ನಿತ್ಯ ನೀತಿ : ಅಧರ್ಮದಿಂದ ಕೆಲವು ವೇಳೆ ಬಹಳ ಏಳಿಗೆ ಹೊಂದುತ್ತಾನೆ. ಉತ್ತಮ ಸುಖಗಳನ್ನು ಕಾಣುತ್ತಾನೆ. ತನ್ನ ವಿರೋಧಿಗಳನ್ನೂ ಮೀರಿಸುತ್ತಾನೆ. ಆದರೆ ಬುಡ ಸಹಿತ ನಾಶವಾಗುವುದು ಸಹಜ.
ಪಂಚಾಂಗ ಸೋಮವಾರ 04-03-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ವಜ್ರ / ಕರಣ: ತೈತಿಲ
ಸೂರ್ಯೋದಯ : ಬೆ.06.34
ಸೂರ್ಯಾಸ್ತ : 06.29
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00
ರಾಶಿ ಭವಿಷ್ಯ
ಮೇಷ: ಬಹಳ ದಿನಗಳ ಕನಸನ್ನು ನನಸು ಮಾಡುವ ಅವಕಾಶಗಳು ಲಭಿಸಲಿವೆ.
ವೃಷಭ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಮಿಥುನ: ಸಮಾಜದಲ್ಲಿ ಕೀರ್ತಿ, ಗೌರವ ದೊರೆಯಲಿದೆ. ಮಾನಸಿಕ ಒತ್ತಡ ನಿಯಂತ್ರಿಸಲು ಧ್ಯಾನ ಮಾಡಿ.
ಕಟಕ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.
ಸಿಂಹ: ಮದುವೆಯ ಸಲುವಾಗಿ ವಸ್ತ್ರಾಭರಣ ಖರೀದಿ ಮಾಡುವಿರಿ.
ಕನ್ಯಾ: ಹತ್ತಿರದ ಸ್ನೇಹಿತ ರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.
ತುಲಾ: ವ್ಯವಹಾರದಲ್ಲಿ ಮೂರನೆ ವ್ಯಕ್ತಿಯೊಬ್ಬರ ಆಗಮನವಾಗುವುದರಿಂದ ಅಪಾಯ ಹೆಚ್ಚಾಗಲಿದೆ.
ವೃಶ್ಚಿಕ: ದಾಂಪತ್ಯದಲ್ಲಿ ಅನ್ಯೋನ್ಯತೆ ಇರಲಿದೆ. ಕೆಟ್ಟ ಆಲೋಚನೆ ಬೇಡ.
ಧನುಸ್ಸು: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.
ಮಕರ: ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಚಿಂತೆಗೆ ಅವಕಾಶವಿಲ್ಲ.
ಕುಂಭ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತೀರಿ.
ಮೀನ: ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಪ್ರಗತಿ ಸಾಧಿಸುವಿರಿ. ಅಧಿಕ ಖರ್ಚು ಮಾಡುವಿರಿ.