Thursday, November 21, 2024
Homeರಾಷ್ಟ್ರೀಯ | Nationalಅಯೋಧ್ಯೆಯಲ್ಲಿ 2 ತಿಂಗಳವರೆಗೂ ಭಕ್ತರಿಗೆ ನಿರಂತರ ಊಟದ ವ್ಯವಸ್ಥೆ

ಅಯೋಧ್ಯೆಯಲ್ಲಿ 2 ತಿಂಗಳವರೆಗೂ ಭಕ್ತರಿಗೆ ನಿರಂತರ ಊಟದ ವ್ಯವಸ್ಥೆ

ಅಯೋಧ್ಯೆ,ಜ.24-ಶ್ರೀ ರಾಮಚಂದ್ರ ಪ್ರಭುವಿನ ದರ್ಶನ ಪಡೆಯಲು ದೇಶ-ವಿದೇಶದಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು ಇದಕ್ಕಾಗಿ ಅಯೋಧ್ಯೆಯಲ್ಲಿ ಎರಡು ತಿಂಗಳ ಕಾಲ ವಿವಿಧ ವಸ್ತುಗಳನ್ನು ಸಂಗ್ರಹಿಸಲು ದೊಡ್ಡ ಭಂಡಾರಗಳನ್ನು ನಿರ್ಮಿಸಲಾಗಿದೆ.

ರಾಮಭಕ್ತರು ಕಳುಹಿಸಿದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ರಾಮಮಂದಿರ ಟ್ರಸ್ಟ್‍ಗೆ ಈಗ ಸ್ಥಳಾವಕಾಶವಿಲ್ಲದ ಕಾರಣ ದೊಡ್ಡ ಭಂಡಾರಗಳನ್ನು ಸ್ಥಾಪಿಸಲಾಗುತ್ತಿದೆ. ಅಯೋಧ್ಯೆಯ ಸರಯು ನದಿ ಮತ್ತು ಹನುಮಾನ್‍ಗಢದ ಬಳಿ 6 ಸಂಸ್ಥೆಗಳ ಭವ್ಯವಾದ ಸಭಾಂಗಣ ಸಿದ್ಧವಾಗಿದೆ.

30 ಅಡುಗೆಯವರು ಮತ್ತು 100 ಕೆಲಸಗಾರರ ತಂಡವು ಆಹಾರವನ್ನು ಸಿದ್ಧಪಡಿಸುತ್ತದೆ. ಇದಲ್ಲದೆ ವಿವಿಧ ವಸ್ತಗಳನ್ನು ಸಂಗ್ರಹಿಸಲಾಗುತ್ತಿದ್ದು ಅಗತ್ಯವಿರುವ ಭಕ್ತರಿಗೆ ಆಹಾರ,ಬೆಡ್ ಶೀಟ್,ಔಷದ ಸೇರಿ ವಿವಿಧ ಸೌಲಭ್ಯ ನೀಡಲಾಗುತ್ತಿದೆ.

660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ

RELATED ARTICLES

Latest News