ಬೆಂಗಳೂರು, ಜ.24- ಬಹಳ ದಿನಗಳಿಂದ ನಿರೀಕ್ಷೆಯಲ್ಲಿದ್ದ 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ನಿನ್ನೆ ನಡೆದ ಲಿಖಿತ ಮರು ಪರೀಕ್ಷೆಗೆ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆದಿದೆ. ಮೂರನೇ ಹಂತದಲ್ಲಿ ಮತ್ತೆ 660 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾೀಕಾರ ದಿಂದಲೇ ಪರೀಕ್ಷೆ ನಡೆಸಲು ಶೀಘ್ರವೇ ಅಧಿಸೂಚನೆ ಹೊರಡಿಸುವುದಾಗಿ ಗೃಹ ಸಚಿವರ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಪರೀಕ್ಷೆಯಲ್ಲಿ ಯಾರೂ ಕೂಡ ಬ್ಲೂಟೂತ್ಗಳನ್ನು ಒಳಗಡೆ ತೆಗೆದುಕೊಂಡು ಹೋಗುವ ತರುವ ಪ್ರಯತ್ನ ಸಾಧ್ಯವಾಗಿಲ್ಲ. ಆ ರೀತಿ ಪ್ರಯತ್ನ ಕೂಡ ಆಗಿಲ್ಲ ಎಂದು ಭಾವಿಸುತ್ತೇನೆ ಎಂದರು.
ಸುಮಾರು 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು, ಅದರಲ್ಲಿ ಶೇ.65 ರಿಂದ 70 ಮಂದಿ ಪರೀಕ್ಷೆ ಬರೆದಿದ್ದಾರೆ . ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಶೀಘ್ರವಾಗಿ ಮೌಲ್ಯಮಾಪನ ಮಾಡಿ ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದರು.
ರಾಜ್ಯದಲ್ಲಿ ಗಣರಾಜ್ಯೋತ್ಸವ ಸಂಭ್ರಮ, ಎಲ್ಲೆಡೆ ಬಿಗಿ ಪೊಲಿಸ್ ಬಂದೋಬಸ್ತ್
ಇದರ ಬಳಿಕ 403 ಸಬ್ ಇನ್ಸ್ಪೆಕ್ಟರ್ಗಳ ಪರೀಕ್ಷೆ ಮಾಡಬೇಕಿದೆ. ಅದನ್ನು ಕೂಡ ಕರ್ನಾಟಕ ಪರೀಕ್ಷಾ ಪ್ರಾಕಾರಕ್ಕೆ ವಹಿಸಬೇಕು ಅಂತ ಯೋಚಿಸಿದ್ದೇವೆ. ಮೊದಲನೆದಾಗಿ ಕೆಇಎ ನಿರ್ದೇಶಕಿ ರಮ್ಯಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಎಚ್ಚರಿಕೆಯಿಂದ ಪರೀಕ್ಷೆ ಮಾಡಿಕೊಟ್ಟಿದ್ದಾರೆ. ಅದೇ ಪ್ರಕಾರ ಮುಂದೆ ಕೂಡ ಮಾಡಿದರೆ ಯಾವುದೇ ಗೊಂದಲಕ್ಕೆ ಆಸ್ಪದ ಇರುವುದಿಲ್ಲ ಎಂದರು.
403 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಈಗಾಗಲೇ ಅಸೂಚನೆ ಜಾರಿಯಾಗಿ, ದಾಖಲಾತಿಗಳ ಪರಿಶೀಲನೆ, ದೈಹಿಕ ಪರೀಕ್ಷೆ ನಡೆದಿದೆ. ಲಿಖಿತ ಪರೀಕ್ಷೆ ಮಾತ್ರ ಬಾಕಿಯಿದೆ. ಇದು ಪೂರ್ಣಗೊಂಡರೆ 948 ಪಿಎಸ್ಐಗಳ ನೇಮಕಾತಿಯಾದಂತಾಗುತ್ತದೆ ಎಂದರು.
ಮೂರನೇ ಹಂತದಲ್ಲಿ 660 ಮಂದಿ ಪಿಎಸ್ಐ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯಲಾಗಿದೆ. ಶೀಘ್ರವೇ ಅಸೂಚನೆ ಹೊರಡಿಸಲಾಗುವುದು. ಈ ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಬೇಕಿದೆ. ಆಯ್ಕೆ ಪ್ರತಿಕ್ರಿಯೆ ಮುಗಿದರೆ ತರಬೇತಿ ಅವ ಒಂದು ವರ್ಷ ಇರುತ್ತದೆ ಎಂದು ಹೇಳಿದರು.
ನಿಗಮ ಮಂಡಳಿ ನೇಮಕಾತಿ ವಿಷಯದಲ್ಲಿ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಸ್ಪಷ್ಟನೆ ಕೊಟ್ಟ ಮೇಲೆ ಮುಗಿಯಿತು. ನಾನು ಏನು ಹೇಳಬೇಕೋ ಹೇಳಿ ಆಗಿದೆ ಎಂದರು.
ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೆ ನಮಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇರುತ್ತಾ ಎಂದು ಸಹಕಾರ ಸಚಿವ ರಾಜಣ್ಣ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಾವು ಹೆಚ್ಚು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. 28ಕ್ಕೆ 28 ಸೀಟ್ ಗೆಲ್ಲಬೇಕೆಂದುಕೊಂಡಿದ್ದೇವೆ. ಹಿಂದೆ 27 ಸ್ಥಾನಗಳನ್ನು ಗೆದ್ದಿದ್ದನ್ನ ಸ್ಮರಿಸಿಕೊಳ್ಳಬೇಕಿದೆ ಎಂದರು.
ಈಗ ವಾತಾವರಣ ಚೆನ್ನಾಗಿದೆ, ಪಂಚಖಾತ್ರಿಗಳನ್ನು ನೀಡಿದ್ದೇವೆ. ಜನಪರ ಸರ್ಕಾರವಿದೆ ನಾವು ಹೆಚ್ಚು ಗೆಲ್ಲುತ್ತೇವೆ ಎನ್ನುವೆ ವಿಶ್ವಾಸವಿದೆ ಎಂದು ಹೇಳಿದರು. ಕಲ್ಬುರ್ಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಘಟನೆಗೆ ಸಂಬಂಧ ಪಟ್ಟಂತೆ ನಾಲ್ಕು ಜನರನ್ನು ಬಂಸಲಾಗಿದೆ. ಅವರ ವಿಚಾರಣೆ ನಡೆಯುತ್ತದೆ. ಬಂತರು ತಾವಾಗಿಯೇ ಕೃತ್ಯ ನಡೆಸಿದ್ದಾರೆಯೇ ಅಥವಾ ಅವರಿಗೆ ಯಾರಾದರೂ ಹೇಳಿಕೊಟ್ಟಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತದೆ. ಇಂತಹ ಘಟನೆಗಳ ಹಿಂದೆ ಕೆಲ ಉದ್ದೇಶಗಳು ಇರುತ್ತವೆ ಎಂದರು.