಡಲಾಗುತ್ತಿದೆ.ನುಮಾನಾಸ್ಪದ ವಸ್ತು ಕಂಡು ಬಂದ್ರೆ ಕೈಗೊಳ್ಳಬೇಕಾದ ಕ್ರಮ ಇನ್ನು ಸ್ಫೋಟದ ವಸ್ತುವಾಗಿದ್ದರೆ, ಜನರು ಗೊಂದಲಕ್ಕೀಡಾಗದೆ ಅವರನ್ನು ಸುಕ್ಷಿತ ಸ್ಥಳಕ್ಕೆ ಕಳುಹಿಸುವುದು ಸೇರಿ ಸ್ಪೋಟಕ ನಿಷ್ಕಿಯದ ಬಗ್ಗೆ ಸಿಬ್ಬಂದಿಗೆ ಪೂರ್ವ ತರಬೇತಿ ನೀಡಲಾಗುತ್ತಿದೆ.
ಇದಲ್ಲದೆ ಜನರಿಗೆ ತೊಂದರೆ ಉಂಟಾಗದಂತೆ ಅಗತ್ಯ ಸಂಚಾರಿ ಮಾರ್ಗ ಬದಲಾವಣೆ ಸೇರಿ ಮಹಿಳೆಯರ ಸುರಕ್ಷತೆಗೆ ಸಿಸಿ ಕ್ಯಾಮರ ಹಾಗು ವಿಶೇಷ ಪಡೆಗಳನ್ನು ನಿಯೋಜಿಸಲಾಗುತ್ತಿದೆ.
