Friday, November 22, 2024
Homeಕ್ರೀಡಾ ಸುದ್ದಿ | Sportsಕಂಚು ಗೆದ್ದ ಭಾರತ ಮಹಿಳಾ ರಿಕರ್ವ್ ತಂಡ

ಕಂಚು ಗೆದ್ದ ಭಾರತ ಮಹಿಳಾ ರಿಕರ್ವ್ ತಂಡ

ಹ್ಯಾಂಗ್‍ಝೌ, ಅ 6 (ಪಿಟಿಐ) ಏಷ್ಯನ್ ಗೇಮ್ಸ್‍ನ ರಿಕರ್ವ್ ವಿಭಾಗದಲ್ಲಿ ಭಾರತದ ಬಿಲ್ಲುಗಾರರು 13 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದರು, ಅಂಕಿತಾ ಭಕತ್, ಸಿಮ್ರಂಜೀತ್ ಕೌರ್ ಮತ್ತು ಭಜನ್ ಕೌರ್‍ಅವರನ್ನೊಳಗೊಂಡ ಮಹಿಳಾ ತಂಡ ವಿಯೆಟ್ನಾಂ ಅನ್ನು ಸೋಲಿಸಿ ಇಲ್ಲಿ ನಡೆದ ಏಷ್ಯನ್ ಗೇಮ್ಸ್‍ನಲ್ಲಿ ಕಂಚು ಗೆದ್ದಿತು.

ಐದನೇ ಶ್ರೇಯಾಂಕದ ಮೂವರು ಮಹಿಳೆಯರು ತಮ್ಮ ವಿಯೆಟ್ನಾಂ ಪ್ರತಿಸ್ಪರ್„ಗಳಾದ ದೋ ಥಿ ಅನ್ ನ್ಗುಯೆಟ್ , ನ್ಗುಯೆನ್ ಥಿ ಥಾನ್ ನ್ಹಿ ಮತ್ತು ಹೊವಾಂಗ್ ವಾಂಗ್ ಥಾವೊ ಅವರನ್ನು 6-2 (56-52, 55-56, 57-50, 51-48) ಅಂತರದಿಂದ ಸೋಲಿಸಿ ಕಂಚು ಪದಕ ಪಡೆದುಕೊಂಡಿದೆ.

ಭಾರತಕ್ಕೆ ಇದು ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನಲ್ಲಿ ಆರ್ಚರಿಯಲ್ಲಿ ಅವರ ದಾಖಲೆಯ ಏಳನೇ ಪದಕವಾಗಿದೆ. ಅವರು ಈಗಾಗಲೇ ಸಂಯುಕ್ತ, ಮಿಶ್ರ, ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಮೂರು ತಂಡಗಳ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ವಿಜಯೇಂದ್ರಗೆ ಪಟ್ಟ ಕಟ್ಟಲು ಬಿಎಸ್‍ವೈ ಕಸರತ್ತು

ಅಭಿಷೇಕ್ ವರ್ಮಾ ಮತ್ತು ಓಜಸ್ ಡಿಯೋಟಾಲೆ ಅವರು ಸಂಯುಕ್ತ ವೈಯಕ್ತಿಕ ವಿಭಾಗದಲ್ಲಿ ಅಗ್ರ-ಎರಡು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಜ್ಯೋತಿ ಸುರೇಖಾ ವೆನ್ನಂ ಕೂಡ ಮಹಿಳಾ ಕಾಂಪೌಂಡ್ ವೈಯಕ್ತಿಕ ಫೈನಲ್‍ಗೆ ಪ್ರವೇಶಿಸಿದ್ದು, ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.ಗುವಾಂಗ್‍ಝೌ 2010ರ ನಂತರ ಏಷ್ಯನ್ ಗೇಮ್ಸ್‍ನಲ್ಲಿ ಒಲಿಂಪಿಕ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

2010 ರಲ್ಲಿ ಏಷ್ಯನ್ ಗೇಮ್ಸ್‍ನಲ್ಲಿ ಭಾರತ ಕೊನೆಯ ಬಾರಿಗೆ ರಿಕರ್ವ್ ವಿಭಾಗದಲ್ಲಿ ಪದಕವನ್ನು ಗೆದ್ದುಕೊಂಡಿತ್ತು, ಅವರು ವೈಯಕ್ತಿಕ ಬೆಳ್ಳಿ ಮತ್ತು ಪುರುಷರ ಮತ್ತು ಮಹಿಳೆಯರ ಟೀಮ್ ಈವೆಂಟ್‍ಗಳಲ್ಲಿ ತಂಡ ಕಂಚಿನ ಪದಕಗಳನ್ನು ಪಡೆದರು.

RELATED ARTICLES

Latest News