ಬೆಂಗಳೂರು,ಡಿ.9- ಕರ್ನಾಟಕ ರಾಜ್ಯ ಪತ್ರಕರ್ತರ ಸಹಕಾರ ಸಂಘಕ್ಕೆ ನ್ಯಾಶನಲ್ ಕೋ ಆಪರೇಟಿವ್ ಗ್ಲೋಬಲ್ ಎಕ್ಸಲೆನ್‌್ಸ ಪ್ರಶಸ್ತಿ ಲಭಿಸಿದೆ.ಯಲಹಂಕದಲ್ಲಿ ನಡೆದ ಗ್ಲೋಬಲ್ ಸಹಕಾರ ಅಭಿವೃದ್ಧಿ ಶೃಂಗಸಭೆಯಲ್ಲಿ ಸಹಕಾರ ಸಂಘದ ಕಾರ್ಯದರ್ಶಿ ರಘು ಅವರು ಪ್ರಶಸ್ತಿ ಸ್ವೀಕರಿಸಿದರು.
ಹಲವಾರು ಮಹನೀಯರ ಪರಿಶ್ರಮದ ಫಲವಾಗಿ 75ನೇ ವಸಂತಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ಇಂತಹ
ಸಂದರ್ಭದಲ್ಲಿ ಪ್ರಶಸ್ತಿ ಲಭಿಸಿರುವುದು ಸಂಘದ ನಿರ್ದೇಶಕರಲ್ಲಿ ಮತ್ತಷ್ಟು ಹುರುಪು ಮೂಡಿಸಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಸಹಕಾರ ಸಂಘಗಳ ಹೆಚ್ಚುವರಿ ನಿರ್ದೇಶಕ ಎನ್.ಸಿ.ಅರುಣ್‌ಕುಮಾರ್, ಸೇಫ್ ಸಾಫ್‌್ಟವೇರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
