Saturday, November 23, 2024
Homeರಾಜ್ಯಕಾವೇರಿಗಾಗಿ ಕರೆನೀಡಿರುವ ಬಂದ್‍ ವಿರೋಧಿಸುವಂತೆ ಸಚಿವರಿಗೆ ಸಿಎಂ ಸಂದೇಶ

ಕಾವೇರಿಗಾಗಿ ಕರೆನೀಡಿರುವ ಬಂದ್‍ ವಿರೋಧಿಸುವಂತೆ ಸಚಿವರಿಗೆ ಸಿಎಂ ಸಂದೇಶ

ಬೆಂಗಳೂರು,ಸೆ.24- ಕಾವೇರಿ ನೀರಿಗಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ವಿರೋಧ ವ್ಯಕ್ತಪಡಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಸಂದೇಶ ರವಾನಿಸಿದ್ದಾರೆ. ಕಾವೇರಿ ನಾಡಿನ ಅಸ್ಮಿತೆಯಾಗಿದ್ದು, ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದು ಕನ್ನಡಿಯಷ್ಟೇ ಸತ್ಯವಾಗಿದೆ.

ಒಂದೆಡೆ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾದ ಅನಿವಾರ್ಯತೆ ಇದೆ. ಮತ್ತೊಂದೆಡೆ ಜಲಾಶಯಗಳಲ್ಲಿ ನೀರು ಬರಿದಾಗುತ್ತಿರುವುದರಿಂದ ನಮ್ಮ ಬೆಳೆ ಹಾಗೂ ಕುಡಿಯುವ ನೀರಿನ ಸಂಕಷ್ಟಗಳು ಹೆಚ್ಚಾಗುತ್ತಿದೆ. ಎಷ್ಟು ಬಾರಿ ಮನವಿ ಮಾಡಿದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿಲ್ಲ. ಪ್ರಧಾನಮಂತ್ರಿಯವರಿಗೆ ಸಮಯ ಕೇಳಿದರೂ ಸ್ಪಂದಿಸಿಲ್ಲ.

ಈ ವಿಷಯದಲ್ಲಿ ರಾಜ್ಯಸರ್ಕಾರ ಅಸಹಾಯಕವಾಗಿದೆ. ನ್ಯಾಯಾಲಯಗಳಿಗೆ, ನೀರು ಹಂಚಿಕೆಯ ಸಮಿತಿಗಳಿಗೆ ವಾಸ್ತವತೆಯನ್ನು ಮನವರಿಕೆ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ಜನಾಂದೋಲನ ನಡೆಯುತ್ತಿದೆ. ಇದನ್ನು ನಾವು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಬಂದ್ ಸೇರಿದಂತೆ ಯಾವುದೇ ಹೋರಾಟಗಳಿಗೆ ವಿರೋಧ ವ್ಯಕ್ತಪಡಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

BIG NEWS : ಸೆ.29 ರಂದು ‘ಕರ್ನಾಟಕ ಬಂದ್’ಗೆ ಕರೆಕೊಟ್ಟ ವಾಟಾಳ್

ಪ್ರತಿಭಟನಾಕಾರರು ಸಹಜವಾಗಿ ಕೇಂದ್ರದ ಜೊತೆ ರಾಜ್ಯಸರ್ಕಾರವನ್ನು ಟೀಕೆ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆಗಳಿಗೆ ನಾವು ಒಗ್ಗಿಕೊಳ್ಳಬೇಕು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದು, ಲೇವಡಿ ಮಾಡುವುದು, ಬೆದರಿಸುವುದು ಖಂಡಿಸುವಂತಹ ಪ್ರವೃತ್ತಿಗಳು ಬೇಡ. ಪ್ರಜಾಸತ್ತಾತ್ಮಕವಾಗಿ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುವವರಿಗೆ ಮುಕ್ತ ಸ್ವಾತಂತ್ರ್ಯವಿದೆ. ನಾವು ಅದನ್ನು ಗೌರವಿಸೋಣ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಬಂದ್‍ನಿಂದ ಬ್ರಾಂಡ್ ಬೆಂಗಳೂರಿಗೆ ಧಕ್ಕೆಯಾಗುತ್ತದೆ ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಕರವೇಯ ಪ್ರವೀಣ್‍ಶೆಟ್ಟಿ, ಕೆಲವು ಸಂಘಟನೆಗಳು ಬೆಂಗಳೂರು ಬಂದ್‍ಗೆ ಬಹಿರಂಗ ವಿರೋಧ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಹಿರಿಯರಾದ ವಾಟಾಳ್ ನಾಗರಾಜ್ ಹಾಗೂ ಮತ್ತಿತರರು ಸೆ.29 ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ.

ಹೀಗಾಗಿ ಬೆಂಗಳೂರು ಬಂದ್ ವಿಷಯದಲ್ಲೂ ಗೊಂದಲಗಳು ಸೃಷ್ಟಿಯಾಗಲಾರಂಭಿಸಿವೆ. ಕಾವೇರಿ ವಿಷಯದಲ್ಲಿ ಪ್ರತಿಭಟನೆ ನಡೆಯುತ್ತಿರುವುದರ ಬಗ್ಗೆ ಸರ್ಕಾರದಲ್ಲಿರುವ ಕೆಲವರು ಅಸಮಾಧಾನಗೊಂಡರೆ, ಪ್ರತಿಭಟನೆಗಳಿಂದ ರಾಜ್ಯಸರ್ಕಾರಕ್ಕೆ ಸಹಾಯವಾಗುತ್ತಿದೆ ಎಂಬ ಪ್ರತಿಪಾದನೆಯನ್ನು ಕೆಲವರು ಮಾಡುತ್ತಿದ್ದಾರೆ. ಈಗ ಬಂದ್‍ಗಳಲ್ಲೂ ಬೆಂಗಳೂರು, ಕರ್ನಾಟಕ ಎಂಬ ಗೊಂದಲಗಳು ಸೃಷ್ಟಿಯಾಗಿವೆ.

RELATED ARTICLES

Latest News