ವಾಷಿಂಗ್ಟನ್, ಫೆ.15:ಅಮೆರಿಕದ ಅಲಬಾಮಾ ರಾಜ್ಯದ ಹೋಟಲ್ ಕೋಣೆಯೊಂದರ ವಿಚಾರವಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಮೋಟೆಲ್ ಮಾಲೀಕನನ್ನು ಗ್ರಾಹಕನೊಬ್ಬ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ನಡೆದಿದೆ. ಶೆಫೀಲ್ಡ್‍ನಲ್ಲಿ ಹಿಲ್‍ಕ್ರೆಸ್ಟ್ ಹೋಟೆಲ್ ಮಾಲೀಕರಾಗಿದ್ದ ಪ್ರವೀಣ್ ರಾವ್ಜಿಭಾಯ್ ಪಟೇಲ್(77) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವಿಲಿಯಂ ಜೆರೆಮಿ ಮೂರ್(34) ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಶೆಫೀಲ್ಡ ಪೊಲೀಸ್ ಮುಖ್ಯಸ್ಥ ರಿಕಿ ಟೆರಿರ್ ತಿಳಿಸಿದ್ದಾರೆ.
ಆರೋಪಿ ಮೂರೇ ರೂಂ ಬಾಡಿಗೆಗೆಂದು ಬಂದಾಗ ನಡೆದ ಜಗಳದ ಉಂಟಾಗಿ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆತನನ್ನು ಬಂದಿಸಲು ಹೋದಾಗ ಆತ ಪಾರಾರಿಯಾಗಲು ಯತ್ನಿಸಿದ ಆದರೂ ಆತನನ್ನು ಸೆರೆಹಿಡಿಯಲಾಗಿದೆ ಮತ್ತು ಆತನ ಬಳಿ ಆಯುಧ ಪತ್ತೆಯಾಗಿದೆ. ಕ್ಷೌರಿಕ ಜೆಮೆರಿಜ್ ಓವೆನ್ಸ ಘಟನೆಗೆ ಸಾಕ್ಷಿಯಾದಿದ್ದು ಆತನ ಪ್ರಕಾರ ನಾನು ಮೂರು ಗುಂಡೇಟು ಶಬ್ಧ ಕೇಳಿದೆ, ನಾನು ಅದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಏಷ್ಯನ್ ಅಮೇರಿಕನ್ ಹೋಟೆಲ್ ಮಾಲೀಕರ ಸಂಘ, ಅಮೆರಿಕದ ಹೋಟೆಲ್ ಮಾಲೀಕರು ತೀವ್ರ ದುಃಖ ವ್ಯಕ್ತಪಡಿಸಿ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ ಮತ್ತು ಸಣ್ಣ ವ್ಯಾಪಾರ ಮಾಲೀಕರ ವಿರುದ್ಧದ ಈ ಪ್ರಜ್ಞಾಶೂನ್ಯ ಹಿಂಸಾಚಾರದಿಂದ ಅವರ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪರಿಷತ್‍ನಲ್ಲಿ ತೆರಿಗೆ ಕೋಲಾಹಲ ; ಆಡಳಿತ ಪ್ರತಿಪಕ್ಷಗಳ ವಾಕ್ಸಮರ
ಅವರ ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಪ್ರವೀಣ್ ಅವರ ಕುಟುಂಬಕ್ಕಾಗಿ ನಮ್ಮ ಹೃದಯಗಳು ಒಡೆಯುತ್ತಿವೆ ಎಂದು ಸಂಘ ಅಧ್ಯಕ್ಷ ಭರತ್ ಪಟೇಲ್ ಹೇಳಿದ್ದಾರೆ. ಅಲಬಾಮಾ ಪ್ರಾದೇಶಿಕ ನಿರ್ದೇಶಕ ಸಂಜಯ್ ಎಂ. ಪಟೇಲ್ ಅವರು ಪ್ರವೀಣ್ ಪಟೇಲ್ ಅವರು ಶೆಫೀಲ್ಡ ಪಟ್ಟಣದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅದೇ ಮೋಟೆಲ್ ಅನ್ನು ಹೊಂದಿದ್ದರು ಮತ್ತು ನಿರ್ವಹಿಸುತ್ತಿದ್ದಾರೆ.ಅವರು ತುಂಬು ಕುಟುಂಬ-ಆಧಾರಿತ ವ್ಯಕ್ತಿ, ಜಾಲಿ, ಮತ್ತು ತೀಕ್ಷ್ಣ ಉದ್ಯಮಿ ಎಂದು ಸಂಜಯ್ ಹೇಳಿದರು.
40 ವರ್ಷಕ್ಕೂ ಹೆಚ್ಚು ಕಾಲ ಅಲ್ಲಿದ್ದ ನಂತರ ಊರಿನ ಪ್ರತಿಯೊಬ್ಬರೂ ಅವರನ್ನು ಸಮುದಾಯದಲ್ಲಿ ಪರಿಚಿತ ಮುಖವೆಂದು ತಿಳಿದಿದ್ದಾರೆ ಮತ್ತು ಕುಟುಂಬವು ನಿಜವಾದ ಮತ್ತು ಕಾಳಜಿಯಿಂದ ಸಮುದಾಯದಲ್ಲಿ ಹೆಸರುವಾಸಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಇತ್ತೀಚಿನ ತಿಂಗಳುಗಳಲ್ಲಿ ದೇಶದಲ್ಲಿ ಭಾರತೀಯ ಅಥವಾ ಭಾರತೀಯ-ಅಮೆರಿಕನ್ ಸಾವುಗಳ ಸರಣಿ ಸಂಭವಿಸಿದೆ.