Homeಅಂತಾರಾಷ್ಟ್ರೀಯಇರಾನ್‌ ವಿರುದ್ದ ಯುದ್ಧಕ್ಕೆ ಇದುವರೆಗೆ 37.5 ಬಿಲಿಯನ್‌ ಡಾಲರ್‌ ವ್ಯಯಿಸಿದ ಅಮೆರಿಕ

ಇರಾನ್‌ ವಿರುದ್ದ ಯುದ್ಧಕ್ಕೆ ಇದುವರೆಗೆ 37.5 ಬಿಲಿಯನ್‌ ಡಾಲರ್‌ ವ್ಯಯಿಸಿದ ಅಮೆರಿಕ

Iran war cost USD 37.5 billion, says US Defence Secretary

ವಾಷಿಂಗ್ಟನ್‌‍, ಜುಲೈ 22-ಇರಾನ್‌ ವಿರುದ್ಧದ ಯುದ್ಧಕ್ಕೆ ಇದುವರೆಗೆ 37.5 ಬಿಲಿಯನ್‌ ಅಮೆರಿಕನ್‌ ಡಾಲರ್‌ ವೆಚ್ಚವಾಗಿದೆ ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ತಿಳಿಸಿದ್ದಾರೆ. ಸೇನೆಗೆ ಹಣಕಾಸು ಒದಗಿಸುವ ಉದ್ದೇಶದಿಂದ ರಿಪಬ್ಲಿಕನ್‌ ಪಕ್ಷವು 95 ಬಿಲಿಯನ್‌ ಡಾಲರ್‌ ಮೊತ್ತದ ಬಜೆಟ್‌ ಪ್ಯಾಕೇಜ್‌ ಮಂಡಿಸಲು ಸಜ್ಜಾಗಿರುವ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಅಮೆರಿಕ ಸೆನೆಟ್‌ನ ಅನುದಾನ ಸಮಿತಿಯ ಮುಂದೆ ಸಾಕ್ಷ್ಯ ನೀಡಿದ ಹೆಗ್ಸೆತ್‌‍, ಯುದ್ಧ ವೆಚ್ಚದ ಹೊಸ ಅಂದಾಜನ್ನು ಪ್ರಕಟಿಸಿದರು. ಇದು ಈ ಹಿಂದೆ ನೀಡಿದ್ದ ಅಂದಾಜಿಗಿಂತ ಹೆಚ್ಚಾಗಿದೆ.
ವಿಚಾರಣೆ ವೇಳೆ ಹಲವಾರು ಬಾರಿ ಪ್ರತಿಭಟನಾಕಾರರು ಹೆಗ್ಸೆತ್‌ ಅವರ ಆರಂಭಿಕ ಭಾಷಣಕ್ಕೆ ಅಡ್ಡಿಪಡಿಸಿದರು. ಇದೇ ವೇಳೆ, ಪೆಂಟಗನ್‌ ಇತ್ತೀಚೆಗೆ ಇರಾನ್‌ ಸಂಘರ್ಷದಲ್ಲಿ ಇನ್ನೂ ಮೂವರು ಅಮೆರಿಕದ ಸೈನಿಕರು ಮೃತಪಟ್ಟಿದ್ದು, ಜುಲೈ ಆರಂಭದಿಂದ ಇದುವರೆಗೆ ಮೃತಪಟ್ಟ ಸೈನಿಕರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿತ್ತು. ಇದೇ ಅವಧಿಯಲ್ಲಿ 100ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ.

