Homeರಾಷ್ಟ್ರೀಯಭಾರತೀಯ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿ : ನಾಳೆ ಸ್ಕೈ ರೂಟ್‌ ಸಂಸ್ಥೆಯ ವಿಕ್ರಮ್‌-1 ಉಡಾವಣೆ

ಭಾರತೀಯ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿ : ನಾಳೆ ಸ್ಕೈ ರೂಟ್‌ ಸಂಸ್ಥೆಯ ವಿಕ್ರಮ್‌-1 ಉಡಾವಣೆ

India's first private orbital rocket is ready for liftoff tomorrow

ಶ್ರೀಹರಿಕೋಟಾ,ಜು.17- ಭಾರತೀಯ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿರುವ ಸ್ಕೈರೂಟ್‌ ಏರೋಸ್ಪೇಸ್‌‍ ಸಂಸ್ಥೆಯ ವಿಕ್ರಮ್‌-1 ರಾಕೆಟ್‌ ನಾಳೆ ಉಡಾವಣೆಯಾಗಲಿದೆ.ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 11.30 ಕ್ಕೆ ರಾಕೆಟ್‌ ನಭಕ್ಕೆ ಚಿಮಲಿದೆ.

ಹೈದರಾಬಾದ್‌ ಮೂಲದ ಸ್ಕೈರೂಟ್‌ ಏರೋಸ್ಪೇಸ್‌‍ ಸಂಸ್ಥೆಯು ತಂತ್ರಜ್ಞಾನ ಮತ್ತು ವಾಣಿಜ್ಯ ಎರಡೂ ದೃಷ್ಟಿಕೋನಗಳಿಂದ ಈ ರಾಕೆಟ್‌ ಅನ್ನು ಅತ್ಯಂತ ಚಾಣಾಕ್ಷತನದಿಂದ ವಿನ್ಯಾಸಗೊಳಿಸಿದೆ.ಭಾರತದ ಖಾಸಗಿ ಬಾಹ್ಯಾಕಾಶ ಪಯಣ ಕೇವಲ ನಿನ್ನೆಯದಲ್ಲ. ನವೆಂಬರ್‌ 2022 ರಲ್ಲಿ ಸ್ಕೈರೂಟ್‌ ಸಂಸ್ಥೆಯು ವಿಕ್ರಮ್‌-ಖ ಎಂಬ ಸಬ್‌-ಆರ್ಬಿಟಲ್‌ (ಉಪ-ಕಕ್ಷೀಯ) ರಾಕೆಟ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತದ ಮೊದಲ ಖಾಸಗಿ ರಾಕೆಟ್‌ ಉಡಾಯಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ವಿಕ್ರಮ್‌-ಖ ಕೇವಲ ತಂತ್ರಜ್ಞಾನದ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಯತ್ನವಾಗಿತ್ತು.

ಈಗ ಉಡಾವಣೆಗೆ ಸಜ್ಜಾಗಿರುವ ವಿಕ್ರಮ್‌-1 ಒಂದು ಆರ್ಬಿಟಲ್‌-ಕ್ಲಾಸ್‌‍ (ಕಕ್ಷೀಯ ಶ್ರೇಣಿಯ) ರಾಕೆಟ್‌ ಆಗಿದೆ. ಅಂದರೆ, ಇದು ಉಪಗ್ರಹಗಳನ್ನು ಭೂಮಿಯ ಸುತ್ತ ನಿಗದಿತ ಕಕ್ಷೆಯಲ್ಲಿ ಸ್ಥಾಪಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ. ಇದು ಕೇವಲ ಪ್ರಯೋಗವಲ್ಲ, ಇದು ಪೂರ್ಣ ಪ್ರಮಾಣದ ವಾಣಿಜ್ಯ ಬಾಹ್ಯಾಕಾಶ ಸಂಸ್ಥೆಯಾಗಿ ಸ್ಕೈರೂಟ್‌ ಬೆಳೆದಿರುವುದಕ್ಕೆ ಸಾಕ್ಷಿ.
ಕಳೆದ ಕೆಲವು ವರ್ಷಗಳಲ್ಲಿ ಭಾರತ ಸರ್ಕಾರವು ಬಾಹ್ಯಾಕಾಶ ವಲಯವನ್ನು ಖಾಸಗೀಕರಣಕ್ಕೆ ಮುಕ್ತಗೊಳಿಸಿದ್ದು ಮತ್ತು ಐಘೆ-ಖಅಇಛಿ (ಇನ್‌-ಸ್ಪೇಸ್‌‍) ಸಂಸ್ಥೆಯನ್ನು ಸ್ಥಾಪಿಸಿದ್ದು ಈ ಯಶಸ್ಸಿಗೆ ಪ್ರಮುಖ ಕಾರಣ.

