ಟೋಕಿಯೊ, ಅ.- ಜಪಾನ್‍ನ ಹೊರಭಾಗದ ದ್ವೀಪಗಳ ಬಳಿ ಭೂಕಂಪನ ಸಂಭವಿಸಿದ್ದರ ತುರ್ತು ಪಡೆ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದೆ. ಸುನಾಮಿ ಸಮುದ್ರದ ಅಲೆಗಳು ಒಂದು ಮೀಟರ್ ಎತ್ತರ ತಲುಪಬಹುದು ಸಂದೇಶ ನೀಡಲಾಗಿದೆ.
ಜಪಾನಿನ ಮುಖ್ಯ ದ್ವೀಪವಾದ ಹೊನ್‍ಶು ಮಧ್ಯದಿಂದ ದಕ್ಷಿಣಕ್ಕೆ ವ್ಯಾಪಿಸಿರುವ ಇಜು ಸರಪಳಿಯಲ್ಲಿರುವ ದ್ವೀಪಗಳಲ್ಲಿ ಕಂಪನ ಸಂಭವಿಸಿದ್ದು ,ಜನರನ್ನು ಕರಾವಳಿ ಮತ್ತು ನದಿ ಮುಖಗಳಿಂದ ದೂರವಿರಲು ಸೂಚಿಸಲಾಗಿದೆ. ಜಪಾನ್‍ನ ಎನ್‍ಎಚ್‍ಕೆ ಟಿವಿ ಪ್ರಕಾರ ಇದು ಕಡಿಮೆ ತೀವ್ರತೆಯ ಎಚ್ಚರಿಕೆ ಸಂದೇಶ ಎಂದು ಹೇಳಿದೆ.
ಶಾಮನೂರು ಹೇಳಿಕೆಗೆ ಪೂರಕವಾಗಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಂದ ದೂರು
ಜಪಾನ್ ಭೂಮಿಯ ಮೇಲೆ ಹೆಚ್ಚು ಭೂಕಂಪನ ಪೀಡಿತ ಸ್ಥಳಗಳಲ್ಲಿ ಒಂದಾಗಿದೆ ಕಳೆದ 2011 ರಲ್ಲಿ ಸಂಭವಿಸಿದ ಭಾರೀ ಭೂಕಂಪವು ಸುನಾಮಿಯನ್ನು ಉಂಟುಮಾಡಿತು, ಇದು ಉತ್ತರ ಜಪಾನ್‍ನ ಬೃಹತ್ ಪ್ರದೇಶಗಳನ್ನು ನಾಶಪಡಿಸಿತು ಮತ್ತು ಫುಕುಶಿಮಾ ಪರಮಾಣು ಸ್ಥಾವರ ಹಾನಿಗೆ ಕಾರಣವಾಗಿತ್ತು.