ನ್ಯೂಯಾರ್ಕ್, ಫೆ.7:ಮತ್ತೊಂದು ಆತಂಕಕಾರಿ ಘಟನೆಯಲ್ಲಿ, ಅಮೆರಿಕದ ಚಿಕಾಗೋ ನಗರದಲ್ಲಿ ಭಾರತೀಯ ಐಟಿ ವಿದ್ಯಾರ್ಥಿಯೊಬ್ಬರ ಮೇಲೆ ಅಪರಿಚಿತ ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಕಳೆದ ಫೆ. 4 ರಂದು ರಾತ್ರಿ ಮೂವರು ವ್ಯಕ್ತಿಗಳು ಭಾರತ ಮೂಲದ ಸೈಯದ್ ಮಜಾಹಿರ್ ಅಲಿಯನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ,ಕಣ್ಣು ಮೂಗು ಮತ್ತು ಮುಖಕ್ಕೆ ಗಾಯಗಳಾಗಿದ್ದು ನೋವಿನಲ್ಲಿ ಒದಾಡುವುದು ಕಾಣಿಸಿದೆ.
ಸುಮಾರು ಆರು ತಿಂಗಳ ಹಿಂದೆ ಹೈದರಾಬಾದ್‍ನಿಂದ ಅಮೆರಿಕಕ್ಕೆ ಬಂದಿದ್ದ ಅಲಿ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವುದು ತಿಳಿದುಬಂದಿದೆ.
ಚಿಕಾಗೋದಲ್ಲಿರುವ ಭಾರತೀಯ ದೂತಾವಾಸವು ಪ್ರಕರಣದ ತನಿಖೆ ನಡೆಸುತ್ತಿರುವ ಸ್ಥಳೀಯ ಅಧಿದಿಕಾರಿಗಳನ್ನು ಸಂಪರ್ಕಿಸಿದ್ದಾರೆ. ದಾಳಿಕೋರರಲ್ಲಿ ಒಬ್ಬ ಬಂದೂಕು ತೋರಿಸಿ ಕೊಲ್ಲುವ ಬೆದರಿಕೆ ಹಾಕಿದ್ದಾನೆ ಹಲ್ಲೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಮೆರಿಕಾ ನನ್ನ ಕನಸಿನ ದೇಶವಾಗಿದೆ ಮತ್ತು ನನ್ನ ಕನಸುಗಳನ್ನು ಈಡೇರಿಸಲು ಮತ್ತು ನನ್ನ ಮಾಸ್ಟರ್ಸ್ ಅನ್ನು ಮುಂದುವರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಘಟನೆಯು ನನಗೆ ಆಘಾತವನ್ನುಂಟು ಮಾಡಿತು, ಎಂದು ಅಲಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿ ಯಾವುದೇ ಶಂಕಿತ ಇಲ್ಲ ಮತ್ತು ತನಿಖೆ ಮುಂದುವರೆದಿದೆ ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಆತನ ಪೋಷಕರಾದ ಸೈಯದ್ ಮಜಾಹಿರ್ ಅಲಿ ಮತ್ತು ಅಲಿ ಪತ್ನಿ ಸೈಯದಾ ರುಕ್ವಿಯಾ ಫಾತಿಮಾ ರಜ್ವಿ ಅವರೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಚಿಲಿಯ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ನಿಧನ
ಅಲಿ ಅವರ ಪತ್ನಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡಿ ಮೂವರು ಅಪ್ರಾಪ್ತ ಮಕ್ಕಳೊಂದಿಗೆ ಯುಎಸ್‍ಗೆ ಪ್ರಯಾಣಿಸಲು ನೆರವು ಕೋರಿದ್ದಾರೆ. ಇತ್ತೀಚೆಗೆ ಅಮೇರಿಕಾದಲ್ಲಿ ಎಂಬಿಎ ಪದವಿ ಪಡೆದಿದ್ದ 25 ವರ್ಷದ ಭಾರತೀಯ ವಿದ್ಯಾರ್ಥಿ ವಿವೇಕ್ ಸೈನಿಯನ್ನು ಜಾರ್ಜಿಯಾ ರಾಜ್ಯದ ಲಿಥೋನಿಯಾ ನಗರದಲ್ಲಿ ಮಾದಕ ವ್ಯಸನಿ ಹೊಡೆದು ಸಾಯಿಸಿದ ಘಟನೆ ಸೇರಿದಂತೆ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.