Sunday, December 14, 2025
Homeಜಿಲ್ಲಾ ಸುದ್ದಿಗಳುಭದ್ರಾವತಿಯಲ್ಲಿ ಡಬಲ್ ಮರ್ಡರ್

ಭದ್ರಾವತಿಯಲ್ಲಿ ಡಬಲ್ ಮರ್ಡರ್

Double murder in Bhadravati

ಭದ್ರಾವತಿ,ಡಿ.13- ಜಗಳ ಬಿಡಿಸಲು ಹೋದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಜೈಬೀಮ್‌ ಬಡಾವಣೆಯಲ್ಲಿ ನಡೆದಿದೆ. ನಗರದ ಕಿರಣ್‌ (25), ಮಂಜುನಾಥ್‌ (45) ಹತ್ಯೆಯಾದ ಯುವಕರು.

2 ದಿನದ ಹಿಂದೆ ಮನೆ ತೊರೆದಿದ್ದ ಪ್ರೇಮಿಗಳು ನಿನ್ನೆ ಸಂಜೆ ಹಳೆ ಪೊಲೀಸ್‌‍ ಠಾಣೆಗೆ ಬಂದು ರಕ್ಷಣೆ ಕೇಳಿದ್ದರು.ಈ ವೇಳೆ ಹುಡುಗಿಯ ಸಹೋದರ ಹಾಗು ಆತನ ಸ್ನೇಹಿತರು ಜಗಳ ಆರಂಭಿಸಿದ್ದಾರೆ. ಈ ವೇಳೆ ಜಗಳ ನಿಲ್ಲಿಸಲು ಹೋದಾಗ ನೀವು ಪ್ರಚೇದನೆ ನೀಡಿ ಪ್ರೀತಿ -ಪೇಮಕ್ಕೆ ಸಹಕರಿಸಿದ್ದೀರ ಎಂದು ಕಿರಣ್‌ ಮತ್ತು ಮಂಜುನಾಥ್‌ಗೆ ಚಾಕುವಿನಿಂದ ಇರಿದಿದ್ದಾರೆ.

ಹುಡುಗಿ ಹುಡುಗನ ಜೊತೆ ಓಡಿ ಹೋಗುವಾಗ ಇವರಿಬ್ಬರು ಬೆಂಬಲ ನೀಡಿದ್ದಾರೆಂದು ಆರೋಪಿಸಿ ಜೋಡಿ ಕೊಲೆ ನಡೆದಿದೆ. ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಪೊಲೀಸರು ಭದ್ರಾವತಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

RELATED ARTICLES

Latest News