Homeರಾಜ್ಯಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಮೂವರು ಖೈದಿಗಳ ಪೈಕಿ ಖೈದಿಗೆ ಗುಂಡೇಟು, ಸೆರೆ

ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಮೂವರು ಖೈದಿಗಳ ಪೈಕಿ ಖೈದಿಗೆ ಗುಂಡೇಟು, ಸೆರೆ

One of the three prisoners who escaped from Kalaburagi jail was shot and captured

ಬೆಂಗಳೂರು,ಜು.15- ಕಲಬುರಗಿ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಖೈದಿಗಳ ಪೈಕಿ ಒಬ್ಬನನ್ನು ಕಲಬುರಗಿ ಫರ್ತಾಬಾದ್‌ ಠಾಣೆ ಪೊಲೀಸರು ಗುಂಡು ಹಾರಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಸಂತೋಷ್‌ (28) ಬಂಧಿತ ಖೈದಿ.

ಗುಂಡೇಟಿನಿಂದ ಗಾಯಗೊಂಡಿರುವ ಈತನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಮೂಲತಃ ಬೀದರ್‌ ಜಿಲ್ಲೆಯವನಾದ ಈತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಬಂಧಿತನಾಗಿ ಶಿಕ್ಷೆಗೆ ಒಳಪಟ್ಟಿದ್ದ. ಹಾಗಾಗಿ ಈತನನ್ನು ಕಲಬುರಗಿ ಕಾರಗೃಹದಲ್ಲಿ ಇರಿಸಲಾಗಿತ್ತು.

ನಿನ್ನೆ ಬೆಳಗಿನ ಜಾವ 4.30 ರ ಸುಮಾರಿನಲ್ಲಿ ಮೂವರು ಖೈದಿಗಳು ಕಾರಾಗೃಹದ ಗೋಡೆಯನ್ನು ಹತ್ತಿ ಅಲ್ಲಿಂದ ಹಾರಿ ಪರಾರಿಯಾಗಿದ್ದರು.ಈ ಬಗ್ಗೆ ಫರ್ತಾಬಾದ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲಬುರಗಿ ನಗರ ಪೊಲೀಸ್‌‍ ಆಯುಕ್ತರು ಈ ಖೈದಿಗಳ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಿದ್ದರು.

ಈ ತಂಡಗಳು ನಿನ್ನೆ ಬೆಳಗ್ಗೆಯಿಂದಲೇ ಶೋಧ ಕಾರ್ಯದಲ್ಲಿ ತೊಡಗಿದ್ದರು. ಖೈದಿಯೊಬ್ಬ ಕಲಬುರಗಿ ಗ್ರಾಮಾಂತರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಹೊರವಲಯದ ಹುಮ್ನಾಬಾದ್‌ ರಸ್ತೆಯ ಕಪನೂರ್‌ ಇಂಡಸ್ತ್ರೀಯಲ್‌ ಏರಿಯಾದಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.

ಈ ಖಚಿತ ಮಾಹಿತಿ ಮೇರೆಗೆ ಫರ್ತಾಬಾದ್‌ ಠಾಣೆ ಇನ್ಸ್ ಪೆಕ್ಟರ್‌ ಹಾಗೂ ಇಬ್ಬರು ಸಿಬ್ಬಂದಿಯೊಂದಿಗೆ ಖೈದಿಯನ್ನು ಹಿಡಿಯಲು ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗುತ್ತಿದ್ದಂತೆ ಪೊಲೀಸರನ್ನು ಗಮನಿಸಿದ ಖೈದಿ ಸಂತೋಷ್‌ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಆ ಸಂದರ್ಭದಲ್ಲಿ ಇನ್‌್ಸಪೆಕ್ಟರ್‌ ಗಾಳಿಯಲ್ಲಿ ಒಂದು ಸುತ್ತು ಗುಂಡ ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೇ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್‌್ಸಪೆಕ್ಟರ್‌ ಹಾರಿಸಿದ ಗುಂಡು ಆರೋಪಿಯ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಇಬ್ಬರು ಪೊಲೀಸ್‌‍ ಕಾನ್‌ಸ್ಟೇಬಲ್‌ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

RELATED ARTICLES

Latest News