Homeರಾಜ್ಯಓಣಂಗೆ ವಿಶೇಷ ಎಕ್ಸ್ ಪ್ರೆಸ್‌‍ ರೈಲುಗಳ ಸಂಚಾರ

ಓಣಂಗೆ ವಿಶೇಷ ಎಕ್ಸ್ ಪ್ರೆಸ್‌‍ ರೈಲುಗಳ ಸಂಚಾರ

Special Express trains for Onam

ಮೈಸೂರು,ಜು.23- ಓಣಂ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ನೈಋತ್ಯ ರೈಲ್ವೆ ಮೈಸೂರು, ಕಣ್ಣೂರು, ಬೆಂಗಳೂರು ದಂಡು ನಡುವೆ ತಲಾ ಎರಡು ಟ್ರಿಪ್‌ ವಿಶೇಷ ಎಕ್ಸ್ ಪ್ರೆಸ್‌‍ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ.

ರೈಲು ವಿವರಗಳು :
ರೈಲು ಸಂಖ್ಯೆ-06227 ಮೈಸೂರು-ಕಣ್ಣೂರು ವಿಶೇಷ ಎಕ್ಸ್ ಪ್ರೆಸ್‌‍ ರೈಲು ಆ.25ರಂದು ರಾತ್ರಿ 22:30ಕ್ಕೆ ಮೈಸೂರಿನಿಂದ ಹೊರಟು, ಮರುದಿನ 14:00 ಗಂಟೆಗೆ ಕಣ್ಣೂರು ತಲುಪಲಿದೆ.
ಹಿಂತಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 06228 ಕಣ್ಣೂರು-ಬೆಂಗಳೂರು ದಂಡು ವಿಶೇಷ ಎಕ್‌್ಸಪ್ರೆಸ್‌‍ ಆ.26ರ ಸಂಜೆ 18:25 ಗಂಟೆಗೆ ಕಣ್ಣೂರಿನಿಂದ ಹೊರಟು, ಮರುದಿನ 08:35 ಗಂಟೆಗೆ ಬೆಂಗಳೂರು ದಂಡು ತಲುಪಲಿದೆ.

ರೈಲು ಸಂಖ್ಯೆ 06229 ಮೈಸೂರು-ಕಣ್ಣೂರು ವಿಶೇಷ ಎಕ್‌್ಸಪ್ರೆಸ್‌‍ ಆ.29ರ ರಾತ್ರಿ 23:55 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ 17:50 ಗಂಟೆಗೆ ಕಣ್ಣೂರು ತಲುಪಲಿದೆ.
ಹಿಂತಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 06230 ಕಣ್ಣೂರು-ಬೆಂಗಳೂರು ದಂಡು ವಿಶೇಷ ಎಕ್‌್ಸಪ್ರೆಸ್‌‍ ಆ.30ರ ಸಂಜೆ 19:45 ಗಂಟೆಗೆ ಕಣ್ಣೂರಿನಿಂದ ಹೊರಟು, ಮರುದಿನ 10:00 ಗಂಟೆಗೆ ಬೆಂಗಳೂರು ದಂಡು ತಲುಪಲಿದೆ.

ಮಾರ್ಗ ಮತ್ತು ನಿಲುಗಡೆಗಳು :
ಮೈಸೂರು-ಕಣ್ಣೂರು ವಿಶೇಷ ರೈಲುಗಳು ಮಂಡ್ಯ, ಕೆಎಸ್‌‍ಆರ್‌ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್‌, ಸೇಲಂ ಜಂಕ್ಷನ್‌, ಈರೋಡ್‌ ಜಂಕ್ಷನ್‌, ತಿರುಪ್ಪೂರು, ಪೊದನೂರು ಜಂಕ್ಷನ್‌, ಪಾಲಕ್ಕಾಡ್‌ ಜಂಕ್ಷನ್‌, ಶೋರನೂರು ಜಂಕ್ಷನ್‌, ತಿರೂರು, ಖಾಜಿಕೊಡ, ವಡಕರ ಮತ್ತು ತಲಶ್ಶೇರಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.

ಹಿಂತಿರುಗುವ ದಿಕ್ಕಿನಲ್ಲಿ ಸಂಚರಿಸುವ ಕಣ್ಣೂರು-ಬೆಂಗಳೂರು ದಂಡು ವಿಶೇಷ ರೈಲು ಬೆಂಗಳೂರು ದಂಡು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ.

ಬೋಗಿಗಳ ವಿವರ :
ಈ ವಿಶೇಷ ರೈಲುಗಳಲ್ಲಿ ಒಟ್ಟು 20 ಬೋಗಿಗಳು ಇರಲಿವೆ. ಅದರಲ್ಲಿ 1 ಎಸಿ ಟು ಟಯರ್‌ ಬೋಗಿ, 2 ಎಸಿ ತ್ರಿ ಟಯರ್‌ ಬೋಗಿಗಳು, 9 ಸ್ಲೀಪರ್‌ ಕ್ಲಾಸ್‌‍ ಬೋಗಿಗಳು, 6 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್‌-ಕಮ್‌‍-ಬ್ರೇಕ್‌ ವ್ಯಾನ್‌ಗಳು ಸೇರಿವೆ. ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಘೋಷಿಸಿದೆ.

RELATED ARTICLES

Latest News