Tuesday, April 15, 2025
Homeರಾಜ್ಯಸುದೀರ್ ಮುರೊಳ್ಳಿಗೆ ಎಂಪಿ ಟಿಕೆಟ್ ನೀಡಲು ಒತ್ತಾಯ

ಸುದೀರ್ ಮುರೊಳ್ಳಿಗೆ ಎಂಪಿ ಟಿಕೆಟ್ ನೀಡಲು ಒತ್ತಾಯ

ಚಿಕ್ಕಮಗಳೂರು, ಮಾ.9- ಶೃಂಗೇರಿಯ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಭೆನಡೆಸಿ ಸುದೀರ್ ಮುರೊಳ್ಳಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ರಾಜ್ಯದ ಹಾಗು ರಾಷ್ಟ್ರದ ನಾಯಕರನ್ನು ಒತ್ತಾಯಿಸಲಾಯಿತು. ಪಕ್ಷಕ್ಕಾಗಿ ದುಡಿಯುತ್ತಿರುವ ಹಾಗು ರಾಜಕಾರಣ , ಸಾಹಿತ್ಯ , ಕಾನೂನು , ಆಡಳಿತ , ಎಲ್ಲದರಲ್ಲೂ ಅನುಭವ ವಿರುವ ಯುವ ಮುಂದಾಳು ಮುರೊಳ್ಳಿಗೆ ಟಿಕೆಟ್ ಕೊಟ್ಟರೆ ಎರಡು ಜಿಲ್ಲೆಯ ಜನ ತುಂಬಾ ಹುರುಪಿನಿಂದ ಕೆಲಸ ಮಾಡುತ್ತಾರೆ ಹಾಗಾಗಿ ಮುರೊಳ್ಳಿಗೆ ಟಿಕೆಟ್ ಕೊಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.

ಈಗಾಗಲೇ ಉಡುಪಿಯಾ ಪರಾಜಿತ ಅಭ್ಯರ್ಥಿಗಳು ಉಡುಪಿ ಜಿಲ್ಲಾ ಯುವ ಅಧ್ಯಕ್ಷರು ,ಉಡುಪಿ ಬ್ಲಾಕ ಅದ್ಯಕ್ಶರು , ಏನ್ ಎಸ್ ಐ ಯು ಅಧ್ಯಕ್ಷರು, ಚಿಕ್ಕಮಗಳೂರಿನ ಶಾಸಕರುಗಳು ಸುದೀರ್ ಮುರೊಳ್ಳಿಗೆ ಬೆಂಬಲ ನೀಡಿದ್ದು ಜೊತೆಗೆ ಶೃಂಗೇರಿ ಕ್ಷೇತ್ರದ ಟಿ ಡಿ ರಾಜೇಗೌಡರು ಮುಖ್ಯಮಂತ್ರಿ ,ಉಪ ಮುಖ್ಯ ಮಂತ್ರಿಗಳಿಗೆ , ಪತ್ರ ಬರೆದು ಸುದೀರ್ ಮುರೊಳ್ಳಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದಾರೆ ಹಾಗಾಗಿ ಕಾರ್ಯಕರ್ತರಾಗಿ ನಾವು ಕೂಡ ಸಭೆನಡೆಸಿ ವರಿಷ್ಠರಿಗೆ ಒತ್ತಾಯಿಸುತ್ತಿದ್ದೇವೆ ಎಂದು ಸಭೆಯಲ್ಲಿ ನೆರೆದಿದ್ದ ಎಲ್ಲಾ ಕಾರ್ಯಕರ್ತರು ಒಕ್ಕೊರಲಿನಿಂದ ತಿಳಿಸಿದರು.

RELATED ARTICLES

Latest News