ನವದೆಹಲಿ, ಫೆ.1- ಈ ಬಾರಿಯ ಬಜೆಟ್‍ನಲ್ಲಿ ರಕ್ಷಣಾ ವಲಯಕ್ಕೆ 11 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಇದು ಕಳೆದ ಬಾರಿಗಿಂತ ಶೇ.11ರಷ್ಟು ಹೆಚ್ಚಾಗಿದೆ. ಇದು ಜಿಡಿಪಿಯ ಶೇ.3.4ರಷ್ಟಿದೆ. ಕಳೆದ ಬಜೆಟ್‍ನಲ್ಲಿ 5.93 ಲಕ್ಷ ಕೋಟಿ ರೂ. ಮೀಸಲಿರಿಸಲಾಗಿತ್ತು. ಇದು ಜಿಡಿಪಿಯ ಶೇ.1.9ರಷ್ಟಿತ್ತು ಎಂದು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದರು.
ಸದ್ಯ ಜಗತ್ತಿನ ಎರಡು ಪ್ರದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಉಂಟಾಗಿದೆ. ಗಾಜಾ-ಉಕ್ರೇನ್ ಮತ್ತು ಇಸ್ರೇಲ್-ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಈ ಹಿನ್ನೆಲೆ ಬಜೆಟ್‍ನಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿತ್ತು.
2022ರಲ್ಲಿ ಶಸ್ತ್ರಾಸ್ತ್ರಗಳಿಗಾಗಿಯೇ 1.52 ಲಕ್ಷ ಕೋಟಿ ರೂ. ಹಣವನ್ನು ಮೀಸಲಿಟ್ಟಿತ್ತು. ಇದರಲ್ಲೀಗ ಶೇ.6.5ರಷ್ಟು ಹೆಚ್ಚಳಗೊಂಡಿದೆ. 2022-23ರಲ್ಲಿ ಶೇ. 12 ಮತ್ತು 2021-22ರಲ್ಲಿ ಶೇ.19ರಷ್ಟಿತ್ತು. ಸದ್ಯ ಭಾರತ 85 ದೇಶಗಳಿಗೆ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. 2016ಕ್ಕೆ ಹೋಲಿಸಿದರೆ ಭಾರತದ ರಕ್ಷಣಾ ರಫ್ತು 10 ಪಟ್ಟು ಹೆಚ್ಚಾಗಿದೆ. ನೌಕಾಪಡೆಗೆ 26 ರಫೇಲ್ ವಿಮಾನಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
ಮಾಲ್ಡೀವ್ಸ್ ಗೆ ತಿರುಗೇಟು : ಬಜೆಟ್‍ನಲ್ಲಿ ಲಕ್ಷದ್ವೀಪ ಅಭಿವೃದ್ಧಿ ಘೋಷಣೆ
31 Iಕಿ9ಆ ರೀಪರ್ ಡ್ರೋನ್‍ಗಳನ್ನು ಖರೀದಿಸಲು ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತ ಮತ್ತು ಅಮೆರಿಕ ಜಂಟಿಯಾಗಿ ಸ್ಟ್ರೈಕರ್ ಶಸ್ತ್ರಸಜ್ಜಿತ ಯುದ್ಧ ವಾಹನವನ್ನು ನಿರ್ಮಿಸಲು ಒಪ್ಪಿಕೊಂಡಿವೆ. ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತೇವೆ. ವಿಕಸಿತ ಭಾರತಕ್ಕೆ ನಮ್ಮ ಸಂಪೂರ್ಣ ಯೋಜನೆ ಘೋಷಣೆ ಮಾಡಲಾಗವುದು ಸಚಿವರು ಹೇಳಿದರು.