ಬೆಳಗಾವಿ,ಜು.13-ಗಂಡನ ಮನೆಯವರ ಕಿರುಕುಳದಿಂದ ಮನನೊಂದ ಪತ್ನಿ ತನ್ನ ಮೂರು ವರ್ಷದ ಮಗನೊಂದಿಗೆ ಆತಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಪೀರನವಾಡಿ ಪಾಟೀಲ್ ಗಲ್ಲಿ ಬಡಾವಣೆಯ ನಿವಾಸಿ ಪ್ರೇಮಾ (28) ಎಂಬುವವರೇ ಮಗ ಭುವನ್ (3) ಜೊತೆ ಆತಹತ್ಯೆ ಮಾಡಿಕೊಂಡವರು.
ಗಂಡನ ಮನೆಯವರು ಮಾಡಿದ್ದ 10 ಲಕ್ಷ ಸಾಲ ತೀರಿಸುವಂತೆ ಪ್ರೇಮಾಗೆ ಒತ್ತಡ ಮಾಡಿ ದಿನನಿತ್ಯವೂ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ಇದೇ ವಿಚಾರವಾಗಿ ಅವರ ಮನೆಯಲ್ಲಿ ಗಲಾಟೆಯಾಗುತ್ತಿತ್ತು. ಇದರಿಂದ ಪ್ರೇಮಾ ಜೀವನದಲ್ಲಿ ಜಿಗುಪ್ಸೆಗೊಂಡು ಆತಹತ್ಯೆಗೆ ನಿರ್ಧರಿಸಿದ್ದಾರೆ.
ತಾನು ಆತಹತ್ಯೆ ಮಾಡಿಕೊಂಡರೇ ಮಗನನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವೆಂದು ಅರಿತ ಪ್ರೇಮಾ ಡೆತ್‌ನೋಟ್ ಬರೆದಿದ್ದು ತಮ್ಮ ಮೂರು ವರ್ಷದ ಮಗನೊಂದಿಗೆ ಆತಹತ್ಯೆಗೆ ಶರಣಾಗಿದ್ದಾರೆ.ಸುದ್ದಿ ತಿಳಿದು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸ್ಥಳದಲ್ಲಿ ದೊರೆತ ಡೆತ್‌ನೋಟ್ ವಶಕ್ಕೆ ಪಡೆದಿದ್ದಾರೆ.
ಡೆತ್‌ನೋಟ್‌ನಲ್ಲಿ ಗಂಡ, ಅತ್ತೆ, ಮೈದುನ ಸೇರಿ ಆರು ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಪ್ರೇಮಾ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಬಿಮ್ಸೌ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
