Friday, November 22, 2024
Homeಕ್ರೀಡಾ ಸುದ್ದಿ | Sportsಗನ್‍ಪಾಯಿಂಟ್‍ನಲ್ಲಿ ವೆಸ್ಟ್‌ಇಂಡೀಸ್‌ ಆಲ್ ರೌಂಡರ್‌ನ ದರೋಡೆ

ಗನ್‍ಪಾಯಿಂಟ್‍ನಲ್ಲಿ ವೆಸ್ಟ್‌ಇಂಡೀಸ್‌ ಆಲ್ ರೌಂಡರ್‌ನ ದರೋಡೆ

ಜೋಹಾನ್ಸ್‍ಬರ್ಗ್,ಫೆ.6- ಶಸ್ತ್ರಸಜ್ಜಿತವಾದ ದರೋಡೆಕೋರರು ವೆಸ್ಟ್‍ಇಂಡೀಸ್‍ನ ಸ್ಟಾರ್ ಆಲ್‍ರೌಂಡರ್ ಫ್ಯಾಬ್ ಅಲೆನ್ ಅವರನ್ನು ಗನ್‍ಪಾಯಿಂಟ್‍ನಡಿ ಎದುರಿಸಿ ಮೊಬೈಲ್ ಫೋನ್ ಹಾಗೂ ಬ್ಯಾಗ್‍ನಲ್ಲಿದ್ದ ಇತರ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ದಕ್ಷಿಣಆಫ್ರಿಕಾ ಸೂಪರ್ ಲೀಗ್ 20 ಅಂಗವಾಗಿ ಡೇವಿಡ್ ಮಿಲ್ಲರ್ ನಾಯಕತ್ವದ ಪರ್ಲ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಅಲೆನ್, ಜೋಹಾನ್ಸ್‍ಬರ್ಗ್‍ನಲ್ಲಿ ತಂಗಿರುವ ಹೊಟೇಲ್‍ನಿಂದ ಹೊರಬರುತ್ತಿದ್ದಂತೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಕ್‍ಬಝ್ ವರದಿ ಮಾಡಿರುವಂತೆ ಫ್ಯಾಬ್ ಅಲೆನ್ ಅವರು ಜೋಹಾನ್ಸ್‍ಬರ್ಗ್‍ನ ಪ್ರತಿಷ್ಠಿತ ಸ್ಯಾಂಡಟೋನ್ ಸನ್ ಹೊಟೇಲ್‍ನಲ್ಲಿ ನೆಲೆಸಿದ್ದು ನಾಳೆ ಫಾಫ್ ಡುಪ್ಲೆಸಿಸ್ ನಾಯಕತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ ಜೋಹಾನ್ಸ್‍ಬರ್ಗ್‍ನ ನ್ಯೂವಂಡಸರ್ಸ್ ಮೈದಾನದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಕ್ರೀಡಾಂಗಣಕ್ಕೆ ಹೊರಡಲು ಅಲೆನ್ ಅವರು ಹೊಟೇಲ್‍ನಿಂದ ಹೊರಬರುತ್ತಿದ್ದಂತೆ ದರೋಡೆಕೋರರು ಅವರನ್ನು ಸುತ್ತುವರಿದು ದೋಚಿ ಪರಾರಿಯಾಗಿದ್ದಾರೆ.

1 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟವರ ವಿರುದ್ಧ ಪ್ರಕರಣ ದಾಖಲು

ಘಟನೆಯಲ್ಲಿ ಫ್ಯಾಬ್ ಅಲೆನ್ ಅವರ ಮೊಬೈಲ್ ಫೋನ್, ಕ್ರಿಕೆಟ್ ಕಿಟ್‍ನಲ್ಲಿದ್ದ ಸಾಮಾಗ್ರಿಗಳನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ ಎಂದು ಪರ್ಲ್ ರಾಯಲ್ಸ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ ವೆಸ್ಟ್‍ಇಂಡೀಸ್ ಕ್ರಿಕೆಟ್ ಮಂಡಳಿಯು ತಮ್ಮ ದಕ್ಷಿಣ ಆಫ್ರಿಕಾದಲ್ಲಿರುವ ತಮ್ಮ ಆಪ್ತರಿಂದ ಮಾಹಿತಿ ಸಂಗ್ರಹಿಸಿದೆ. ಈ ಸಮಯದಲ್ಲಿ ಫ್ಯಾಬ್ ಅಲೆನ್ ಅವರು ಯಾವುದೇ ಆಯುಧ ಹೊಂದಿಲ್ಲ ಎಂದು ತಿಳಿದುಬಂದಿಲ್ಲ.

ದರೋಡೆಯ ಸುದ್ದಿ ತಿಳಿಯುತ್ತಿದ್ದಂತೆ ವೆಸ್ಟ್‍ಇಂಡೀಸ್‍ನ ಹೆಡ್‍ಕೋಚ್ ಅಂಡ್ರೆ ಕೋಲೆ ಅವರು ಫ್ಯಾಬ್ ಅಲೆನ್ ಅವರನ್ನು ಭೇಟಿ ಮಾಡಲು ಜಮೈಕಾದಿಂದ ಜೋಹಾನ್ಸ್‍ಬರ್ಗ್‍ಗೆ ಪಯಣ ಬೆಳೆಸಿದ್ದಾರೆ. ಎಸ್‍ಎ20 ಲೀಗ್‍ನಲ್ಲಿ ಪಾಲ್ಗೊಂಡಿರುವ ವೆಸ್ಟ್‍ಇಂಡೀಸ್‍ನ ಮತ್ತೊಬ್ಬ ಆಟಗಾರ ಒಬೆಡ್ ಮೆಕೊಯೈ ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದು ,ಅಲೆನ್ ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮತ್ತು ಪರ್ಲ್ ರಾಯಲ್ಸ್ ತಂಡದ ಫ್ರಾಂಚೈಸಿಯಿಂದಲೂ ಹೆಚ್ಚಿನ ಮಾಹಿತಿಯನ್ನು ವೆಸ್ಟ್‍ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯುಸಿಎ) ಪಡೆದುಕೊಂಡಿದೆ. ಜೋಹಾನ್ಸ್‍ಬರ್ಗ್‍ನಲ್ಲಿ ಕ್ರಿಕೆಟಿಗರ ದರೋಡೆ ಮಾಡಿರುವ ಪ್ರಕರಣವು ಇದೇ ಮೊದಲಲ್ಲ, ನಾವು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.

RELATED ARTICLES

Latest News