Homeರಾಜ್ಯSHOCKING NEWS : ರಾಜ್ಯದಲ್ಲಿ ಸಕ್ರಿಯವಾಗಿವೆ ಉಗ್ರರ ನೆಟ್‌ವರ್ಕ್‌ - ಸ್ಲೀಪರ್‌ ಸೆಲ್‌..!

SHOCKING NEWS : ರಾಜ್ಯದಲ್ಲಿ ಸಕ್ರಿಯವಾಗಿವೆ ಉಗ್ರರ ನೆಟ್‌ವರ್ಕ್‌ – ಸ್ಲೀಪರ್‌ ಸೆಲ್‌..!

Terrorist network - sleeper cell active in the Karnataka

ಬೆಂಗಳೂರು, ಜೂ.6- ರಾಜ್ಯದಲ್ಲಿ ವಿದೇಶಿ ಉಗ್ರರ ನೆಟ್‌ವರ್ಕ್‌ ಮತ್ತು ಸ್ಲೀಪರ್‌ ಸೆಲ್‌ಗಳು ಸಕ್ರಿಯವಾಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.ಪಾಕ್‌ ಉಗ್ರರ ಜೊತೆ ಸಂಪರ್ಕ ಹೊಂದಿದ ಇಬ್ಬರು ಶಂಕಿತ ಉಗ್ರರನ್ನು ತುಮಕೂರು ನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈ ಮಾಹಿತಿ ಹೊರ ಬಿದ್ದಿದೆ.

ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾಬಕ್ಷ್ ಮತ್ತು ದಾವಣೆಗೆರೆಯ ಬೀಡಿಲೇಔಟ್‌ ನಿವಾಸಿ ಜಮೀರ್‌ಖಾನ್‌ನನ್ನು ಕೇಂದ್ರ ತನಿಖಾ ಏಜೆನ್ಸಿಗಳ ಸಹಾಯದಿಂದ ತುಮಕೂರು ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಶಂಕಿತರ ಮೊಬೈಲ್‌ಗಳು, ಕಂಪ್ಯೂಟರ್‌ಗಳು, ಇನ್ನಿತರ ಎಲೆಕ್ಟ್ರಾನಿಕ್‌್ಸ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಂಧಿತ ಶಂಕಿತ ಇಬ್ಬರು ಉಗ್ರರು ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಆನ್‌ಲೈನ್‌ ಸಂವಹನ, ದಾಖಲೆಗಳು, ಡಿಜಿಟಲ್‌ ಸಾಕ್ಷ್ಯಗಳನ್ನು ತನಿಖಾ ತಂಡಗಳು ಪರಿಶೀಲಿ ಸುತ್ತಿದ್ದು, ತನಿಖೆ ನಂತರ ಮತ್ತಷ್ಟು ಮಾಹಿತಿಗಳು ಹೊರ ಬೀಳುವ ನಿರೀಕ್ಷೆಯಿದೆ.

ಇವರ ಹಿಂದೆ ಒಂದು ದೊಡ್ಡ ಸ್ಲೀಪರ್‌ ಸೆಲ್‌ ನೆಟ್‌ವರ್ಕ್‌ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಇಬ್ಬರು ಪಾಕಿಸ್ತಾನದ ಶಂಕಿತ ಉಗ್ರರ ಜೊತೆ ಸಂಪರ್ಕದಲ್ಲಿದ್ದರು. ಇದನ್ನು ಕೇಂದ್ರ ಗುಪ್ತದಳ ಪತ್ತೆಹಚ್ಚಿದೆ.

ಕೇಂದ್ರ ಗುಪ್ತದಳ ಈ ಇಬ್ಬರು ಶಂಕಿತರ ಚಲನವಲನಗಳ ಮೇಲೆ ನಿಗಾ ವಹಿಸಿತ್ತು. ಖಚಿತ ಮಾಹಿತಿ ಮೇರೆಗೆ ರಾಜ್ಯ ಗುಪ್ತದಳ ಸಂಪರ್ಕಿಸಿತು. ನಂತರ ತುಮಕೂರು ನಗರ ಪೊಲೀಸರು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು.ತದ ನಂತರದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಈ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಇಬ್ಬರು ಪಾಕಿಸ್ತಾನದ ಶಂಕಿತ ಉಗ್ರ ರಾಣಾ ಜೊತೆ ಸಾಮಾಜಿಕ ಜಾಲ ತಾಣಗಳ ಮೂಲಕ ಸಂಪರ್ಕದಲ್ಲಿದ್ದು, ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದರು ಎಂಬುವುದು ತಿಳಿದು ಬಂದಿದೆ.

RELATED ARTICLES
spot_img

Latest News