ನವದೆಹಲಿ,ಫೆ.8- ಈಗ ಲೋಕಸಭಾ ಚುನಾವಣೆ ನಡೆದು ಬಿಜೆಪಿ ನೇತೃತ್ವದ ಎನ್‍ಡಿಎ 366 ಸ್ಥಾನ ಗಳಿಸಿದರೆ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 23 ಸ್ಥಾನ ಗೆಲ್ಲಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ತಿಳಿಸಿದೆ. ಗುಜರಾತ್, ಛತ್ತೀಸ್‍ಗಢ, ದೆಹಲಿಯ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು ಒಟ್ಟು 366 ಸ್ಥಾನಗಳನ್ನು ಎನ್‍ಡಿಎ ಒಕ್ಕೂಟ ಗಳಿಸಲಿದೆ. ಇಂಡಿಯಾ ಒಕ್ಕೂಟ 104, ಇತರರು 73 ಸ್ಥಾನ ಗಳಿಸಲಿದೆ. ಶೇಕಡಾವಾರು ಮತ ಪ್ರಮಾಣದಲ್ಲಿ ಎನ್‍ಡಿಎ ಶೇ.41.8ರಷ್ಟು ಮತ ಪಡೆದರೆ ಇಂಡಿಯಾ ಒಕ್ಕೂಟ ಶೇ.28.6ರಷ್ಟು ಮತ ಪಡೆಯಲಿದೆ. ಇತರರು ಶೇ.29.6ರಷ್ಟು ಮತ ಗಳಿಸಲಿದ್ದಾರೆ ಎಂದು ಹೇಳಿದೆ.
ಉತ್ತರಪ್ರದೇಶದ 80 ಸ್ಥಾನಗಳ ಪೈಕಿ 77 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ನಿತೀಶ್‍ಕುಮಾರ್ ಸೇರ್ಪಡೆಯಿಂದ ಬಿಹಾರದಲ್ಲಿ ಎನ್‍ಡಿಎ 35 ಸೀಟುಗಳನ್ನು ಗೆಲ್ಲಲಿದ್ದು, ಇತರ ಪಕ್ಷಗಳು 5 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ. ಪಶ್ಚಿಮಬಂಗಾಳದ ಒಟ್ಟು 42 ಸ್ಥಾನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 26 ಕ್ಷೇತ್ರಗಳನ್ನು ಗೆಲ್ಲಲಿದೆ. ತಮಿಳುನಾಡಿನಲ್ಲಿ ಎನ್‍ಡಿಎ ಒಂದು ಹಾಗೂ ಇಂಡಿಯಾ ಮೈತ್ರಿಕೂಟ 36 ಸ್ಥಾನ ಪಡೆಯಲಿದೆ.
ಭಾರತ ಅಮೆರಿಕವನ್ನು ದುರ್ಬಲವಾಗಿ ಪರಿಗಣಿಸಿದೆ : ಹ್ಯಾಲೆ
ರಾಜ್ಯದಲ್ಲಿ ಬಿಜೆಪಿ 21, ದಳ 2 ಸ್ಥಾನ ಗೆದ್ದುಕೊಂಡರೆ ಕಾಂಗ್ರೆಸ್ 5 ಸ್ಥಾನಗಳನ್ನು ಗಳಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಮತಗಳ ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿ ಶೇ.46.2 ಕಾಂಗ್ರೆಸ್ 42.3 ಜೆಡಿಎಸ್ 8.4 ಹಾಗೂ ಇತರ ಪಕ್ಷಗಳು ಶೇ.3.1ರಷ್ಟು ಮತ ಗಳಿಸಿಕೊಳ್ಳಲಿವೆ. ಸಿದ್ದರಾಮಯ್ಯ ಸಾಧನೆ ಕುರಿತು ಶೇ.18ರಷ್ಟು ತೃಪ್ತಿ ವ್ಯಕ್ತಪಡಿಸಿದ್ದು, ಶೇ.27ರಷ್ಟು ಮಂದಿ ಪರವಾಗಿಲ್ಲ ಎಂದಿದ್ದಾರೆ. ಶೇ.34ರಷ್ಟು ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದು, ಶೇ.21ರಷ್ಟು ಮಂದಿ ಪ್ರತಿಕ್ರಿಯಿಸಿಲ್ಲ.