Homeಕ್ರೀಡಾ ಸುದ್ದಿಕಾಮನ್‌ವೆಲ್ತ್‌‍ ಕ್ರೀಡಾಕೂಟ : ದಾಖಲೆ 7 ಚಿನ್ನದ ಪದಕ ಬಾಚಿದ ಭಾರತದ ಬಾಕ್ಸರ್‌ಗಳು

ಕಾಮನ್‌ವೆಲ್ತ್‌‍ ಕ್ರೀಡಾಕೂಟ : ದಾಖಲೆ 7 ಚಿನ್ನದ ಪದಕ ಬಾಚಿದ ಭಾರತದ ಬಾಕ್ಸರ್‌ಗಳು

India's record-breaking Day at CWG: Boxers bag 7 gold

ಗ್ಲಾಸ್ಗೋ, ಆ.1-ಕಾಮನ್‌ವೆಲ್ತ್‌‍ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್‌ಗಳು ದಾಖಲೆಯ ಏಳು ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದು, ಜೂಡೋ ಹಾಗೂ ಪ್ಯಾರಾ ಅಥ್ಲೀಟ್‌ಗಳೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಅತ್ಯಂತ ಯಶಸ್ವಿ ದಿನವಾಗಿ ಪರಿಣಮಿಸಿತು.

ಸ್ಪರ್ಧೆಯ ಅಂತಿಮ ದಿನಕ್ಕೂ ಮುನ್ನ ಭಾರತ ಒಟ್ಟು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು ಸೇರಿದಂತೆ 39 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.62 ಚಿನ್ನದೊಂದಿಗೆ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ (26 ಚಿನ್ನ) ಮತ್ತು ಕೆನಡಾ (18 ಚಿನ್ನ) ನಂತರದ ಸ್ಥಾನಗಳಲ್ಲಿವೆ.

ಭಾರತ ಗೆದ್ದ ಎಂಟು ಚಿನ್ನದ ಪದಕಗಳಲ್ಲಿ ಏಳನ್ನು ಬಾಕ್ಸರ್‌ಗಳು ಗೆದ್ದಿದ್ದು, ಉಳಿದ ಒಂದು ಚಿನ್ನವನ್ನು ಪುರುಷರ ಎಫ್‌‍-57 ಪ್ಯಾರಾ ಶಾಟ್‌ಪುಟ್‌‍ ಸ್ಪರ್ಧೆಯಲ್ಲಿ ಸೋಮನ್‌ ರಾಣಾ ಗೆದ್ದರು.ಬಾಕ್ಸಿಂಗ್‌ನಲ್ಲಿ ಐತಿಹಾಸಿಕ ಸಾಧನೆ;ಭಾರತದ ಮಹಿಳಾ ಬಾಕ್ಸರ್‌ಗಳು ಐದು ಚಿನ್ನದ ಪದಕಗಳನ್ನು ಗೆದ್ದು ಮಿಂಚಿದರು. ಹಾಲಿ ವಿಶ್ವ ಚಾಂಪಿಯನ್‌ ಜೈಸ್ಮಿನ್‌ ಲಂಬೋರಿಯಾ (57 ಕೆಜಿ), ಪ್ರೀತಿ ಪವಾರ್‌ (54 ಕೆಜಿ), ಪ್ರಿಯಾ ಘಂಘಾಸ್‌‍ (60 ಕೆಜಿ), ಸಾಕ್ಷಿ ಚೌಧರಿ (51 ಕೆಜಿ) ಹಾಗೂ ಅರುಂಧತಿ ಚೌಧರಿ (70 ಕೆಜಿ) ಚಿನ್ನ ತಮದಾಗಿಸಿಕೊಂಡರು.

ಒಲಿಂಪಿಕ್‌ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್‌ (75 ಕೆಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.ಪುರುಷರ ವಿಭಾಗದಲ್ಲಿ ಸಚಿನ್‌ ಸಿವಾಚ್‌ (60 ಕೆಜಿ) ಹಾಗೂ ಅಂಕುಶ್‌ ಪಂಘಾಲ್‌ (70 ಕೆಜಿ) ಚಿನ್ನ ಗೆದ್ದರೆ, ಜಾದುಮನಿ ಸಿಂಗ್‌ (55 ಕೆಜಿ) ಮತ್ತು ನರೇಂದರ್‌ ಬೆರ್ವಾಲ್‌ (+90 ಕೆಜಿ) ಬೆಳ್ಳಿ ಪದಕ ಗಳಿಸಿದರು.

ಈ ಮೂಲಕ ಭಾರತ ಬಾಕ್ಸಿಂಗ್‌ನಲ್ಲಿ 7 ಚಿನ್ನ ಮತ್ತು 3 ಬೆಳ್ಳಿ ಸೇರಿ ಒಟ್ಟು 10 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಇದಕ್ಕೂ ಮುನ್ನ 2018ರ ಗೋಲ್‌್ಡ ಕೋಸ್ಟ್‌ ಕ್ರೀಡಾಕೂಟದಲ್ಲಿ ಭಾರತ ಮೂರು ಚಿನ್ನ ಸೇರಿದಂತೆ ಏಳು ಪದಕ ಗೆದ್ದಿದ್ದು, ಅದೇ ಅತ್ಯುತ್ತಮ ಸಾಧನೆಯಾಗಿತ್ತು.

RELATED ARTICLES
spot_img

Latest News