ಬೆಂಗಳೂರು, ಫೆ.13- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿ ಸುವಂತೆ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಹಾಗೂ ಪ್ರಖ್ಯಾತ ವೈದ್ಯ ಡಾ. ಸಿ.ಎನ್. ಮಂಜುನಾಥ್ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಕೋರಲಾಗಿದೆ. ಬೆಂಗಳೂರು ಉತ್ತರ ಇಲ್ಲವೇ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಂಜುನಾಥ ಅವರನ್ನು ಕೋರಲಾಗಿದೆ.ಅದರಲ್ಲೂ ಬಿಜೆಪಿಯಿಂದಲೇ ಹೆಚ್ಚಿನ ಒತ್ತಡ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜಯದೇವ ಆಸ್ಪತ್ರೆಯಿಂದ ನಿವೃತ್ತರಾದ ನಂತರ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಆಲೋಚಿಸಿಲ್ಲ. ವೈದ್ಯ ವೃತ್ತಿಯಲ್ಲೇ ಮುಂದುವರೆಯುವುದಾಗಿ ಮಂಜುನಾಥ್ ಸ್ಪಷ್ಟಪಡಿಸಿದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಜುನಾಥ್ ಅವರ ಮನವೊಲಿಸಿ ಸ್ಪರ್ಧೆಗಿಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಅವರು ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
ಎನ್‍ಸಿಪಿ ಹೆಸರು, ಚಿಹ್ನೆಗಾಗಿ ಸುಪ್ರೀಂ ಮೊರೆ ಹೋದ ಶರದ್‍ಪವಾರ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆಸಿದರೆ ಜೆಡಿಎಸ್ ಪ್ರಾಬಲ್ಯವಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಸುವ ಸಾಧ್ಯತೆಯಿದೆ. ಇಲ್ಲವೆ ಬಿಜೆಪಿ ಚಿಹ್ನೆಯಡಿ ಸ್ರ್ಪಸುವುದಾದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆಸಬಹುದು. ಮಂಜುನಾಥ್ ಅವರ ತವರು ಜಿಲ್ಲೆ ಹಾಸನ ಕ್ಷೇತ್ರದಿಂದ ಹಾಲಿ ಸಂಸದ ಪ್ರಜ್ವಲ್ ಅವರನ್ನೇ ಕಣಕ್ಕಿಳಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗಾಗಲೇ ಘೋಷಿಸಿದ್ದಾರೆ.
ಹೀಗಾಗಿ ಹಾಸನದಿಂದ ಮಂಜುನಾಥ್ ಸ್ಪರ್ಧೆಸಲಿದ್ದಾರೆ ಎಂಬುದರಲ್ಲಿ ಹುರುಳಿಲ್ಲ. ಒಂದು ವೇಳೆ ಸ್ಪರ್ಧೆಸುವುದೇ ಆದರೆ ಬೆಂಗಳೂರು ಗ್ರಾಮಾಂತರ ಇಲ್ಲವೆ, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆಸುವ ಸಾಧ್ಯತೆಯಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.