Saturday, November 23, 2024
Homeರಾಷ್ಟ್ರೀಯ | Nationalಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪಾಂಡೆ

ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪಾಂಡೆ

ಲಕ್ನೋ,ಫೆ.27- ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕರೆದಿದ್ದ ಸಭೆಗೆ ಗೈರು ಹಾಜರಾದ ಒಂದು ದಿನದ ನಂತರ ಸಮಾಜವಾದಿ ಪಕ್ಷದ ಶಾಸಕ ಮನೋಜ್ ಕುಮಾರ್ ಪಾಂಡೆ ಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಎಂಟು ಬಿಜೆಪಿ ಅಭ್ಯರ್ಥಿಗಳು ಮತ್ತು ಸಮಾಜವಾದಿ ಪಕ್ಷದ ಮೂವರು ಕಣದಲ್ಲಿದ್ದಾರೆ.

ಯಾದವ್ಗೆ ಬರೆದ ಪತ್ರದಲ್ಲಿ ಎಸ್ಪಿ ನಾಯಕ, ನೀವು ನನ್ನನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯ ಸಚೇತಕನನ್ನಾಗಿ ನೇಮಿಸಿದ್ದೀರಿ. ನಾನು ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿ ಎಂದು ಮನವಿ ಮಾಡಿದ್ದಾರೆ. ಪಾಂಡೆ ಅವರು ರಾಯ್ಬರೇಲಿಯ ಉಂಚಹಾರ್ ಕ್ಷೇತ್ರದ ಶಾಸಕರಾಗಿದ್ದಾರೆ. ಹಿಂದಿನ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಅವರು ಕ್ಯಾಬಿನೆಟ್ ಸಚಿವರಾಗಿದ್ದರು.

ಲೋಕಸಭಾ ಚುನಾವಣೆಗೆ ಮೈಸೂರಿನಿಂದ 26.55 ಲಕ್ಷ ಅಳಿಸಲಾಗದ ಶಾಯಿ ಪೂರೈಕೆ

ಯಾದವ್ ಸೋಮವಾರ ಕರೆದಿದ್ದ ಸಭೆಗೆ ಎಂಟು ಎಸ್ಪಿ ಶಾಸಕರು ಹಾಜರಾಗಿರಲಿಲ್ಲ. ರಾಜ್ಯಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲು ಪಕ್ಷದ ಮುಖ್ಯಸ್ಥರು ಸಭೆ ಕರೆದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಎಸ್ಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ಪಾಂಡೆ ಮತ್ತು ಇತರ ಏಳು ಶಾಸಕರು ಮುಖೇಶ್ ವರ್ಮಾ, ಮಹಾರಾಜಿ ಪ್ರಜಾಪತಿ, ಪೂಜಾ ಪಾಲ, ರಾಕೇಶ್ ಪಾಂಡೆ, ವಿನೋದ್ ಚತುರ್ವೇದಿ, ರಾಕೇಶ್ ಪ್ರತಾಪ್ ಸಿಂಗ್ ಮತ್ತು ಅಭಯ್ ಸಿಂಗ್ ಅವರು ಸಭೆಗೆ ಹಾಜರಾಗಲಿಲ್ಲ. ಎಸ್ಪಿಯ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧರಿ, ಯಾದವ್ ಕರೆದಿದ್ದ ಭೋಜನ ಮತ್ತು ಸಭೆಗೆ ಎಂಟು ಶಾಸಕರು ಹಾಜರಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಶಾಸಕರ ಹೆಸರು ಬಹಿರಂಗಪಡಿಸಲಿಲ್ಲ.

RELATED ARTICLES

Latest News