Saturday, November 23, 2024
Homeರಾಜ್ಯಕುಪೇಂದ್ರರೆಡ್ಡಿ ಗೆಲುವಿಗೆ ಜೆಡಿಎಸ್ - ಬಿಜೆಪಿ ರಣತಂತ್ರ

ಕುಪೇಂದ್ರರೆಡ್ಡಿ ಗೆಲುವಿಗೆ ಜೆಡಿಎಸ್ – ಬಿಜೆಪಿ ರಣತಂತ್ರ

ಬೆಂಗಳೂರು,ಫೆ.17- ವಿಧಾನಸಭೆಯಿಂದ ರಾಜ್ಯಸಭೆಗೆ ಫೆ.27ರಂದು ನಡೆಯುವ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಇಬ್ಬರು ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರದ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ. ನಿನ್ನೆ ಖಾಸಗಿ ಹೋಟೆಲ್‍ನಲ್ಲಿ ಸಭೆ ಸೇರಿದ್ದ ಉಭಯ ಪಕ್ಷಗಳ ನಾಯಕರು ಇಬ್ಬರು ಅಭ್ಯರ್ಥಿಗಳ ಗೆಲುವಿನ ಸಾಧ್ಯಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಕೆ.ಬಾಂಡೆಗೆ ಅವರು ಗೆಲುವು ಸುಲಭವಾಗಲಿದೆ. ಅವರ ಗೆಲುವಿಗೆ ಅಗತ್ಯವಿರುವ 45 ಶಾಸಕರ ಮತಗಳನ್ನು ಚಲಾಯಿಸುವುದು, ಉಳಿದ ಬಿಜೆಪಿ ಶಾಸಕರ ಹೆಚ್ಚುವರಿ ಮತಗಳನ್ನು ಕುಪೇಂದ್ರ ರೆಡ್ಡಿ ಅವರಿಗೆ ಚಲಾಯಿಸಲು ನಿರ್ಧರಿಸಲಾಗಿದೆ. ಆದರೂ ಕುಪೇಂದ್ರ ರೆಡ್ಡಿ ಅವರ ಗೆಲುವಿಗೆ ಕೊರತೆಯಾಗುವ ಮತಗಳನ್ನು ಗಳಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿದಂತೆ ಉಭಯ ಪಕ್ಷಗಳ ನಾಯಕರು ಖಾಸಗಿ ಹೋಟೆಲ್‍ನಲ್ಲಿ ಸಭೆ ಸೇರಿ ಚರ್ಚಿಸಿದ್ದಾರೆ.

ಮೋದಿ ಸರ್ಕಾರ ದೇಶದ ರೈತರಿಗೆ ಶಾಪವಾಗಿದೆ : ಖರ್ಗೆ

ಕಾಂಗ್ರೆಸ್‍ನಲ್ಲಿರುವ ಅಸಮಾಧಾನಿತ ಶಾಸಕರ ಮತ ಪಡೆಯುವುದು ಹೇಗೆ? ಪಕ್ಷೇತರ ಶಾಸಕರ ಮತ ಪಡೆಯುವುದು ಸೇರಿದಂತೆ ಸಾಧ್ಯವಿರುವ ಎಲ್ಲ ಮಾರ್ಗಗಳ ಬಗ್ಗೆಯೂ ಚರ್ಚೆ ನಡೆಸಿದ್ದು, ಶತಾಯ ಗತಾಯ ರಾಜ್ಯಸಭೆ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟದ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯಸಭೆ ಚುನಾವಣೆಯ 5ನೇ ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿ ಅವರ ಗೆಲುವಿನ ಸಾಧಕ-ಬಾಧಕಗಳು ಈ ಸಭೆಯಲ್ಲಿ ಚರ್ಚಿತವಾಗಿರುವ ವಿಚಾರಗಳನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತರಲು ನಿರ್ಧರಿಸಲಾಗಿದೆ. ಬಿಜೆಪಿ ವರಿಷ್ಠರು ನೀಡುವ ಮಾರ್ಗದರ್ಶನದಂತೆ ರಾಜ್ಯಸಭೆ ಚುನಾವಣೆಯನ್ನು ಎದುರಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

RELATED ARTICLES

Latest News