Friday, December 12, 2025
Homeರಾಜಕೀಯವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡನೆ

ವಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡನೆ

Hate Speech Prevention Bill introduced in the Assembly despite opposition

ಬೆಳಗಾವಿ, ಡಿ.10- ದ್ವೇಷ ಭಾಷಣ ಮತ್ತು ಅಪರಾಧ ಎಸಗುವವರಿಗೆ ಕನಿಷ್ಠ ಒಂದು ವರ್ಷದಿಂದ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ, ಕನಿಷ್ಠ 50 ಸಾವಿರದಿಂದ ಒಂದು ಲಕ್ಷದವರೆಗೆ ಜುಲ್ಮಾನೆ ವಿಧಿಸುವ ಕಠಿಣ ಕಾನೂನನ್ನು ವಿಧಾನ ಮಂಡಲದಲ್ಲಿಂದು ಮಂಡಿಸಲಾಗಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರಶ್ನೋತ್ತರದ ಬಳಿಕ ವಿಧಾನಸಭೆಯಲ್ಲಿ 2025 ನೇ ಸಾಲಿನ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮತ್ತು ನಿಯಂತ್ರಣ ವಿಧೇಯಕವನ್ನು ಮಂಡಿಸಿದರು.ಇದಕ್ಕೆ ವಿರೋಧ ಪಕ್ಷಗಳು ಪ್ರಬಲ ವಿರೋಧ, ಆಕ್ಷೇಪ ವ್ಯಕ್ತಪಡಿಸಿದ್ದವು. ವಿಧೇಯಕ ಮಂಡನೆ ದ್ವೇಷದ ರಾಜಕಾರಣದಿಂದ ಕೂಡಿದೆ. ಕಾಯ್ದೆ ಮಂಡನೆಗೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು. ವಿರೋಧದ ನಡುವೆಯೂ ಸಭಾಧ್ಯಕ್ಷ ಯು.ಟಿ.ಖಾದರ್‌ ವಿಧೇಯಕ ಮಂಡನೆಗೆ ಅವಕಾಶ ಕಲ್ಪಿಸಿದರು.

ಮಂಡನೆಯಾಗಿರುವ ವಿಧೇಯಕದಲ್ಲಿ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ನಿರ್ಬಂಽಸಲಾಗಿದೆ. ಸಮಾಜದಲ್ಲಿ ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ಅಸಾಮರಸ್ಯ, ದ್ವೇಷ ಹುಟ್ಟಿಸುವಂತಹ ಅಪರಾಧಗಳನ್ನು ಪ್ರತಿಬಂಽಸಲು ಮತ್ತು ತಡೆಗಟ್ಟಲು ಈ ವಿಧಯಕವನ್ನು ರೂಪಿಸಿರುವುದಾಗಿ ತಿಳಿಸಲಾಗಿದೆ.

ತಪ್ಪಿತಸ್ಥರಿಗೆ ದಂಡನೆ ವಿಧಿಸುವ ಜೊತೆಗೆ ಹಾನಿಗೊಳಗಾದ ಸಂತ್ರಸ್ಥರಿಗೆ ತಕ್ಕ ಪರಿಹಾರ ಒದಗಿಸುವುದು ವಿಧೇಯಕದಲ್ಲಿ ಅಡಕವಾಗಿದೆ.ಯಾವುದೇ ಪೂರ್ವ ಕಲ್ಪಿತ ಹಿತಾಸಕ್ತಿಯನ್ನು ಸಾಽಸಲು ಬದುಕಿರುವ ವ್ಯಕ್ತಿ, ಮೃತ ವ್ಯಕ್ತಿಗಳ, ವರ್ಗ, ಗುಂಪು, ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ, ವೈರತ್ವ, ದ್ವೇಷ ಹಾಗೂ ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶವನ್ನು ಅಪರಾಧ ಎಂದು ಪರಿಭಾವಿಸಲಾಗಿದೆ.

ಸಾರ್ವಜನಿಕ ನೋಟದಲ್ಲಿ, ವೌಖಿಕ ಅಥವಾ ಲಿಖಿತ ರೂಪದ ಪದಗಳಲ್ಲಿ, ಸಂಕೇತಗಳ ಮೂಲಕ, ದೃಶ್ಯರೂಪಕಗಳ ಮೂಲಕ, ವಿದ್ಯುನ್ಮಾನ ಸಂವಹನಗಳ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಕಂಡುಬರುವ ಅಪರಾಧಗಳನ್ನು ಪರಿಗಣಿಸುವುದಾಗಿ ತಿಳಿಸಲಾಗಿದೆ.
ಧರ್ಮ, ಜನಾಂಗ, ಜಾತಿ, ಸಮುದಾಯ, ಲಿಂಗತ್ವ, ಲೈಂಗಿಕ ಮನೋಗುಣ, ಜನ್ಮಸ್ಥಳ, ವಾಸಸ್ಥಳ, ಭಾಷೆ, ನ್ಯೂನತೆ ಅಥವಾ ಪಂಗಡಗಳ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಪೂರ್ವಗ್ರಹದಿಂದ ದ್ವೇಷಿಸುವ ಅಥವಾ ನಿಂದಿಸುವುದನ್ನು ಅಪರಾಧ ಎಂದು ಪರಿಭಾವಿಸಲಾಗಿದೆ.

