ಇತ್ತೀಚಿಗೆ ಸಪ್ತ ಸಾಗರದಾಚೆ ಎಲ್ಲೋ ಕಥೆಯನ್ನ ಎರಡು ಭಾಗಗಳಲ್ಲಿ ಕಟ್ಟಿಕೊಟ್ಟು ಪ್ರೇಕ್ಷಕರ ಮನರಂಜನೆಗೆ ಕಾರಣವಾಗಿದ್ದ ಸದಭಿ ರುಚಿ ನಿರ್ದೇಶಕ ಹೇಮಂತ್ ಎಂ ರಾವ್. ಮತ್ತೊಂದು ದೊಡ್ಡ ಚಿತ್ರಕ್ಕೆ ಕೈ ಹಾಕಿದ್ದಾರೆ. ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ಸಪ್ತ ಸಾಗರದಾಚೆ ಎಲ್ಲೋ ಮೂಲಕ ತಾನು ಸಮರ್ಥ ನಿರ್ದೇಶಕ ಎಂದು ಮತ್ತೊಮ್ಮೆ ಸಾಬೀತು ಮಾಡಿಕೊಂಡಿರುವ ಹೇಮಂತ್ ರಾವ್ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುತಿದ್ದಾರೆ.
ಈ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಿತ್ತಾದರು ನಿಖರತೆ ಇರಲಿಲ್ಲ . ಈ ಬಗ್ಗೆ ಇದೀಗ ಚಿತ್ರತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ವೈಶಾಕ್ ಗೌಡ ಈ ಸಿನಿಮಾಗೆ ಹಣ ಹಾಕುತ್ತಿದ್ದು. ತಮ್ಮದೇ ವೈಶಾಕ್ ಜೆ ಫಿಲಂಸ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಕಥೆಯ ಕುರಿತು ಶಿವಣ್ಣ ಜೊತೆ ಚರ್ಚೆ ನಡೆದಿದೆಯಂತೆ. ಇದೀಗ ಹ್ಯಾಟ್ರಿಕ್ ಹೀರೋ ಹೇಮಂತ್ ರಾವ್ ನಿರ್ದೇಶನದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
2047ರ ವೇಳೆಗೆ ಭಾರತ ಮುಂದುವರೆದ ರಾಷ್ಟ್ರವಾಗಲಿದೆ : ಐಎಂಎಫ್
ಉತ್ತಮ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಹೇಮಂತ್ ರಾವ್ ಗೆ ಇದು ದೊಡ್ಡ ಬಜೆಟಿನ ಸಿನಿಮಾ ಮತ್ತು ಬೇರೆಯದ್ದೇ ಕಂಟೆಂಟ್ ನೋಂದಿಗೆ ಶಿವಣ್ಣ ಅವರನ್ನ ಹೊಸ ರೂಪದಲ್ಲಿ ತೋರಿಸುವ ಹೆಬ್ಬಯಕೆಯಿಂದ ಈ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ವಿಶೇಷವೆಂದರೆ ಈ ಚಿತ್ರಕ್ಕೆ ಹಣ ಕೊಡಲು ಮುಂದಾಗಿರುವ ನಿರ್ಮಾಪಕ ವೈಶಾಖ ಶಿವಣ್ಣನ ಅಪ್ಪಟ ಅಭಿಮಾನಿಯಾಗಿರುವುದು. ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಮಾಹಿತಿಯನ್ನು ಕೊಡಲಿದ್ದೇವೆ ಎನ್ನುತ್ತದೆ ಚಿತ್ರದಂಡ.