ಅಯೋಧ್ಯೆ,ಜ.22- ನಾನು ಲಕ್ಷಾಂತರ ಕಾಶ್ಮೀರಿ ಹಿಂದೂಗಳ ಪ್ರತಿನಿಧಿಯಾಗಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ ಎಂದು ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ತಿಳಿಸಿದ್ದಾರೆ. ಸಮಾರಂಭಕ್ಕೆ ಸಾಕ್ಷಿಯಾಗುವ ಮೊದಲು ಅವರು ಹನುಮಾನ್ ಗರ್ಹಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಕೋಮುಸೌಹಾರ್ಧತೆಗೆ ಸಾಕ್ಷಿಯಾಗಲಿದೆ ರಾಮಮಂದಿರ : ಅದಾನಿ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು, ನಾನು ಲಕ್ಷಾಂತರ ಕಾಶ್ಮೀರಿ ಹಿಂದೂಗಳನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಬಾವುಕರಾದರು. ಇಂದು ಭಗವಾನ್ ರಾಮನು ತನ್ನ ಮನೆಗೆ ಹಿಂದಿರುಗುತ್ತಿದ್ದಾನೆ ಮತ್ತು ನಾವು ಕೂಡ ಶೀಘ್ರದಲ್ಲೇ ಹಿಂತಿರುಗುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಕಾಶ್ಮೀರಕ್ಕೆ ಹಿಂತಿರುಗುವ ಮುನ್ಸೂಚನೆ ನೀಡಿದರು. ರಾಮನ ಬಳಿಗೆ ಹೋಗುವ ಮೊದಲು, ಭಗವಾನ್ ಹನುಮಂತನ ದರ್ಶನವನ್ನು ಪಡೆಯುವುದು ಬಹಳ ಮುಖ್ಯ … ಅಯೋಧ್ಯೆಯ ವಾತಾವರಣವು ತುಂಬಾ ಆಕರ್ಷಕವಾಗಿದೆ.
ಎಲ್ಲೆಡೆ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿರುವುದರಿಂದ ಇಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ ಎಂದು ಅವರು ಹೇಳಿದರು.ಕ್ರಿಕೆಟ್ ಜಗತ್ತು, ಚಲನಚಿತ್ರ ಜಗತ್ತು, ಸಂತ ಸಮಾಜ, ರಾಜಕೀಯ, ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಮತ್ತು ಇತರ ಕ್ಷೇತ್ರಗಳ ವಿಶೇಷ ಅತಿಥಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಬಾಲಿವುಡ್ ಸೆಲೆಬ್ರಿಟಿಗಳಾದ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ವಿಕ್ಕಿ ಕೌಶಲ, ಆಯುಷ್ಮಾನ್ ಖುರಾನಾ, ಕಂಗನಾ ರಣಾವತ್, ಕತ್ರಿನಾ ಕೈಫ್, ಜಾಕಿ ಶ್ರಾಫ್ ಮತ್ತು ಆಶಾ ಭೋಂಸ್ಲೆ ಸೇರಿದಂತೆ ಹಲವಾರು ಮಂದಿ ಸಮಾರಂಭಕ್ಕೆ ಸಾಕ್ಷಿಯಾದರು.
ಉತ್ತರ ಪ್ರದೇಶದ ಲಕ್ನೋವನ್ನು ಭಗವಾನ್ ರಾಮನ ಪೋಸ್ಟರ್‍ಗಳು ಮತ್ತು ಧ್ವಜಗಳಿಂದ ಅಲಂಕರಿಸಲಾಗಿದೆ, ಆದರೆ ದೇಶದಾದ್ಯಂತದ ನಗರಗಳನ್ನು ದೀಪಗಳು, ಭಗವಾನ್ ರಾಮನ ಬೃಹತ್ ಕಟೌಟ್‍ಗಳು ಮತ್ತು ಭಗವಾನ್ ರಾಮನಿಗೆ ಸಂಬಂಧಿಸಿದ ಧಾರ್ಮಿಕ ಘೋಷಣೆಗಳನ್ನು ಹೊಂದಿರುವ ಪೋಸ್ಟರ್‍ಗಳಿಂದ ಅಲಂಕರಿಸಲಾಗಿದೆ.