ಇಸ್ರೋ ಪಾತ್ರ :
ಇಸ್ರೋ ಈಗ ಕೇವಲ ರಾಕೆಟ್‌ ಉಡಾವಣೆಗಷ್ಟೇ ಸೀಮಿತವಾಗದೆ, ಖಾಸಗಿ ಸ್ಟಾರ್ಟ್‌-ಅಪ್‌ಗಳಿಗೆ ತನ್ನ ಉಡಾವಣಾ ವೇದಿಕೆ ಮತ್ತು ತಾಂತ್ರಿಕ ಮೂಲಸೌಕರ್ಯಗಳನ್ನು ಮುಕ್ತವಾಗಿ ಬಳಸಲು ಬಿಡುತ್ತಿದೆ. 3 ಡಿ ಪ್ರಿಂಟಿಂಗ್‌ ಎಂಜಿನ್‌ ಬಳಸಿರುವುದು ಉತ್ಪಾದನಾ ವೆಚ್ಚ ಮತ್ತು ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದು ಭಾರತದ ಮೇಕ್‌ ಇನ್‌ ಇಂಡಿಯಾ ಮತ್ತು ಆತನಿರ್ಭರತೆಗೆ ಅತ್ಯುತ್ತಮ ಉದಾಹರಣೆ.

ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಸಣ್ಣ ಉಪಗ್ರಹಗಳ ಬೇಡಿಕೆ ವಿಪರೀತವಾಗಿದೆ. ಸಂವಹನ, ಹವಾಮಾನ ಮುನ್ಸೂಚನೆ ಮತ್ತು ಇಂಟರ್ನೆಟ್‌ ಸೇವೆಗಳಿಗಾಗಿ ಜಗತ್ತಿನಾದ್ಯಂತ ಸಾವಿರಾರು ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಬೇಕಿದೆ.

ಜಾಗತಿಕವಾಗಿ ಎಲಾನ್‌ ಮಸ್ಕ್‌ ಅವರ ಖ್ಚಛಿಗಿ (ಸ್ಪೇಸ್‌‍ಎಕ್ಸ್ ) ದೊಡ್ಡ ರಾಕೆಟ್‌ಗಳ ಮಾರುಕಟ್ಟೆಯನ್ನು ಆಳುತ್ತಿದ್ದರೆ, ಸಣ್ಣ ಮತ್ತು ಕಡಿಮೆ ವೆಚ್ಚದ ರಾಕೆಟ್‌ಗಳ ಮಾರುಕಟ್ಟೆಯಲ್ಲಿ ಭಾರತದ ಸ್ಕೈರೂಟ್‌ ದೊಡ್ಡ ಪೈಪೋಟಿ ನೀಡಲು ಸಜ್ಜಾಗಿದೆ. ಕಡಿಮೆ ವೆಚ್ಚದಲ್ಲಿ ಮತ್ತು ಅತಿ ಶೀಘ್ರವಾಗಿ ಉಪಗ್ರಹಗಳನ್ನು ಉಡಾವಣೆ ಮಾಡಿಕೊಡುವ ಸಾಮರ್ಥ್ಯ ವಿಕ್ರಮ್‌-1 ಗಿರುವುದರಿಂದ, ವಿದೇಶಿ ಕಂಪನಿಗಳು ಭಾರತದತ್ತ ಮುಖ ಮಾಡುವುದು ಗ್ಯಾರಂಟಿ.

RELATED ARTICLES

Latest News