ಬೆಳಗಾವಿ, ಡಿ.12– ನಾಯಕತ್ವದ ವಿಚಾರವಾಗಿ ನಾನು ಏನು ಹೇಳಬೇಕಿತ್ತು ಅದನ್ನು ಹೇಳಿ ಆಗಿದೆ. ಪ್ರತ್ಯೇಕ ಡಿನ್ನರ್ ಮೀಟಿಂಗ್ ಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಏನನ್ನು ಹೇಳಬೇಕಿತ್ತು ಅದನ್ನು ಹೇಳಿದ್ದೇನೆ. ಬೇರೆಯವರು ನೀಡಿದ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು. ಬೆಳಗಾವಿಯಲ್ಲಿ ದಿನಕ್ಕೊಂದು ಡಿನ್ನರ್ ಮೀಟಿಂಗ್‌ಗಳಾಗುತ್ತಿರುತ್ತವೆ. ಅದಕ್ಕೆ ನಾನು ಏನೂ ಮಾಡಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ಔತಣಕೂಟಕ್ಕೆ ಪ್ರತಿಕ್ರಿಯಿಸಿದರು.
