ನವದೆಹಲಿ,ಜ.20- ಶ್ರೀರಾಮನ ವನವಾಸದ ಸಮಯದಲ್ಲಿ ಅರ್ಧ ತಿಂದ ಹಣ್ಣನ್ನು ಅರ್ಪಿಸಿದ ಶಬರಿ ಮಾತೆ ಕುರಿತಂತೆ ಬಿಹಾರ ಮೂಲದ ಗಾಯಕಿ ಮೈಥಿಲಿ ಠಾಕೂರ್ ಹಾಡಿರುವ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಫೀದಾ ಆಗಿದ್ದಾರೆ. ಮೈಥಿಲಿ ಬರೆದಿರುವ ಹಾಡಿಗೆ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿಗಳು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ದೇಶದ ಜನರಿಗೆ ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ನೆನಪಿಸುತ್ತಿದೆ ಎಂದು ಎಕ್ಸ್‍ನಲ್ಲಿನ ಪೋಸ್ಟ್ ಮಾಡಿದ್ದಾರೆ.
ಅಯೋಧ್ಯೆಯಲ್ಲಿನ ಪ್ರಾಣ ಪ್ರತಿಷ್ಠೆಯ ಸಂದರ್ಭವು ಭಗವಾನ್ ಶ್ರೀರಾಮನ ಜೀವನ ಮತ್ತು ಆದರ್ಶಗಳಿಗೆ ಸಂಬಂಧಿಸಿದ ಪ್ರತಿಯೊಂದು ಘಟನೆಯನ್ನು ದೇಶಾದ್ಯಂತ ನನ್ನ ಕುಟುಂಬ ಸದಸ್ಯರಿಗೆ ನೆನಪಿಸುತ್ತಿದೆ. ಅಂತಹ ಒಂದು ಭಾವನಾತ್ಮಕ ಘಟನೆ ಶಬರಿಗೆ ಸಂಬಂಧಿಸಿದೆ. ಮೈಥಿಲಿ ಠಾಕೂರ್ ಜಿ ಅದನ್ನು ಹೇಗೆ ಹಾಡಿದ್ದಾರೆ ಎಂಬುದನ್ನು ಆಲಿಸಿ ಎಂದು ಅವರು ದೇಶವಾಸಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಪನ್ನುನ್ ಹತ್ಯೆ ಸಂಚಿನ ಆರೋಪಿ ನಿಖಿಲ್‍ಗುಪ್ತಾ ಹಸ್ತಾಂತರಕ್ಕೆ ಜೆಕ್ ನ್ಯಾಯಾಲಯ ಸಮ್ಮತಿ
ಅಯೋಧ್ಯೆಯಲ್ಲಿ ಪ್ರಾಣ-ಪ್ರತಿಷ್ಠಾ ಮತ್ತು ಅವಸರ ದೇಶಭರ್ ಅವರು ಪರಿವಾರದವರಿಗೆ ಪ್ರಭುಗಳು ಶೋಂ ಸೆ ಜುಡೇ ಏಕ-ಒಂದು ಪ್ರಸಂಗ ಕಾ ಸ್ಮರಣ ಕರ ರಹಾ ಹೇ. ಏಸಾ ಹೀ ಒಂದು ಭಾವುಕ ಪ್ರಸಂಗ ಶಬರಿ ಸೆ ಜುಡಾ ಹೈ. ಸುನಿಯೇ, ಮೈಥಿಲಿ ಠಾಕುರ್ ಜೀ ನೆ ಕಿಸ್ ತರಹ ಸೆ ಇಸೆ ಅಪನೇ ಸುಮಧುರ್ ಸುರೋಂ ಮೆಂ ಪಿರೋಯಾ ಎಂದು ಅವರು ಬರೆದುಕೊಂಡಿದ್ದಾರೆ.
ಬಿಹಾರದ ಬೇನಿಪಟ್ಟಿಯಲ್ಲಿ ಜನಿಸಿದ ಮೈಥಿಲಿ ಠಾಕೂರ್ ಅವರು ಹಿಂದಿ, ಭೋಜ್‍ಪುರಿ ಮತ್ತು ಮೈಥಿಲಿಯಂತಹ ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡಲು ಹೆಸರುವಾಸಿಯಾಗಿದ್ದಾರೆ.