Homeಕ್ರೀಡಾ ಸುದ್ದಿಫ್ರಾನ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಸ್ಪೇನ್‌

ಫ್ರಾನ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಸ್ಪೇನ್‌

Spain defeats France 2-0 to reach World Cup final

ಆರ್ಲಿಂಗ್ಟನ್‌, ಜು.15- ಬಲಿಷ್ಠ ಫ್ರಾನ್ಸ್ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಸ್ಪೇನ್‌, ಫಿಫಾ ವಿಶ್ವಕಪ್‌ ಫುಟ್‌ಬಾಲ್‌‍ ಟೂರ್ನಿಯ ಫೈನಲ್‌ಗೆ ಭರ್ಜರಿ ಯಾಗಿ ಪ್ರವೇಶಿಸಿದೆ. ಇಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್‌ ತನ್ನ ಅತ್ಯುತ್ತಮ ರಕ್ಷಣಾತಕ ಆಟದ ಮೂಲಕ ಕೈಲಿಯನ್‌ ಎಂಬಾಪ್ಪೆ ನೇತೃತ್ವದ

ಫ್ರಾನ್ಸ್ ನ ಆಕ್ರಮಣಕಾರಿ ಪಡೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿತು. ಈ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ ಆರನೇ ಬಾರಿ ಎದುರಾಳಿ ತಂಡವನ್ನು ಗೋಲು ರಹಿತವಾಗಿರಿಸುವಲ್ಲಿ ಸ್ಪೇನ್‌ ಯಶಸ್ವಿಯಾಯಿತು. ಸ್ಪೇನ್‌ ಪರ ಮಿಕೆಲ್‌ ಒಯಾರ್ಜಬಲ್‌ 22ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಮೊದಲ ಗೋಲು ದಾಖಲಿಸಿದರು. ಲಮಿನ್‌ ಯಮಾಲ್‌ ಮೇಲೆ ಫ್ರಾನ್ಸ್ ಆಟಗಾರ ಲೂಕಾಸ್‌‍ ಡಿನ್‌ ಫೌಲ್‌ ಮಾಡಿದ ಹಿನ್ನೆಲೆಯಲ್ಲಿ ಸ್ಪೇನ್‌ಗೆ ಪೆನಾಲ್ಟಿ ದೊರೆಯಿತು.

ನಂತರ 58ನೇ ನಿಮಿಷದಲ್ಲಿ ಪೆಡ್ರೊ ಪೊರೊ ಎರಡನೇ ಗೋಲು ದಾಖಲಿಸಿ ಸ್ಪೇನ್‌ನ ಗೆಲುವು ಖಚಿತಪಡಿಸಿದರು. ಡಾನಿ ಒಲೊ ಅವರೊಂದಿಗೆ ಸುಂದರ ಪಾಸ್‌‍ ವಿನಿಮಯದ ಬಳಿಕ ಪೊರೊ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

ತಮ 19ನೇ ಜನದಿನ ಆಚರಿಸಿಕೊಂಡ ಮರುದಿನವೇ ಕಣಕ್ಕಿಳಿದ ಯುವ ಆಟಗಾರ ಲಮಿನ್‌ ಯಮಾಲ್‌ ಒಂದು ಗೋಲು ಗಳಿಸಿದರೂ, ಅಲ್ಪ ಅಂತರದ ಆಫ್‌ಸೈಡ್‌‍ ಕಾರಣದಿಂದ ಅದು ಅಮಾನ್ಯಗೊಂಡಿತು. ಆದರೂ ಮೊದಲ ಗೋಲಿಗೆ ಕಾರಣವಾದ ಅವರ ಚತುರ ಆಟ ಪಂದ್ಯದಲ್ಲಿ ಪ್ರಮುಖ ತಿರುವು ನೀಡಿತು.

ಸ್ಪೇನ್‌ ತರಬೇತುದಾರ ಲೂಯಿಸ್‌‍ ಡೆ ಲಾ ಫುಎಂಟೆ, ನಮ ಆಟಗಾರರು ವಿಶ್ವದ ಅತ್ಯುತ್ತಮ ತಂಡದ ವಿರುದ್ಧ ಆಡಿದರು ಮತ್ತು ಅದ್ಭುತ ಪ್ರದರ್ಶನ ನೀಡಿದರು ಎಂದು ಶ್ಲಾಘಿಸಿದರು.
ಫೈನಲ್‌ನಲ್ಲಿ ಸ್ಪೇನ್‌‍, ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಮತ್ತು ಇಂಗ್ಲೆಂಡ್‌ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯದ ವಿಜೇತರನ್ನು ಎದುರಿಸಲಿದೆ. ಈ ಪಂದ್ಯ ಭಾನುವಾರ ನ್ಯೂಜೆರ್ಸಿಯ ಈಸ್ಟ್‌ ರುದರ್‌ಫೋರ್ಡ್‌ನಲ್ಲಿ ನಡೆಯಲಿದೆ.

