ನವದೆಹಲಿ, ಫೆ 13 (ಪಿಟಿಐ) ಕಳೆದ 10 ವರ್ಷಗಳಿಂದ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಮೋದಿ ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಸಾವಿರಾರು ರೈತರು ದೆಹಲಿ ಚಲೋ ಪ್ರತಿಭಟನೆಗೆ ಕರೆ ನೀಡಿದ ದಿನದಂದು ಸರ್ಕಾರದ ವಿರುದ್ಧ ಖರ್ಗೆ ಅವರ ವಾಗ್ದಾಳಿಯು ಈ ಬಂದಿದೆ.
ರಾಜಧಾನಿಗೆ ಆಗಮಿಸುವ ರೈತರನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಸರ್ವಾಧಿಕಾರಿ ಧೋರಣೆ ಎಂದು ಜರಿದಿರುವ ಅವರು ಮೋದಿ ಸರಕಾರ ರೈತರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಅವರು ಎಕ್ಸ್ ಮಾಡಿದ್ದಾರೆ. ಆಂದೋಲನ ಜೀವಿ ಮತ್ತು ಪರಾವಲಂಬಿ ಎಂದು ಕರೆಯುವ ಮೂಲಕ ರೈತರನ್ನು ಹೇಗೆ ಮಾನನಷ್ಟಗೊಳಿಸಲಾಯಿತು ಮತ್ತು 750 ರೈತರು ಹೇಗೆ ಪ್ರಾಣ ಕಳೆದುಕೊಂಡರು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಅವರು ಹಿಂದಿಯಲ್ಲಿ ತಮ್ಮ ಪೆಪೋಸ್ಟ್‍ನಲ್ಲಿ ತಿಳಿಸಿದ್ದಾರೆ.
ಒಂದು ಮಿಲಿಯನ್ ಜನರನ್ನು ಮಂಗಳನ ಅಂಗಳಕ್ಕೆ ಕಳುಹಿಸಲು ಮಸ್ಕ್ ಪ್ಲಾನ್
10 ವರ್ಷಗಳಲ್ಲಿ ಮೋದಿ ಸರ್ಕಾರ ದೇಶದ ಅನ್ನದಾತರಿಗೆ ನೀಡಿದ್ದ ಮೂರು ಭರವಸೆಗಳನ್ನು ಉಲ್ಲಂಘಿಸಿದೆ ಎಂದು ಖರ್ಗೆ ಹೇಳಿದರು. ಅವುಗಳೆಂದರೆ, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಸ್ವಾಮಿನಾಥನ್ ವರದಿಗೆ ಅನುಗುಣವಾಗಿ ಇನ್‍ಪುಟ್ ವೆಚ್ಚಗಳ ಅನುಷ್ಠಾನ ಮತ್ತು ಶೇ.50 ರಷ್ಟು ಮತ್ತು ಎಂಎಸ್‍ಪಿಗೆ ಕಾನೂನು ಸ್ಥಾನಮಾನವನ್ನು ನೀಡುವುದು.
ರೈತರ ಆಂದೋಲನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಖರ್ಗೆ, ಇಂದು ಛತ್ತೀಸ್‍ಗಢದ ಅಂಬಿಕಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರೈತ ಪರ ನ್ಯಾಯದ ಧ್ವನಿ ಎತ್ತಲಿದೆ ಎಂದು ಹೇಳಿದರು. ಇದರ ಜತೆ ನಾವು ಹೆದರುವುದಿಲ್ಲ, ತಲೆಬಾಗುವುದಿಲ್ಲ ಎಂದು ಖರ್ಗೆ ತಮ್ಮ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.