Friday, November 22, 2024
Homeಬೆಂಗಳೂರುಲಾಲ್‍ಭಾಗ್‍ಗೆ ತೆರಳಲು ಮೆಟ್ರೋ ರೈಲಿನಲ್ಲಿ 30 ರೂ.ಗಳ ಪೇಪರ್ ಟಿಕೆಟ್

ಲಾಲ್‍ಭಾಗ್‍ಗೆ ತೆರಳಲು ಮೆಟ್ರೋ ರೈಲಿನಲ್ಲಿ 30 ರೂ.ಗಳ ಪೇಪರ್ ಟಿಕೆಟ್

ಬೆಂಗಳೂರು,ಜ.25- ಗಣರಾಜ್ಯೋತ್ಸವದ ಅಂಗವಾಗಿ ಲಾಲ್‍ಭಾಗ್‍ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ತೆರಳುವ ಪುಷ್ಪಪ್ರಿಯರಿಗೆ ಮೆಟ್ರೋ ಗುಡ್ ನ್ಯೂಸ್ ನೀಡಿದೆ. ನಾಳೆ ಲಾಲ್‍ಭಾಗ್‍ಗೆ ತೆರಳಿ ಪುಷ್ಪಪ್ರದರ್ಶನ ವೀಕ್ಷಿಸುವ ಪ್ರಯಾಣಿಕರು ಕೇವಲ 30 ರೂ. ಟಿಕೆಟ್ ಪಡೆದು ಮೆಟ್ರೋ ರೈಲಿನಲ್ಲಿ ಲಾಲ್‍ಭಾಗ್‍ಗೆ ಪ್ರಯಾಣಿಸಬಹುದಾಗಿದೆ.

ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ನಾಳೆ ಒಂದು ದಿನ ಮಾತ್ರ 30 ರೂ ಪೇಪರ್ ಟಿಕೆಟ್ ದರ ನಿಗದಿ ಪಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ. ನಾಳೆ ಬೆಳಗ್ಗೆ 10 ರಿಂದ ರಾತ್ರಿ 08 ಗಂಟೆವರೆಗೆ ಲಾಲ್‍ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಕೇವಲ 30 ರೂ. ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ. 30 ರೂ.ಗಳ ಪೇಪರ್ ಟಿಕೆಟ್ ನಾಳಿನ ಒಂದು ದಿನದ ಪ್ರಯಾಣಕ್ಕೆ ಮಾತ್ರ ಮಾನ್ಯ ಮಾಡಲಾಗುವುದು. ಪೇಪರ್ ಟಿಕೆಟ್ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ.

ಪಶ್ಚಿಮ ಬಂಗಾಳ ಪ್ರವೇಶಿಸಿದ ರಾಹುಲ್ ‘ನ್ಯಾಯ್ ಯಾತ್ರೆ’

ಅಲ್ಲದೆ ಟೋಕನ್, ಸ್ಮಾರ್ಟ್ ಕಾರ್ಡ್ ಎನ್ಸಿಎಂಸಿ ಕಾರ್ಡ್‍ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‍ಗಳ ಮೂಲಕವೂ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಆದ್ರೆ ಲಾಲ್‍ಬಾಗ್ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹಿಂತಿರುಗಲು ಪೇಪರ್ ಟಿಕೆಟ್ ಮೂಲಕ ಮಾತ್ರ ಬಳಸಬೇಕಿದೆ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನೀಡಲಾಗಿರುವ ಈ ಅವಕಾಶವನ್ನು ಬೆಂಗಳೂರು ನಾಗರೀಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೆಟ್ರೋ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News