Homeರಾಷ್ಟ್ರೀಯಮಣಿಪುರದಲ್ಲಿ 6 ನಾಗಾ ನಾಗರಿಕರ ಹತ್ಯೆ ಪ್ರಕರಣ : ಇಬ್ಬರ ಬಂಧಿಸಿದ ಎನ್‌ಐಎ

ಮಣಿಪುರದಲ್ಲಿ 6 ನಾಗಾ ನಾಗರಿಕರ ಹತ್ಯೆ ಪ್ರಕರಣ : ಇಬ್ಬರ ಬಂಧಿಸಿದ ಎನ್‌ಐಎ

NIA-led team arrests two in connection with killing of six Naga civilians in Manipur

ಇಂಫಾಲ್‌‍,ಜುಲೈ 10-ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಆರು ನಾಗಾ ನಾಗರಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೇತೃತ್ವದ ಭದ್ರತಾ ಪಡೆಗಳ ಜಂಟಿ ತಂಡ ಶುಕ್ರವಾರ ಬೆಳಗಿನ ಜಾವ ಇಬ್ಬರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವಾಸಾರ್ಹ ಮಾಹಿತಿ ಆಧರಿಸಿ ಮಣಿಪುರ ಪೊಲೀಸ್‌‍, ಎನ್‌ಐಎ ಹಾಗೂ ಸಿಆರ್‌ಪಿಎಫ್‌‍ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಮೇ 13ರಂದು ಇದೇ ಗ್ರಾಮದ ಸಮೀಪ ಆರು ನಾಗಾ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರನ್ನು ಬಂಧಿಸುವ ಉದ್ದೇಶದಿಂದ ಲೈಲೋನ್‌ ವೈಫೈ ಗ್ರಾಮದಲ್ಲಿ ಮುಂಜಾನೆ ಕಾರ್ಯಾಚರಣೆ ನಡೆಸಲಾಯಿತು.

ಈ ವೇಳೆ ಕುಕಿ-ಝೋ ಸಮುದಾಯದ ಗ್ರಾಮದಿಂದ ಅಯಿಂಗ್‌ಬಿ ಎಂಬ ಮಹಿಳೆ ಹಾಗೂ ಪ್ರದೀಪ್‌‍ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜೂನ್‌ 10ರಂದು ಲೈಲೋನ್‌ ವೈಫೈ ಗ್ರಾಮದ ಸಮೀಪ ಆರು ನಾಗಾ ನಾಗರಿಕರ ಮೃತದೇಹಗಳು ಪತ್ತೆಯಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ನಾಗಾ ಹಾಗೂ ಮೈತೇಯಿ ಸಮುದಾಯಗಳು ತೀವ್ರ ಪ್ರತಿಭಟನೆ ನಡೆಸಿದ್ದವು.

ಈ ಘಟನೆಯ ಬಳಿಕ ನಾಗಾ ಸಂಘಟನೆಗಳು ಕಾಂಗ್‌ಪೋಕ್ಪಿ ಜಿಲ್ಲೆಗೆ ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳನ್ನು ತಡೆಹಿಡಿದ ಪರಿಣಾಮ, ಕುಕಿ-ಝೋ ಬಹುಸಂಖ್ಯಾತ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಭಾರೀ ಏರಿಕೆಯಾಗಿತ್ತು.

ಮೃತದೇಹಗಳು ಪತ್ತೆಯಾದ ಕೆಲ ದಿನಗಳ ಬಳಿಕ ಕುಕಿ ಝೋ ಕೌನ್ಸಿಲ್‌ (ಕೆಝೆಸಿ) ಅಧ್ಯಕ್ಷ ಹೆನ್ಲಿಯೆಂತಾಂಗ್‌ ಥಾಂಗ್ಲೆಟ್‌‍ಅವರು ಈ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿ, ಆರು ನಾಗಾ ನಾಗರಿಕರ ಹತ್ಯೆಯನ್ನು ಖಂಡಿಸಿದ್ದರು. ತಮ್ಮ ಸಮುದಾಯದ ಪರವಾಗಿ ಕ್ಷಮೆಯಾಚಿಸುತ್ತಾ, ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ಸಂಬಂಧಿಸಿದ ಎಲ್ಲಾ ಹಿಂಸಾಚಾರ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.

RELATED ARTICLES

Latest News