Friday, November 22, 2024
Homeರಾಜ್ಯಧಾರ್ಮಿಕ ಸಂಸ್ಥೆಗಳ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಧಾರ್ಮಿಕ ಸಂಸ್ಥೆಗಳ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಬೆಂಗಳೂರು,ಫೆ.29- ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ಮತ್ತು ವಿಧಾನಪರಿಷತ್ನಿಂದ ತಿರಸ್ಕøತಗೊಂಡ ರೂಪದಲ್ಲಿ ಇದ್ದ 2024 ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿತು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು ವಿಧೇಯಕವನ್ನು ಸದನದಲ್ಲಿ ಮಂಡಿಸಿ ಪುನರ್ ಪರ್ಯಾಲೋಚಿಸಬೇಕು ಎಂದು ಕೋರಿದರು. ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್ ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.

ಈ ವಿಧೇಯಕವು ಗ್ರೂಪ್ ಎ ದೇವಾಲಯಗಳ ಅಕಾರ ಕ್ಷೇತ್ರ ವ್ಯಾಪ್ತಿಯೊಳಗೆ ಯಾತ್ರಾರ್ಥಿಗಳಿಗೆ ಸುರಕ್ಷತೆಯನ್ನು ಕಲ್ಪಿಸಲು ನಿರ್ಮಾಣ ಮತ್ತು ನಿರ್ವಹಣೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು, ಪುನರ್ ಪರಿಶೀಲಿಸಲು ಮತ್ತು ಪ್ರಸ್ತಾವನೆಗಳನ್ನು ಸಲ್ಲಿಸಲು ಜಿಲ್ಲಾ ಹಾಗೂ ರಾಜ್ಯಮಟ್ಟದ ಉನ್ನತ ಸಮಿತಿಗಳನ್ನು ರಚಿಸುವ ಉದ್ದೇಶ ಒಳಗೊಂಡಿದೆ.

ಅಲ್ಲದೆ ಸಾಮಾನ್ಯ ಸಂಗ್ರಹಣಾ ನಿಯ ಮೊತ್ತವನ್ನು ಹೆಚ್ಚಿಸಲು, ಅಸೂಚಿತ ಸಂಸ್ಥೆಯ ವ್ಯವಸ್ಥಾಪನಾ ಸಮಿತಿಯಲ್ಲಿ ವಿಶ್ವ ಕರ್ಮ ಹಿಂದೂ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಶಾಸ್ತ್ರದಲ್ಲಿ ಕೌಶಲ್ಯ ಉಳ್ಳ ವ್ಯಕ್ತಿಯನ್ನು ಸೇರಿಸುವ ಉದ್ದೇಶ ಒಳಗೊಂಡಿದೆ.

RELATED ARTICLES

Latest News