ಬೆಂಗಳೂರು, ಫೆ.19- ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಂದ ಟೀಮ್ ಇಂಡಿಯಾ ವೇಗಿ ಜಸ್‍ಪ್ರೀತ್ ಬುಮ್ರಾ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ರಾಜ್‍ಕೋಟ್ ಟೆಸ್ಟ್ ಪಂದ್ಯದಲ್ಲಿ 434 ರನ್‍ಗಳ ಅಂತರದ ಗೆಲುವು ಸಾಧಿಸಿದ ರೋಹಿತ್ ಶರ್ಮಾ ಪಡೆ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಸಿರುವುದರಿಂದ 4ನೇ ಟೆಸ್ಟ್ ಪಂದ್ಯದಿಂದ ಅನುಭವಿ ವೇಗಿ ಬುಮ್ರಾಗೆ ವಿಶ್ರಾಂತಿ ನೀಡಲು ಮುಂದಾಗಿದ್ದು ,5ನೇ ಟೆಸ್ಟ್ ಪಂದ್ಯದಲ್ಲೂ ಅವರು ಆಡುವುದು ಅನುಮಾನ. ವೈಝಾಗ್ ಟೆಸ್ಟ್‍ನಲ್ಲಿ 9 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಬುಮ್ರಾ ಒಟ್ಟಾರೆ 17 ವಿಕೆಟ್ ಕಬಳಿಸಿದ್ದಾರೆ.
ಮನೋಜ್ ತಿವಾರಿಗೆ ಚಿನ್ನದ ಬ್ಯಾಟ್ ಉಡುಗೊರೆ
ಕೋಲ್ಕತ್ತಾ, ಫೆ.19- ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಪಶ್ಚಿಮ ಬಂಗಾಳದ ನಾಯಕ ಮನೋಜ್ ತಿವಾರಿಗೆ ಚಿನ್ನದ ಬ್ಯಾಟ್ ಉಡುಗೊರೆ ನೀಡುವ ಮೂಲಕ ಬಂಗಾಳ ಕ್ರಿಕೆಟ್ ಮಂಡಳಿ ಗೌರವಿಸಿದೆ. ಗೌರವ ಸ್ವೀಕರಿಸಿ ಮಾತನಾಡಿದ ಮನೋಜ್ ತಿವಾರಿ ಅವರು 2017ರಲ್ಲಿ ಇದೇ ದಿನ ನಾನು ನಮ್ಮ ತಂದೆಯನ್ನು ಕಳೆದುಕೊಂಡೆ. ಆದರೆ ನನ್ನ ತಾಯಿ ಹಾಗೂ ಪತ್ನಿ ನನ್ನಲ್ಲಿ ಸೂರ್ತಿ ತುಂಬಿದ್ದರಿಂದ ಇಲ್ಲಿಯವರೆಗೂ ನಾನು ಕ್ರಿಕೆಟ್‍ನಲ್ಲಿ ಮುಂದುವರಿದಿದ್ದೆ, ಇಂದು ನನ್ನ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುತ್ತಿದ್ದು ಪಶ್ಚಿಮ ಬಂಗಾಳದ ಕ್ರಿಕೆಟ್ ಮಂಡಳಿಯಿಂದ ನನಗೆ ಗೌರವ ಸಲ್ಲಿಸಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಲೋಡ್ ಶೆಡ್ಡಿಂಗ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಕೆ.ಜೆ.ಜಾರ್ಜ್
ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭಿಸಿದಾಗ ನಾನು ಕೂಡ ಸೌರವ್ ಗಂಗೂಲಿ ರೀತಿ ಎಡಗೈ ಆಟಗಾರನಾಗಿದ್ದು ಅವರಂತೆಯೇ ಈಡನ್ ಗಾರ್ಡನ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಕೋಲ್ಕತ್ತಾದ ನಿಜವಾದ ರಾಜ(ಸೌರವ್‍ಗಂಗೂಲಿ)ನಂತೆ ಕ್ರಿಕೆಟ್ ಜೀವನದಲ್ಲಿ ಬೆಳೆಯಬೇಕೆಂದು ಎಂದು ಬಯಸಿದ್ದೆ ಎಂದು ಹೇಳಿದರು.
ತಮ್ಮ ಕ್ರಿಕೆಟ್ ಜೀವನದ ಕೊನೆಯ ಪಂದ್ಯದಲ್ಲೂ ಪಶ್ಚಿಮಬಂಗಾಳಕ್ಕೆ ತಮ್ಮ ನಾಯಕತ್ವದಲ್ಲಿಬಿಹಾರ ವಿರುದ್ಧ ಇನ್ನಿಂಗ್ಸ್ ಹಾಗೂ 204 ರನ್‍ಗಳ ಗೆಲುವು ತಂದುಕೊಟ್ಟಿದ್ದಾರೆ.