Homeರಾಜ್ಯಚಿನ್ನ ಬೆಲೆಯಲ್ಲಿ ಚೇತರಿಕೆ, ಬೆಳ್ಳಿ ದರ ಸ್ಥಿರ

ಚಿನ್ನ ಬೆಲೆಯಲ್ಲಿ ಚೇತರಿಕೆ, ಬೆಳ್ಳಿ ದರ ಸ್ಥಿರ

ಬೆಂಗಳೂರು, ಜು.15-ಕಳೆದ ನಾಲ್ಕು ದಿನಗಳ ನಂತರ ಚಿನಿವಾರಪೇಟೆಯಲ್ಲಿ ಚಿನ್ನ ಅಲ್ಪ ಚೇತರಿಕೆ ಕಂಡಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ.ನಿರಂತರ ಕುಸಿತದ ನಂತರ ಜು.9 ಮತ್ತು 10ರಂದು ಅಲ್ಪ ಹೆಚ್ಚಳವಾಗಿದ್ದ ಚಿನ್ನದ ದರವೂ ಅನಂತರ ನಾಲ್ಕು ದಿನಗಳ ಕಾಲ ಇಳಿಮುಖವಾಗಿ ಸಾಗಿತ್ತು.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಇಂದು 24 ಕ್ಯಾರೆಟ್‌ ಚಿನ್ನವು ಒಂದು ಗ್ರಾಂಗೆ 77 ರೂ. ನಷ್ಟು ಹೆಚ್ಚಳವಾಗಿದ್ದು, 14,357 ರೂಪಾಯಿಯಷ್ಟಿದೆ. 22 ಕ್ಯಾರೆಟ್‌ ಚಿನ್ನವು ಒಂದು ಗ್ರಾಂಗೆ 70 ರೂ.ನಷ್ಟು ಏರಿಕೆಯಾಗಿದ್ದು, 13,160 ರೂಪಾಯಿಯಷ್ಟಿದೆ.18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 57 ರೂ.ನಷ್ಟು ಹೆಚ್ಚಾಗಿದ್ದು, 10,767 ರೂಪಾಯಿಗೆ ತಲುಪಿದೆ.

ಇಳಿಮುಖದ ಹಾದಿಯಲ್ಲಿ ಸಾಗುತ್ತಿರುವ ಬೆಳ್ಳಿಯೂ ಕಳೆದ ಐದು ದಿನಗಳಿಂದ ಚೇತರಿಕೆ ಕಂಡಿಲ್ಲ. ಜುಲೈ ಮೊದಲ ವಾರದಿಂದಲೂ ಇಳಿಮುಖವಾಗಿ ಸಾಗಿದ್ದ ಬೆಳ್ಳಿ ದರವು ಜು.10ರಂದು ಒಂದು ಕೆ.ಜಿ.ಗೆ ಐದು ಸಾವಿರ ರೂ. ಏರಿಕೆಯಾಗಿ 2.40 ಲಕ್ಷ ರೂಪಾಯಿಗೆ ತಲುಪಿತ್ತು.

ಮರುದಿನವೇ ಐದು ಸಾವಿರ ಕುಸಿತವಾಗಿ ಒಂದು ಕೆ.ಜಿ.ಬೆಳ್ಳಿ 2.35 ಲಕ್ಷ ರೂಪಾಯಿಗೆ ಇಳಿಯಿತು. ಅಂದಿನಿಂದ ಏರಿಳಿತವಿಲ್ಲದೇ ಅದೇ ದರದಲ್ಲಿ ಮುಂದುವರೆದಿದೆ. ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ದರಗಳ ಮಾರುಕಟ್ಟೆಯಲ್ಲಿ ಸ್ಥಿರವಾಗಿರದೇ ಆಗಾಗ್ಗೆ ವ್ಯತ್ಯಾಸವಾಗುತ್ತಿದ್ದು, ಗ್ರಾಹಕರು ಹಾಗೂ ವರ್ತಕರನ್ನು ಗೊಂದಲಕ್ಕೀಡು ಮಾಡಿದೆ.

RELATED ARTICLES

Latest News