ದೆಹಲಿ, ಫೆ.18- ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ರಿಸರ್ವ್ ಬ್ಯಾಂಕಿನ ನಿಯಂತ್ರಣ ಕ್ರಮವು ಫಿನ್‍ಟೆಕ್ ಸಂಸ್ಥೆಗಳು ಕಾನೂನುಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವರಾಗಿರುವ ಚಂದ್ರಶೇಖರ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಮಸ್ಯೆಯು ಎಚ್ಚರಿಕೆಯ ಗಂಟೆಯಾಗಿದೆ.
ಕಾನೂನು ಮೀರಿದ ಕ್ರಮಗಳಿಂದ ಯಾವುದೇ ಕಂಪನಿಯಾದರೂ ಅಂತರ ಕಾಯ್ದುಕೊಳ್ಳಬೇಕು. ಅದು ಭಾರತ ಅಥವಾ ವಿದೇಶದ ಕಂಪೆನಿಯಾದರೂ ಸರಿ, ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ದೇಶದ ಕಾನೂನಿಗೆ ಬದ್ಧವಾಗಿರಬೇಕು ಎಂದು ಪ್ರತಿಪಾದಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 15 ರಿಂದ ಪೇ ಟಿಎಂ ಹೊಸ ಠೇವಣಿಗಳನ್ನು ಸ್ವೀಕರಿಸುವುದನ್ನು ನಿರ್ಬಂಸಿದೆ. ಪಿಪಿಬಿಎಲ್ ಮೇಲಿನ ಆರ್‍ಬಿಐ ಕ್ರಮವು ಫಿನ್‍ಟೆಕ್ ಸಂಸ್ಥೆಗಳನ್ನು ಕೆರಳಿಸಿದೆ ಎಂಬ ಭಾವನೆ ಸರಿಯಲ್ಲ. ಫಿನ್‍ಟೆಕ್ ಉದ್ಯಮಕ್ಕೆ ಹಾನಿಕಾರಕ ಪರಿಣಾಮಗಳಾಗಿವೆ ಎಂಬ ಆತಂP ಒಪ್ಪಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರ್ಕಾರದ ಕ್ರಮ ಫಿನ್‍ಟೆಕ್ ಉದ್ಯಮಿಗಳ ಗಮನವನ್ನು ಸೆಳೆದಿದೆ. ಕಾನೂನನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಸಹ ತಿಳಿದಿರಬೇಕು. ನಿಯಂತ್ರಕ ಅನುಸರಣೆ ವಿಶ್ವದ ಯಾವುದೇ ದೇಶಕ್ಕೆ ಐಚ್ಛಿಕ ವಿಷಯವಲ್ಲ, ಕಾನೂನುಗಳನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ. ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಕಡೆಗಣಿಸಬಾರದು ಎಂದು ಹೇಳಿದರು.