ದ್ವೇಷ ಭಾಷಣವನ್ನು ಪ್ರಚಾರಪಡಿಸುವ, ಮಾತನಾಡುವ ಅಥವಾ ಪ್ರಚೋದಿಸುವ ಮೂಲಕ ದುಷ್ಪರಿಣಾಮ ಉಂಟುಮಾಡುವಂತಹ ಅಪರಾಧಗಳನ್ನು ಶಿಕ್ಷಾರ್ಹವನ್ನಾಗಿ ಗುರುತಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಮಾಹಿತಿ ತಂತ್ರಜ್ಞಾನ ಅಽನಿಯಮಗಳ ಅಡಿಯಲ್ಲಿ ಸೂಚಿತ ಶಿಕ್ಷೆಯನ್ನು ಉಲ್ಲೇಖಿಸಲಾಗಿದೆ.

ಅನುಕ್ರಮವಾಗಿ ದ್ವೇಷ ಅಪರಾಧಕ್ಕೆ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಮತ್ತು 50 ಸಾವಿರ ರೂಪಾಯಿಗಳ ಜುಲ್ಮಾನೆ ವಿಧಿಸುವುದಾಗಿ ತಿಳಿಸಲಾಗಿದೆ. ಪುನರಾವರ್ತಿತ ಅಪರಾಧಿಗಳಿಗೆ ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದ 10 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಹಾಗೂ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆ ವಿಧಿಸಬಹುದಾಗಿದೆ. ಸಂತ್ರಸ್ತರಿಗಾದ ಹಾನಿಯನ್ನು ಅಂದಾಜಿಸಿ, ನ್ಯಾಯಾಲಯವು ತಕಷ್ಟು ಪರಿಹಾರ ನೀಡಬಹುದು ಎಂದು ತಿಳಿಸಲಾಗಿದೆ. ದ್ವೇಷ ಅಪರಾಧಗಳು ಜಾಮೀನು ರಹಿತ ಎಂದು ಗುರುತಿಸಲಾಗಿದೆ.ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ಅಧಿವಿಚಾರಣೆ ನಡೆಯಬೇಕು ಎಂದು ತಿಳಿಸಲಾಗಿದೆ.

ವಿದ್ಯುನ್ಮಾನ, ಪುಸ್ತಕ, ಕರಪತ್ರ, ಕಾಗದ ಬರಹ, ರೇಖಾಚಿತ್ರ, ವರ್ಣಚಿತ್ರ ರೂಪಕ ಅಥವಾ ಚಿತ್ರಗಳ ಪ್ರಕಟಣೆಯು, ವಿಜ್ಞಾನ, ಸಾಹಿತ್ಯ, ಕಲೆ, ಅಥವಾ ಕಲಿಕೆ ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದ ಉದ್ದೇಶಗಳ ಹಿತಾಸಕ್ತಿಯಲ್ಲಿದೆ ಎಂಬ ಆಧಾರದ ಮೇಲೆ ಅಂತಹ ಪುಸ್ತಕ, ಕರಪತ್ರ, ಕಾಗದ, ಬರಹ, ರೇಖಾಚಿತ್ರ, ವರ್ಣಚಿತ್ರ, ರೂಪಕ ಹಾಗೂ ಚಿತ್ರಗಳು ಜನ ಹಿತಕ್ಕಾಗಿ ಇರುವುದೆಂದು ಸಮರ್ಥನೆಯವಾಗಿ ರುಜುವಾತಾದರೆ ವಿನಾಯಿತಿ ನೀಡಲು ಸೂಚಿಸಲಾಗಿದೆ.
ಶಾಂತಿ ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಡಿ ವೈ ಎಸ್‌ ಪಿ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಗಳು, ಕಾರ್ಯನಿರ್ವಾಹಕ ಮ್ಯಾಜಿಸೆ್ಟ್ರೕಟ್‌, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸೆ್ಟ್ರೕಟ್‌ ಗಳು ಅಧಿನಿಯಮದಡಿ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಂಘ ಸಂಸ್ಥೆಗಳು ಅಪರಾಧದಲ್ಲಿ ತೊಡಗಿದ್ದರೆ ಅಂತಹ ಸಂಸ್ಥೆಗಳ ವ್ಯವಹಾರ ನಿರ್ಬಂಧಿಸುವ ಮತ್ತು ಸಂಸ್ಥೆಯ ಜವಾಬ್ದಾರಿಯುತ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಿ ದಂಡನೆಗೆ ಒಳಪಡಿಸುವ ಅವಕಾಶಗಳಿವೆ. ಒಂದು ವೇಳೆ ಅಪರಾಧ ತಡೆಯಲು ಸದರಿ ಮುಖ್ಯಸ್ಥ ಯುಕ್ತ ಜಾಗರೂಕತೆಯನ್ನು ವಹಿಸಿರುವುದು ಸಾಬೀತಾದರೆ, ದಂಡನೆಗೆ ಹೊಣೆಗಾರರನ್ನಾಗಿ ಮಾಡುವಂತಿಲ್ಲ ಎಂದು ಪರಿಭಾವಿಸಲಾಗಿದೆ.ದ್ವೇಷದ ಅಪರಾಧದ ವಿಷಯ ವಸ್ತುಗಳನ್ನು ಬ್ಲಾಕ್‌ ಮಾಡುವ ಅಥವಾ ತೆಗೆದು ಹಾಕುವ ಅಽಕಾರವನ್ನು ಸರ್ಕಾರ ಧಿಸೂಚಿತ ವ್ಯಕ್ತಿ ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ.

RELATED ARTICLES

Latest News