ನವದೆಹಲಿ,ಆ. 13- ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಸ್ಪರ್ಧಿ ಒಬ್ಬರಿಗೆ ರಾಕಿಂಗ್ ಸ್ಟಾರ್ ಯಶ್ ಕುರಿತು ಪ್ರಶ್ನೆ ಕೇಳಲಾಗಿದೆ.
ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಮೆಘಾ ಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ಕುರಿತು ಪ್ರಶ್ನೆಗಳನ್ನು ಕೇಳಲಾಗಿದ್ದು, ಯಶ್‌ಗೆ ಇರುವ ಬಿರುದೇನು ಎಂಬ ಪ್ರಶ್ನೆಯನ್ನು ಬಿಗ್ ಬಿ ಸ್ಪರ್ಧಿಗೆ ಕೇಳಿದ್ದು, ಅದಕ್ಕೆ ರಾಕಿಂಗ್ ಸ್ಟಾರ್ ಎಂದು ಸರಿಯಾದ ಉತ್ತರ ನೀಡಿದ್ದಾರೆ.
ರಾಮಾಯಣ ಸಿನಿಮಾ ಮೂಲಕ ಯಶ್ ಬಾಲಿವುಡ್‌ಗೆ ಲಗ್ಗೆ ಇಟ್ಟಿದ್ದು, ಜನತಾ ಕಿ ಅದಾಲತ್‌ನಂತಹ ಬಹು ದೊಡ್ಡ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಗಮನ ಸೆಳೆದಿದ್ದರು.