ಯುದ್ಧಕ್ಕೆ ಅಗತ್ಯವಿರುವ ಹೆಚ್ಚುವರಿ ಹಣಕಾಸು ಒದಗಿಸುವುದು ತುರ್ತು ಮತ್ತು ಅನಿವಾರ್ಯವಾಗಿದೆ ಎಂದು ಹೆಗ್ಸೆತ್‌ ಹೇಳಿದರು. ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಪ್ರಸ್ತಾಪಿಸಿರುವ 1.5 ಟ್ರಿಲಿಯನ್‌ ಡಾಲರ್‌ ರಕ್ಷಣಾ ಬಜೆಟ್‌ ಸೇನೆಯ ಭವಿಷ್ಯಕ್ಕಾಗಿ ಮಹತ್ವದ ಹೂಡಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಹೆಚ್ಚುವರಿ ಅನುದಾನವಿಲ್ಲದೆ ನಾವು ಗಂಭೀರ ಹಣಕಾಸಿನ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂದು ಹೆಗ್ಸೆತ್‌ ಸಮಿತಿಗೆ ತಿಳಿಸಿದರು.ಆದರೆ, ಸಮಿತಿಯ ಹಿರಿಯ ಡೆಮಾಕ್ರಾಟ್‌ ಸದಸ್ಯೆ ಸೆನೆಟರ್‌ ಪ್ಯಾಟಿ ಮರೆ ಈ ಯುದ್ಧವನ್ನು ಮತ್ತೊಂದು ಅಂತ್ಯವಿಲ್ಲದ ಯುದ್ಧ ಎಂದು ಟೀಕಿಸಿದರು.

ಈ ಯುದ್ಧ ಮತ್ತೆ ನಿಯಂತ್ರಣ ತಪ್ಪುವ ಹಂತಕ್ಕೆ ತಲುಪಿದೆ. ಅಧ್ಯಕ್ಷ ಟ್ರಂಪ್‌ 40ಕ್ಕೂ ಹೆಚ್ಚು ಬಾರಿ ಶೀಘ್ರದಲ್ಲೇ ಒಪ್ಪಂದವಾಗಲಿದೆ ಮತ್ತು ಯುದ್ಧ ಮುಗಿಯಲಿದೆ ಎಂದು ಹೇಳಿದ್ದಾರೆ. ಆದರೆ ಈಗ ಅವರು ಇನ್ನೂ 70 ಬಿಲಿಯನ್‌ ಡಾಲರ್‌ ಹೆಚ್ಚುವರಿ ಅನುದಾನ ಕೇಳುತ್ತಿದ್ದಾರೆ. ಎಲ್ಲವೂ ಸರಿಯಾಗುತ್ತದೆ ಎಂದು ನಾವು ಅವರನ್ನು ನಂಬಬೇಕೆಂದು ಹೇಳುತ್ತಿದ್ದಾರೆ ಎಂದು ಮರೆ ಆರೋಪಿಸಿದರು.

ಈ ವಿಚಾರಣೆಯಲ್ಲಿ ಜಂಟಿ ಸೇನಾ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್‌ ಡ್ಯಾನ್‌ ಕೇನ್‌ ಹಾಗೂ ಕೃಷಿ ಸಚಿವ ಬ್ರೂಕ್‌ ರೋಲಿನ್ಸ್ ಕೂಡ ಭಾಗವಹಿಸಿದ್ದರು.ಪ್ರಸ್ತಾವಿತ ಬಜೆಟ್‌ ಪ್ಯಾಕೇಜ್‌ನಲ್ಲಿ 10 ಬಿಲಿಯನ್‌ ಡಾಲರ್‌ ಕೃಷಿ ನೆರವಿಗೆ ಹಾಗೂ 10 ಬಿಲಿಯನ್‌ ಡಾಲರ್‌ ಮತದಾನ ಕಾನೂನುಗಳ ಬದಲಾವಣೆಗಳಿಗೆಮೀಸಲಿಡಲಾಗಿದೆ.ವಿಚಾರಣೆ ಆರಂಭಕ್ಕೂ ಮುನ್ನ ಶ್ವೇತಭವನ ಪ್ರಕಟಣೆ ಹೊರಡಿಸಿ, ಯಾವುದೇ ತಿದ್ದುಪಡಿ ಮಾಡದೆ ಬಜೆಟ್‌ ನಿರ್ಣಯವನ್ನು ತಕ್ಷಣವೇ ಅಂಗೀಕರಿಸುವಂತೆ ಮನವಿ ಮಾಡಿದೆ.

RELATED ARTICLES

Latest News