ಬೆಂಗಳೂರು,ಫೆ.10- ಈವರೆಗೂ ಕೋಮುವಾದಿ ಪ್ರಚೋದನೆಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಈಗ ಅದೇ ರೀತಿಯ ಮತೀಯವಾದದ ಪ್ರಚೋದನೆಗೆ ಎಸ್‍ಡಿಪಿಐನ ಅಧ್ಯಕ್ಷರು ಕರೆ ನೀಡುವ ಮೂಲಕ ಕಾನೂನು ಸುವ್ಯವಸ್ಥೆಯಲ್ಲಿ ಆತಂಕ ಮೂಡಿಸಿದ್ದಾರೆ. ಮಂಗಳೂರಿನ ಸಮಾವೇಶವೊಂದರಲ್ಲಿ ಮಾತನಾಡಿರುವ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ನಜೀದ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಲಾಠಿ ಏಟು ತಿನ್ನಲು, ಜೈಲಿಗೆ ಹೋಗಲು, ಹುತಾತ್ಮರಾಗಲು ಸಿದ್ಧರಾಗಿ ಎಂದು ಕರೆ ನೀಡುವುದು ಆತಂಕ ಮೂಡಿಸಿದೆ.
ಇದೇ ರೀತಿ ಮತೀಯವಾದದ ಪ್ರಚೋದನೆ ನೀಡುತ್ತಿದ್ದ ಪಿಎಫ್‍ಐ ಅನ್ನು ಕಳೆದ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಎಸ್‍ಡಿಪಿಐ ರಾಜಕೀಯ ಪಕ್ಷವಾಗಿರುವುದರಿಂದ ಕೇಂದ್ರ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದಿರುವುದರಿಂದ ಏಕಾಏಕಿ ನಿಷೇಧ ಸಾಧ್ಯವಾಗಿರಲಿಲ್ಲ. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಪಿಎಫ್‍ಐ ಕಾರ್ಯಕರ್ತರಂತೆ ಎಸ್‍ಡಿಪಿಐನ ಕಾರ್ಯಕರ್ತರೂ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ಶಿವಮೊಗ್ಗ ಸೇರಿದಂತೆ ಹಲವು ರೀತಿಯ ಗಲಭೆಗಳಲ್ಲಿ ಮತೀಯವಾದದ ಪ್ರಚೋದನೆ ಕಂಡುಬಂದಿತ್ತು.
ಇಪಿಎಫ್ ಗರಿಷ್ಠ ಬಡ್ಡಿದರ ಶೇ.8.25ಕ್ಕೆ ನಿಗದಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮತ್ತಷ್ಟು ವಿರೋಧಾಭಾಸಗಳನ್ನು ಆರಂಭಿಸಿರುವ ಎಸ್‍ಡಿಪಿಐ ಯಾವ ಪಕ್ಷಗಳಿಂದಲೂ ನಮಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಹುತಾತ್ಮಕರಾಗುವ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಂಘರ್ಷಮಯ ಪರಿಸ್ಥಿತಿ ನಿರ್ಮಿಸಬಹುದು. ಕಾನೂನು ಸುವ್ಯವಸ್ಥೆಗೆ ಸವಾಲಾಗಬಹುದೆಂಬ ಆತಂಕ ನಿರ್ಮಾಣವಾಗಿದೆ.