ಬೆಂಗಳೂರು,ಫೆ.17- ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಕಂಟ್ರೊಲ್ ಗೆ ಬ್ರೇಕ್ ಹಾಕಲು ಬಿಬಿಎಂಪಿ ಹೊಸ ಯೋಜನೆ ರೂಪಿಸಿದೆ. ಬ್ಯಾಕ್ ಟು ಬ್ಯಾಕ್ ಬಿಎಂಟಿಸಿಯಿಂದ ಆಗುತ್ತಿರುವ ಆಕ್ಸಿಡೆಂಟ್‍ಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಬಸ್ ಲೇನ್ ಯೋಜನೆ ಜಾರಿಗೆ ತರಲು ತೀರ್ಮಾನಿಸಿದ್ದಾರೆ.
ಹೆಚ್ಚು ಟ್ರಾಫಿಕ್ ಇರುವ 9 ಕಾರಿಡಾರ್ ಗಳಲ್ಲಿ ಬಸ್ ಲೇನ್ ನಿರ್ಮಿಸಲು ಪ್ಲಾನ್ ಮಾಡಲಾಗಿದೆ. ಬಿಎಂಟಿಸಿ ಮನವಿ ಹಿನ್ನೆಲೆ ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಗಳಲ್ಲಿ ಬಸ್ ಲೇನ್ ಹಾಗೂ ಬಳ್ಳಾರಿ ರಸ್ತೆ, ಕನಕಪುರ ರಸ್ತೆ ಸೇರಿದಂತೆ 9 ಕಾರಿಡಾರ್‍ಗಳಲ್ಲಿ ಸಪರೇಟ್ ಬಸ್ ಲೇನ್ ನಿರ್ಮಿಸಲಾಗುತ್ತಿದೆ. ನಗರದಲ್ಲಿ ಒಟ್ಟು 83 ಕಿಲೋ ಮೀಟರ್ ಬಸ್ ಲೇನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಖಾಸಗಿ ಏಜೆನ್ಸಿಯಿಂದ ಬಸ್ ಲೇನ್ ಡಿಸೈನ್ ಸಿದ್ಧವಾಗ್ತಿದ್ದು ಬಸ್ ಲೇನ್ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ.
ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ಇಮ್ರಾನ್ ಖಾನ್ ಸಮ್ಮತಿ
ಸದ್ಯದಲ್ಲೇ ಬಸ್ ಲೇನ್ ಪಥ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲು ಬಿಬಿಎಂಪಿ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಸಿಲ್ಕ ಬೋರ್ಡ್‍ನಿಂದ ಕೆ.ಆರ್.ಪುರ ಟಿನ್ ಫ್ಯಾಕ್ಟರಿವರೆಗೆ ಟೆಸ್ಟಿಂಗ್ ಗಾಗಿ ನಿರ್ಮಿಸಿದ್ದ ಬಸ್ ಲೇನ್ ಯಶಸ್ವಿಯಾಗಿತ್ತು. ಆದರೆ ಮೆಟ್ರೊ ಕಾಮಗಾರಿಯಿಂದಾಗಿ ಆ ಪಥ ಸದ್ಯ ಕಾರ್ಯಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ನಗರದ 9 ಕಾರಿಡಾರ್‍ಗಳಲ್ಲಿ 280 ಕೋಟಿ ವೆಚ್ವದಲ್ಲಿ 83 ಕಿ.ಮೀ. ಬಸ್ ಲೇನ್ ಮಾಡಲು ತೀರ್ಮಾನಿಸಲಾಗಿದೆ. ಆಯಾ ರಸ್ತೆಗಳಲ್ಲಿ 3.5 ಮೀಟರ್ ಅಗಲವನ್ನು ಮಾತ್ರ ಬಸ್‍ಗಳ ಸಂಚಾರಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ.
ಅಲ್ಲಿ ಬಿಎಂಟಿಸಿ, ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಇತರೆ ವಾಹನಗಳು ಬರೋದನ್ನ ತಡೆಯಲು ಫೈಬರ್ ರಿಇನೊೈಸ್ಡ್‍ರ್ ಬೊ ರ್ಡ್ ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.