ನವದೆಹಲಿ,ಜ.26- ಭಾರತದ 75 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ವೈವಿಧ್ಯಮಯ ಸಂಸ್ಕøತಿಯನ್ನು ತಮ್ಮ ವಿಶೇಷ ಆಯ್ಕೆಗಳೊಂದಿಗೆ ಆಚರಿಸಲು ಹೆಸರುವಾಸಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ಭಾರತದ ವೈವಿಧ್ಯತೆಯನ್ನು ಸಂಕೇತಿಸಲು ಬಂಧನಿ ಪೇಟ ಧರಿಸಿ ಗಮನ ಸೆಳೆದರು.
ಗಣರಾಜ್ಯೋತ್ಸವ ಪರೇಡ್‍ಗೂ ಮುನ್ನ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸುತ್ತಿದ್ದಂತೆ ಅವರ ಉಡುಪಿನ ಫಸ್ಟ್ ಲುಕ್ ಬಹಿರಂಗವಾಯಿತು. ವಿಶಿಷ್ಟವಾದ ಪೇಟದ ಜೊತೆಗೆ ಅವರು ಕಂದು ಬಣ್ಣದ ಕೋಟ್ ಮತ್ತು ಬಿಳಿ ಪ್ಯಾಂಟ್‍ನೊಂದಿಗೆ ಬಿಳಿ ಕುರ್ತಾವನ್ನು ಧರಿಸಿದ್ದರು.
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯ ಪಥದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸ್ವದೇಶಿ ಗನ್ ಸಿಸ್ಟಮ್ 105-ಎಂಎಂ ಇಂಡಿಯನ್ ಫೀಲ್ಡ್ ಗನ್‍ಗಳೊಂದಿಗೆ ವಿಜೃಂಭಣೆಯ 21-ಗನ್ ಸೆಲ್ಯೂಟ್‍ನೊಂದಿಗೆ ರಾಷ್ಟ್ರಗೀತೆಯ ನಂತರ ಧ್ವಜಾರೋಹಣವನ್ನು ಮಾಡಲಾಯಿತು.
ಗಣರಾಜ್ಯೋತ್ಸವದಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ ಅನಾವರಣ
ನಂತರ 105 ಹೆಲಿಕಾಪ್ಟರ್ ಘಟಕದ ಹೆಲಿಕಾಪ್ಟರ್‍ಗಳು ಕರ್ತವ್ಯ ಪಥದಲ್ಲಿ ಹಾಜರಿದ್ದ ಪ್ರೇಕ್ಷಕರ ಮೇಲೆ ಹೂ ಮಳೆ ಸುರಿಸಿದವು. ಇದರ ನಂತರ ಆವಾಹನ್, 100 ಕ್ಕೂ ಹೆಚ್ಚು ಮಹಿಳಾ ಕಲಾವಿದರಿಂದ ವಿವಿಧ ರೀತಿಯ ತಾಳವಾದ್ಯಗಳನ್ನು ನುಡಿಸುವ ಬ್ಯಾಂಡ್ ಪ್ರದರ್ಶನವು ನಾರಿ ಶಕ್ತಿಯನ್ನು ಸಂಕೇತಿಸಿತು.