Homeಜಿಲ್ಲಾ ಸುದ್ದಿಗಳುಜೀವ ತೆಗೆದ ಹೊಸ ಬುಲೆಟ್‌ ಬೈಕ್‌

ಜೀವ ತೆಗೆದ ಹೊಸ ಬುಲೆಟ್‌ ಬೈಕ್‌

ಚಿಕ್ಕಮಗಳೂರು,ಜು.16- ಹೊಸ ಬುಲೆಟ್‌ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಗರದಲ್ಲಿ ನಡೆದಿದೆ.ಮೃತರನ್ನು ಚರಣ್‌ (19) ಎಂದು ಗುರುತಿಸಲಾಗಿದೆ.

ನಗರದ ನರಿಗುಡ್ಡನಹಳ್ಳಿ ಸರ್ಕಲ್‌ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದ ಭೀಕರ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಮಾಹಿತಿಯ ಪ್ರಕಾರ, ರಸ್ತೆ ತಿರುವಿನಲ್ಲಿ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚರಣ್‌ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಅವರು ಹೆಲೆಟ್‌ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಖರೀದಿಸಿದ್ದ ಹೊಸ ಬುಲೆಟ್‌ ಬೈಕ್‌ ಅಪಘಾತದ ತೀವ್ರತೆಗೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಸ್ತೆ ಸುರಕ್ಷತೆ ಹಾಗೂ ಹೆಲೆಟ್‌ ಧಾರಣೆಯ ಮಹತ್ವವನ್ನು ಮತ್ತೊಮೆ ನೆನಪಿಸುವಂತಿವೆ. ಈ ಸಂಬಂಧ ಚಿಕ್ಕಮಗಳೂರು ಸಂಚಾರಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News