Saturday, November 23, 2024
Homeರಾಜ್ಯಮಾ.3ರಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ 19ನೇ ಘಟಿಕೋತ್ಸವ

ಮಾ.3ರಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ 19ನೇ ಘಟಿಕೋತ್ಸವ

ಮೈಸೂರು, ಮಾ. 1- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19ನೇ ಘಟಿಕೋತ್ಸವ ಮಾರ್ಚ್ 3ರಂದು ನಡೆಯಲಿದೆ ಎಂದು ಮುಕ್ತ ವಿವಿಯ ಕುಲಪತಿ ಪ್ರೊ. ಶರಣಪ್ಪ ಅವರು ತಿಳಿಸಿದ್ದಾರೆ. ನಗರದ ಮುಕ್ತಗಂಗೋತ್ರಿಯಲ್ಲಿ ರುವ ಕೆಎಸ್ಒಯು ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರೊ. ಶರಣಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದರು. ಈ ಬಾರಿಯ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ ಎಂದವರು ತಿಳಿಸಿದರು.

ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಡಾ. ಹೆಚ್‌ಸಿ ಸತ್ಯನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆಎಂ ವೀರೇಶ್ ಹಾಗೂ ಎಸ್ ಬಿ ಸಿ ಶಿಕ್ಷಣ ಕಾರ್ಯದರ್ಶಿ ಮೀರ ಶಿವಲಿಂಗಯ್ಯ ಅವರುಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಗುತ್ತಿದೆ ಎಂದವರು ಈ ಸಂದರ್ಭದಲ್ಲಿ ತಿಳಿಸಿದರು. 10276 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 7,869 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದವರು ತಿಳಿಸಿದರು. 30 ಮಂದಿಗೆ ಚಿನ್ನದ ಪದಕ, 37 ಮಂದಿಗೆ ನಗದು ಬಹುಮಾನ ವಿತರಿಸಲಾಗುತ್ತದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರೀಕ್ಷಾಂಕಗಳು ಸಚಿವ ಪ್ರೊ. ಕೆಬಿ ಪ್ರವೀಣ್, ಕುಲ ಸಚಿವ ಪ್ರೊ. ಕೆ ಎಲ್ ಎನ್ ಮೂರ್ತಿ ಡೀನ್ ಅಕಾಡೆಮಿಕ್ ಪ್ರೊ. ಲಕ್ಷ್ಮಿ, ಡೀನ್ ಸ್ಟಡಿ ಸೆಂಟರ್ ಪ್ರೊ. ರಾಮನಾಥನ್ ನಾಯ್ಡು, ಪ್ರಭಾರ ಹಣಕಾಸು ಅಧಿಕಾರಿ ಡಾ. ಬಿ ಎಂ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News