Friday, December 12, 2025
Homeರಾಜ್ಯಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್‌ ಸ್ಥಾಪನೆ : ಸಚಿವ ಎಂ.ಬಿ.ಪಾಟೀಲ್‌

ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್‌ ಸ್ಥಾಪನೆ : ಸಚಿವ ಎಂ.ಬಿ.ಪಾಟೀಲ್‌

Defense Park to be established in Belgaum: Minister M.B. Patil

ಬೆಳಗಾವಿ, ಡಿ.12- ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್‌ ಸ್ಥಾಪನೆ ಮಾಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ವಿಧಾನಸಭೆಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರ ಅರವಿಂದ ಬೆಲ್ಲದ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾರ್ಕ್‌ ಸ್ಥಾಪನೆ ಸಂಬಂಧ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆದಿವೆ ಎಂದರು.

ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್‌ಗೆ ಸಂಬಂಧಿಸಿದಂತೆ 300 ಎಕರೆ ಒದಗಿಸಲಾಗಿದೆ. ಏರೋಸ್ಪೇಸ್‌‍ ಡಿಫೆನ್ಸ್ ಕಾರಿಡಾರ್‌ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ದೇವನಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಾಗಿದ್ದು, ಅದು ಕೃಷಿವಲಯವಾಗಿದೆ ಎಂದರು.

ಅದು ಜಾಗತಿಕ ಮಟ್ಟದಲ್ಲಿ ಎಕೋಸಿಸ್ಟಮ್‌ ಹಾಗೂ ಏರೋ ಸಿಸ್ಟಮ್‌ಗೆ ಸಾಕಷ್ಟು ಬೇಡಿಕೆಯಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಭಾಗದಲ್ಲಿ ಏರೋ ಸ್ಪೇಸ್‌‍ ಆಗುವ ಸಾಧ್ಯತೆಗಳು ಇವೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಎಕೋ ಸಿಸ್ಟಮ್‌ ಸಾಕಷ್ಟು ಬೆಳೆಯುತ್ತಿದೆ ಎಂದ ಅವರು, ನಗರ ಪ್ರದೇಶದಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳಿಗೆ ಉತ್ತೇಜನ ಸಿಗುವುದಿಲ್ಲ .ಆದರೆ ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಗೆ ಶೇ.3ರಿಂದ 5ರಷ್ಟು ಉತ್ತೇಜನ ಸಿಗಲಿದೆ ಎಂದರು
ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ತಂದಿದ್ದು, ಎಲ್ಲಾ ರಾಜ್ಯಗಳಿಗಿಂತಲೂ ಉತ್ತಮವಾಗಿದೆ. ಏರೋ ಸ್ಪೇಸ್‌‍ ಪಾಲಿಸಿ ವಿಶೇಷವಾಗಿದೆ. ಕ್ಲೀನ್‌ ಮೊಬಿಲಿಟಿ ನೀತಿಯನ್ನು ಜಾರಿ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಅರವಿಂದ ಬೆಲ್ಲದ್‌ ಅವರು, ರಾಜ್ಯದಲ್ಲಿ 3 ಕಡೆ ಡಿಫೆನ್‌್ಸ ಪಾರ್ಕ್‌ಗೆ ಸ್ಥಳ ಕೇಳುವ ಬದಲು ನಿರ್ದಿಷ್ಟವಾಗಿ ಒಂದು ಕಡೆ ಕೇಳಬೇಕು. ಬೆಂಗಳೂರು ಬಿಟ್ಟು ಹೊರಗಡೆ ಬರುವುದಿಲ್ಲ ಹೀಗಾಗಿ ಬೆಂಗಳೂರು ಹೊರತುಪಡಿಸಿ ಬೇರೆಡೆ ಡಿಫೆನ್‌್ಸ ಪಾರ್ಕ್‌ ಸ್ಥಾಪಿಸಬೇಕು ಎಂಬ ಸಲಹೆ ನೀಡಿದರು.

RELATED ARTICLES

Latest News