ಕೇಂದ್ರಪಾರ,ಜ.23 (ಪಿಟಿಐ) ಒಡಿಶಾದ ಕೇಂದ್ರಪಾರ ಮತ್ತು ಜಗತ್‍ಸಿಂಗ್‍ಪುರ ಜಿಲ್ಲೆಗಳಲ್ಲಿ ಅನೇಕ ಪೋಷಕರು ರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ಜನಿಸಿದ ತಮ್ಮ ಶಿಶುಗಳಿಗೆ ರಾಮ ಮತ್ತು ಸೀತಾ ಎಂದು ಹೆಸರಿಸಿದ್ದಾರೆ. ಜ.22 ರಂದು ಕೇಂದ್ರಪಾರಾ ಮತ್ತು ಜಗತ್‍ಸಿಂಗ್‍ಪುರ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜನಿಸಿದ ಕನಿಷ್ಠ ಆರು ಶಿಶುಗಳು, ಗಂಡು ಮತ್ತು ಹೆಣ್ಣುಮಕ್ಕಳಿಗೆ ಅವರ ಪೋಷಕರು ಭಗವಾನ್ ರಾಮ ಮತ್ತು ದೇವಿ ಸೀತೆಯ ಹೆಸರನ್ನು ಇಟ್ಟಿದ್ದಾರೆ.
ಒಡಿಶಾದಲ್ಲಿ ಸಂಪ್ರದಾಯದ ಪ್ರಕಾರ ಮಗು ಹುಟ್ಟಿದ 21 ನೇ ದಿನದಂದು ನಾಮಕರಣ ಮಾಡುವುದಾದರೂ, ಸೋಮವಾರ ನಡೆದ ಭಗವಾನ್ ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಂದೆ ಪೋಷಕರು ತಮ್ಮ ನವಜಾತ ಶಿಶುಗಳಿಗೆ ರಾಮ, ಸೀತಾ ಎಂದು ಹೆಸರಿಸಲು ಮುಂದಾದರು.
ಸನಾತನ ಧರ್ಮದ ಎಲ್ಲಾ ಸಾಧಕರಿಗೆ ಇದು ಮಹತ್ವದ ದಿನವಾಗಿದೆ. ನಮ್ಮ ಕುಟುಂಬಕ್ಕೆ ಹೊಸ ಆಗಮನದಿಂದ ನಮಗೆ ಇದು ಡಬಲ್ ಸಂತೋಷವಾಗಿದೆ ಎಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಿಯಾಂಕಾ ಮಲ್ಲಿಕ್ (24) ಹೇಳಿದರು.
ಇಂದಿನಿಂದ ಭಕ್ತರಿಗೆ ರಾಮಲಲ್ಲಾನ ದರ್ಶನ ಭಾಗ್ಯ
ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ನಂತರ ಕೇಂದ್ರಪಾರ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಕೆಯ ಮಗುವಿನ ಜನನ ನಡೆದಿದೆ. ಯುಗಪುರುಷದ ದಿನದ ನೆನಪಿಗಾಗಿ ನಮ್ಮ ಮಗಳಿಗೆ ಸೀತೆ ಎಂದು ಹೆಸರಿಡಲು ನಿರ್ಧರಿಸಿದ್ದೇವೆ ಎಂದು ನವಜಾತ ಶಿಶುವಿನ ತಂದೆ ನಾರಾಯಣ್ ಹೇಳಿದ್ದಾರೆ. ಮಂಗಳಕರ ದಿನದಂದು ಮಗುವಿನ ಜನನದಿಂದ ಅನೇಕ ಪೋಷಕರು ಸಂತೋಷಪಟ್ಟರು.
ರೇಣುಬಾಲಾ ರೌತ್ (24) ಕೇಂದ್ರಪಾರ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಹರ್ಷ ವ್ಯಕ್ತಪಡಿಸಿದರು. ರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ನಾನು ಗಂಡು ಮಗುವಿಗೆ ತಂದೆಯಾಗಿದ್ದೇನೆ. ಶುಭ ದಿನದಂದು ಅವನ ಜನನವು ನಮ್ಮನ್ನು ಭಾವಪರವಶಗೊಳಿಸಿದೆ. ನಮ್ಮ ಮಗನಿಗೆ ರಾಮ ಎಂದು ಹೆಸರಿಸಲು ನಾವು ನಿರ್ಧರಿಸಿದ್ದೇವೆ ಎಂದು ರೇಣುಬಾಲಾ ಅವರ ಪತಿ ಅಜಯ್ ಹರ್ಷ ವ್ಯಕ್ತಪಡಿಸಿದರು.
ಜನವರಿ 22 ರಂದು ಜನಿಸಿದ ತಮ್ಮ ನವಜಾತ ಶಿಶುಗಳಿಗೆ ರಾಮ್ ಮತ್ತು ಸೀತೆ ಎಂದು ನಾಮಕರಣ ಮಾಡುವ ಪೋಷಕರು ಇದೇ ರೀತಿಯ ನಿದರ್ಶನಗಳು ರಾಜ್ಯದ ವಿವಿಧ ಭಾಗಗಳಿಂದ ಹರಿದಾಡುತ್ತಿವೆ.