ಈ ಹಂತ ತಲುಪುವುದು ತುಂಬಾ ಕಷ್ಟವಾಗಿತ್ತು. ಆದರೆ ನಮ ಗುರಿ ಇನ್ನೂ ಮುಗಿದಿಲ್ಲ. ವಿಶ್ವಕಪ್‌ ಗೆಲ್ಲಬೇಕೆಂಬುದು ನಮ ಆಶಯ ಎಂದು ಸ್ಪೇನ್‌ ಮಧ್ಯಮೈದಾನದ ಆಟಗಾರ ರೋಡ್ರಿ ಹೇಳಿದರು. ಇನ್ನು ಸತತ ಮೂರನೇ ವಿಶ್ವಕಪ್‌ ಫೈನಲ್‌ ಪ್ರವೇಶಿಸುವ ಕನಸು ಕಂಡಿದ್ದ ಫ್ರಾನ್‌್ಸ ತಂಡ ಇದೀಗ ಶನಿವಾರ ಫ್ಲೋರಿಡಾದ ಮಿಯಾಮಿ ಗಾರ್ಡನ್‌್ಸನಲ್ಲಿ ನಡೆಯಲಿರುವ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಆಡಲಿದೆ.

ಫ್ರಾನ್‌್ಸತರಬೇತುದಾರ ಡಿಡಿಯರ್‌ ಡೆಶಾಂಪ್ಸ್‌‍, ಸ್ಪೇನ್‌ ಅತ್ಯುತ್ತಮವಾಗಿ ರಕ್ಷಣಾತಕ ಆಟವಾಡಿತು. ಅವರು ಎಲ್ಲ ಅವಕಾಶಗಳನ್ನು ಮುಚ್ಚಿಹಾಕಿದರು. ನಮಿಂದಲೂ ತಾಂತ್ರಿಕ ತಪ್ಪುಗಳು ನಡೆದವು. ಇಂತಹ ತಂಡದ ವಿರುದ್ಧ ಅವಕಾಶ ಸೃಷ್ಟಿಸುವುದು ಕಷ್ಟ ಎಂದು ಒಪ್ಪಿಕೊಂಡರು.

ಈ ಗೆಲುವಿನೊಂದಿಗೆ ಸ್ಪೇನ್‌ 2024ರ ಮಾರ್ಚ್‌ನಿಂದ ಇಲ್ಲಿಯವರೆಗೆ ನಿಯಮಿತ ಸಮಯದಲ್ಲಿ ಸತತ 37 ಪಂದ್ಯಗಳಲ್ಲಿ ಸೋಲು ಕಾಣದೆ (28 ಜಯ, 9 ಡ್ರಾ) ತನ್ನದೇ ದೇಶದ ಹಿಂದಿನ 35 ಪಂದ್ಯಗಳ ದಾಖಲೆಯನ್ನು ಮುರಿದಿದೆ.ಮತ್ತೊಂದೆಡೆ, ಫ್ರಾನ್‌್ಸನ ಸತತ ಆರು ವಿಶ್ವಕಪ್‌ ಗೆಲುವಿನ ಸರಣಿ ಈ ಸೋಲಿನೊಂದಿಗೆ ಅಂತ್ಯಗೊಂಡಿತು.

ವಿಶ್ವಕಪ್‌ನಲ್ಲಿ ಎಂಟು ಗೋಲುಗಳೊಂದಿಗೆ ಗೋಲ್ಡನ್‌ ಬೂಟ್‌ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಕೈಲಿಯನ್‌ ಎಂಬಾಪ್ಪೆ, ಈ ಪಂದ್ಯದಲ್ಲಿ ಮೂರು ಪ್ರಯತ್ನ ಮಾಡಿದರೂ ಒಂದೂ ಗೋಲಿನ ಗುರಿ ತಲುಪಲಿಲ್ಲ. ತಂಡದ ನಾಯಕನಾಗಿ ಸೋಲಿನ ಸಂಪೂರ್ಣ ಹೊಣೆಗಾರಿಕೆಯನ್ನು ನಾನು ಹೊರುತ್ತೇನೆ. ನಾವು ಫೈನಲ್‌ ತಲುಪಲು ಬಯಸಿದ್ದೆವು, ಆದರೆ ಸಾಧ್ಯವಾಗಲಿಲ್ಲ ಎಂದು ಎಂಬಾಪ್ಪೆ ಪ್ರತಿಕ್ರಿಯಿಸಿದರು.ಈ ಗೆಲುವಿನಿಂದ ಸ್ಪೕನ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

RELATED ARTICLES

Latest News