ಮಂಡ್ಯ, ಜ.30- ರಾಷ್ಟ್ರಧ್ವಜಕ್ಕಾಗಲಿ ಕಾನೂನಿಗಾಗಲಿ ನಾವು ಯಾವುದೇ ಅಪಚಾರ ಮಾಡಿಲ್ಲ, ಪೊಲೀಸರನ್ನು ಬಳಸಿಕೊಂಡು ಕಾಂಗ್ರೆಸ್‍ನವರು ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಆಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಲುವಾಗಿ ಅಂದಿನಿಂದಲೇ ಮಂಡ್ಯ ಜಿಲ್ಲೆಯಾದ್ಯಂತ ಎಲ್ಲಾ ದೇವಾಲಯಗಳಲ್ಲದೇ ಪ್ರತಿ ಗ್ರಾಮದಲ್ಲೂ ವಿಶೇಷ ಕಾರ್ಯ ಕ್ರಮಗಳನ್ನು ಆಯೋಜಿಸಿ ಹನುಮ ಧ್ವಜವನ್ನು ಎಲ್ಲಾ ಮನೆ ಮನೆಗಳಲ್ಲೂ ಹಾರಿಸಲಾಗಿತ್ತು.
ಇದನ್ನು ಸಹಿಸದೇ ಕೆಲವರು ಪ್ರಚೋಧನೆ ಮಾಡಿ ಈ ರದ್ಧಾಂತ ಸೃಷ್ಠಿಯಿದ್ದಾರೆಂದು ಟೀಕಿಸಿದ್ದಾರೆ. ಹನುಮ ದೇವಾಲಯದ ಸಮೀಪದವೇ ಪಂಚಾಯತಿ ಕಟ್ಟಡವಿದ್ದು, ಎಲ್ಲಾ ಅನುಮತಿಗಳನ್ನು ಪಡೆದು ನಾವೇ ಧ್ವಜಸ್ತಂಭವನ್ನು ಸ್ಥಾಪಿಸಿ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜವನ್ನು ಹಾರಿಸಿದ್ದೇವೆ. ನಂತರ ನಾವು ಹನುಮ ಧ್ವಜವನ್ನು ಹಾರಿಸಿ ಅದನ್ನು ಇಳಿಸುತ್ತಿದ್ದೇವು ಅಷ್ಟರೊಳಗೆ ನೂರಾರು ಪೊಲೀಸರನ್ನು ಕರೆಸಿ ಭಯ ಹುಟ್ಟಿಸಿ ಬಲವಂತವಾಗಿ ಹನುಮ ಧ್ವಜ ಇಳಿಸಿದ್ದೇ ಈ ಘಟನೆಗೆ ಕಾರಣವಾಗಿದೆಯೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಂತರ್ಧರ್ಮೀಯ ದಂಪತಿಗಳ ಭದ್ರತೆಗೆ ಆಗ್ರಹಿಸಿದ ಅರ್ಜಿ ವಜಾ
ಅನುಮತಿ ಪಡೆಯದೇ ಸರ್ಕಾರಿ ಜಾಗ ಇತ್ಯಾದಿ ಬಗ್ಗೆ ಕೆಲವು ಕಾಗದ ಪತ್ರಗಳನ್ನು ಅಂತರ್ಜಾಲದಲ್ಲಿ ಹಾಕಿದ್ದಾರೆ. ಆದರೆ ನಾವು ಕೊಟ್ಟ ಪತ್ರವೇ ಬೇರೆ ಇಲ್ಲಿ ಕಾಂಗ್ರೆಸ್‍ನವರು ಹಾಕಿರುವುದೇ ಬೇರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಯಾರೂ ಕೂಡ ಬಲವಂತವಾಗಿ ಹನುಮ ಧ್ವಜವನು ಹಾಕುವಂತೆ ಹೇಳಿರಲಿಲ್ಲ. ಸ್ವಯಂ ಪ್ರೇರಿತವಾಗಿ ಪ್ರತಿ ಗ್ರಾಮದಲ್ಲೂ ಹಾಕಲಾಗಿತ್ತು. ಆದರೆ ಇದನ್ನು ಸಹಿಸದೇ ಕೆಲವರು ಹಿಂದು ವಿರೋ ದೋರಣೆಯನ್ನು ತಳೆದಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲಾಗುವುದು. ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡಿ ಶಾಂತಿಯುತವಾಗಿ ನಡೆಯುತ್ತಿದ್ದ ಪಾದಯಾತ್ರೆಗೂ ಅಡ್ಡಿಪಡಿಸಿದವರು ಯಾರು ಮತ್ತು ಪ್ರಚೋದಿಸಿದವರು ಯಾರು ಎಂದು ನಮ್ಮ ಜನರಿಗೆ ಗೊತ್ತಿದೆ ತಕ್ಕ ಪಾಠ ಕಲಿಸುತ್ತಾರೆಂದು ಹೇಳಿದ್ದಾರೆ.